ವಿಕಲಚೇತನ ಪುನರ್ವಸತಿ ಕಾರ್ಯಕರ್ತರಿಗೆ ಸೇವಾ ಭದ್ರತೆ ಅಗತ್ಯ

KannadaprabhaNewsNetwork |  
Published : Dec 16, 2025, 02:30 AM IST
ಹರಪನಹಳ್ಳಿಯಲ್ಲಿ ವಿಕಲ ಚೇತನ ಪುನರವಸತಿ ಯೋಜನೆಯ ಕಾರ್ಯಕರ್ತರಿಂದ ಶಾಸಕಿ ಎಂ.ಪಿ.ಲತಾ ಅವರಿಗೆ ವಿವಿದ ಭೇಡಿಕೆಗಳ ಈಡೇರಿಕೆಗಾಗಿ ಸರ್ಕಾರದ ಗಮನ ಸೆಳೆಯಲು ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಅಂಗವಿಕಲ️ರ ಗ್ರಾಮೀಣ ಪುನರ್‌ ವಸತಿ ಕಾರ್ಯಕ್ರಮ ಎಂಬ ಮಹಾತ್ವಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸಿದೆ.

ಹರಪನಹಳ್ಳಿ: ರಾಜ್ಯ ವಿಕಲಚೇತನರ ಪುನರ್‌ ವಸತಿ ಯೋಜನೆಯಡಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಇಲ್ಲಿಯ ಶಾಸಕರಿಗೆ ಎಂಆರ್‌ಡಬ್ಲು, ವಿಆರ್‌ಬ್ಲು, ಯುಆರ್‌ಡಬ್ಲು, ರಾಜ್ಯ ಒಕ್ಕೂಟದ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸಂಚಾಲಕ ಆರ್. ಧನರಾಜ್, ರಾಜ್ಯ ಸರ್ಕಾರವು ಸಮಗ್ರ ವಿಕಲ️ಚೇತನರ ಪುನರ್‌ ವಸತಿಗಾಗಿ ಎನ್ಪಿಆರ್ಪಿಡಿ ಯೋಜನೆಯನ್ನು ರಾಜ್ಯ ವಲ️ಯ ಯೋಜನೆಯನ್ನಾಗಿ 2007-08ನೇ ಅಂಗವಿಕಲ️ರ ಗ್ರಾಮೀಣ ಪುನರ್‌ ವಸತಿ ಕಾರ್ಯಕ್ರಮ ಎಂಬ ಮಹಾತ್ವಕಾಂಕ್ಷಿ ಯೋಜನೆಯನ್ನು ಜಾರಿಗೊಳಿಸಿ, ಅನುಷ್ಠಾನಗೊಳಿಸಿದೆ ಎಂದರು.

ಪ್ರಸ್ತುತ 5860 ವಿಆರ್‌ಡಬ್ಲು ರವರು 225 ತಾಲೂಕುಗಳ ಪೈಕಿ 175 ಎಂಆರ್‌ಡಬ್ಲು ರವರು 2018ರಿಂದ 613 ನಗರಸಭೆ, ಪುರಸಭೆ, ಮಹಾನಗರ ಪಾಲಿಕೆಗಳ ಪೈಕಿ 380 ಯುಆರ್‌ಡಬ್ಲು ನೇಮಕಗೊಂಡು ಕಳೆದ 17 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿವೆ. ಒಟ್ಟು 6422 ಕಾರ್ಯಕರ್ತರು ಇದ್ದು, ಪ್ರಸ್ತುತ ಎಂಆರ್‌ಡಬ್ಲು ಅವರಿಗೆ ₹16 ಸಾವಿರ ಹಾಗೂ ಯುಆರ್‌ಡಬ್ಲು, ವಿಆರ್‌ಡಬ್ಲು ಅವರಿಗೆ ₹10 ಸಾವಿರ ಗೌರವ ವೇತನವನ್ನು ಪಾವತಿಸುತ್ತಿದೆ.

ಕಳೆದ 17 ವರ್ಷಗಳಿಂದ ವಿಕಲ️ಚೇತನರು ಮತ್ತು ಹಿರಿಯ ನಾಗರಿಕರಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಂಆರ್‌ಡಬ್ಲು, ವಿಆರ್‌ಡಬ್ಲು, ಯುಆರ್‌ಡಬ್ಲು ಅವರ ಅವಿರತ ಶ್ರಮದಿಂದಾಗಿ ಇಂದು ಕಟ್ಟಕಡೆಯ ವಿಕಲ️ಚೇತನರನ್ನು ಗುರುತಿಸಿ, ಅವರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರಿಗೆ ಆರ್ಥಿಕ ಸಾಮಾಜಿಕ, ಶೈಕ್ಷಣಿಕ, ವೈದ್ಯಕೀಯ, ಔದ್ಯೋಗಿಕ ಪುರ‍್ವಸತಿ ಕಲ್ಪಿಸುತ್ತೇವೆ.

ತಾಲೂಕು ಅಧ್ಯಕ್ಷ ಡಿ.ಪೊನ್ನ ನಾಯ್ಕ, ಇಒ ಚಂದ್ರಶೇಖರ, ತಹಶೀಲ್ದಾರ ಗಿರೀಶಬಾಬು, ಪುನರ್ವಸತಿ ಕಾರ್ಯಕರ್ತರಾದ ನೇಮ ನಾಯ್ಕ, ಬಸವರಾಜ ನಂದೀಶ್, ಕವಿತಾ, ಗೀತಾ, ಮಂಜಮ್ಮ ರೇಣುಕಾ ಆರ್ ರೆಡ್ಡಿ ಮಂಜಪ್ಪ, ನಿಂಗಪ್ಪ, ಜ್ಯೋತೆಪ್ಪ ದುರುಗಪ್ಪ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!