ಹಗರಿಬೊಮ್ಮನಹಳ್ಳಿ: ಪ್ರತಿಯೊಬ್ಬರು ಪಕ್ಷಾತೀತವಾಗಿ ಸಮಾಜ ಕಟ್ಟಬೇಕಿದೆ. ಮಕ್ಕಳಿಗೆ ಸಂಸ್ಕಾರದ ಜತೆಗೆ ಉತ್ತಮ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ವಸತಿ ನಿಲಯ ಆರಂಭಿಸಬೇಕು ಎಂದು ತಿಂಥಣಿ ಬ್ರಿಡ್ಜ್ ಕನಕಗುರು ಪೀಠದ ಸಿದ್ದರಾಮಾನಂದ ಮಹಾಸ್ವಾಮಿ ತಿಳಿಸಿದರು.
ಶಾಸಕ ಕೆ.ನೇಮರಾಜ ನಾಯ್ಕ ಮಾತನಾಡಿ, ಹಾಲುಮತ ಸಮಾಜದ ಸಮಗ್ರ ಪ್ರಗತಿಗೆ ಅಗತ್ಯ ನೆರವು ನೀಡಲಾಗುವುದು. ಸುಸಜ್ಜಿತ ಸಮುದಾಯ ಭವನ ನಿರ್ಮಿಸುವ ನಿಟ್ಟಿನಲ್ಲಿ ಕೋಟಿ ರು. ಅನುದಾನ ಒದಗಿಸಲಾಗಿದೆ ಎಂದರು.
ನಂದಿಪುರ ಡಾ.ಮಹೇಶ್ವರ ಸ್ವಾಮೀಜಿ ಮುಖಂಡ ಬಸವರಾಜ ಮಾತನಾಡಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಶಿವರಾಜ ಮೈನಳ್ಳಿ ಅಧ್ಯಕ್ಷತೆ ವಹಿಸಿದ್ದರು. ಕೊಟ್ರಯ್ಯ ಒಡೆಯರ್, ಸಮಾಜದ ಮುಖಂಡರಾದ ಮುಟುಗನಹಳ್ಳಿ ಕೊಟ್ರೇಶ್, ಸೊನ್ನದ ಮಹೇಶ, ಮೈಲಾರಪ್ಪ, ಬಣಕಾರ ಗೋಣೆಪ್ಪ, ಬಂಡಾರಿ ಭರ್ಮಪ್ಪ, ಕೋಗಳಿ ಹನುಮಂತಪ್ಪ, ಝಳಿಕಿ ಗುರುಬಸಪ್ಪ ಇತರರಿದ್ದರು. ತಾಲೂಕು ವಕೀಲರ ಸಂಘದ ಉಪಾಧ್ಯಕ್ಷ ಬಿ.ಎಂ.ಆಂಜನೇಯ, ಶಿಕ್ಷಕಿ ಶಾರದಾ ಮಂಜುನಾಥ ನಿರ್ವಹಿಸಿದರು. ಇದಕ್ಕೂ ಮುನ್ನ ಪಟ್ಟಣದ ಪ್ರಮುಖ ಬೀದಿಗಳಲ್ಲಿ ೫೦೧ ಕುಂಭಗಳೊಂದಿಗೆ ಕನಕದಾಸರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ನಡೆದ ಕನಕದಾಸರ ೫೩೮ನೇ ಜಯಂತ್ಯುತ್ಸವ ನಿಮಿತ್ತ ಪ್ರಮುಖ ಬೀದಿಗಳಲ್ಲಿ ಕನಕದಾಸರ ಭಾವಚಿತ್ರದ ಮೆರವಣಿಗೆಗೆ ಶಾಸಕ ಕೆ.ನೇಮರಾಜ ನಾಯ್ಕ ಚಾಲನೆ ನೀಡಿದರು.