ಮಕ್ಕಳಿಗೆ ಉತ್ತಮ ಶಿಕ್ಷಣ, ಸಂಸ್ಕಾರ ನೀಡಿ:ಶ್ರೀನಿವಾಸ

KannadaprabhaNewsNetwork |  
Published : Sep 25, 2024, 12:55 AM IST

ಸಾರಾಂಶ

ಶಿಕ್ಷಣಕ್ಕೆ ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯವನ್ನು ಉಜ್ವಲಗೊಳಿಸುವಂತ ಶಕ್ತಿ ಇದೆ

ಗದಗ: ಪಾಲಕ ಪೋಷಕರು ಮಕ್ಕಳಿಗೆ ಉತ್ತಮ ಶಿಕ್ಷಣದೊಂದಿದೆ, ಸಂಸ್ಕೃತಿ, ಧಾರ್ಮಿಕ ಸಂಸ್ಕಾರವನ್ನು ನೀಡಬೇಕು ಎಂದು ವಿದ್ಯಾದಾನ ಸಮಿತಿಯ ಕಾರ್ಯದರ್ಶಿ ಶ್ರೀನಿವಾಸ ಹುಯಿಲಗೋಳ ಹೇಳಿದರು.

ಅವರು ನಗರದ ವಿಡಿಎಸ್‌ಟಿಸಿ ಪ್ರೌಢ ಶಾಲೆಯ ಸಭಾಂಗಣದಲ್ಲಿ ಜಿಲ್ಲಾ ದಿಗಂಬರ ಜೈನ ಸಂಘದಿಂದ ನಡೆದ ದಶಲಕ್ಷಣ ಪರ್ವಾಚರಣೆಯ ಸಾಮೂಹಿಕ ಕ್ಷಮಾವಳಿ ಹಾಗೂ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ,ಶಿಕ್ಷಣಕ್ಕೆ ವ್ಯಕ್ತಿಯ ವ್ಯಕ್ತಿತ್ವ, ಭವಿಷ್ಯವನ್ನು ಉಜ್ವಲಗೊಳಿಸುವಂತ ಶಕ್ತಿ ಇದೆ. ಜ್ಞಾನ ಸಂಪತ್ತು ಇತರ ಸಂಪತ್ತಿಗಿಂತ ಮಿಗಿಲು ಎಂದರು.

ಸಂಘದ ಅಧ್ಯಕ್ಷ ಪಿ.ಎ.ಕುಲಕರ್ಣಿ ಮಾತನಾಡಿ, ದಿಗಂಬರ ಜೈನ ಸಮಾಜದಲ್ಲಿ ದಶಲಕ್ಷಣ ಪರ್ವಕ್ಕೆ ತನ್ನದೇ ಆದ ಇತಿಹಾಸ, ಐತಿಹಾಸಿಕ ಮಹತ್ವವಿದ್ದು ನಾವೆಲ್ಲರೂ ಇವುಗಳನ್ನು ಪಾಲಿಸುವ ಮೂಲಕ ನಮ್ಮ ಜೀವನವನ್ನು ಸುಂದರವಾಗಿ ರೂಪಿಸಿಕೊಳ್ಳಲು ಮುಂದಾಗೋಣ ಎಂದರು.

ಈ ವೇಳೆ ವಾರ್ಷಿಕ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳನ್ನ ಸನ್ಮಾನಿಸಲಾಯಿತು.

ಅಭಿನಂದನ ಗೂಗಿ, ವಂದನಾ ಗೂಗಿ, ಬಾಹುಬಲಿ ಹೂಲಿ, ಸಂಜಯ ಬಾಗಮಾರ, ಸಂಘದ ಗೌರವ ಅಧ್ಯಕ್ಷ ಡಾ. ಅಪ್ಪಣ್ಣ ಹಂಜೆ, ಉಪಾಧ್ಯಕ್ಷ ಎಂ.ಟಿ.ಕಬ್ಬಿಣ, ಪಿ.ಜಿ.ನಾವಳ್ಳಿ, ಸಂಕಪ್ಪ ನಾವಳ್ಳಿ, ಯಶವಂತ ಸಿದ್ಧಣ್ಣವರ, ಕೆ.ಎನ್.ಮಲ್ಲಾಡದ, ಜಿನ್ನಪ್ಪ ಪುಟ್ಟಣ್ಣವರ, ರಾಮನಗೌಡ ಪಾಟೀಲ, ಸುಭಾಸ ಅಂಗಡಿ, ಜ್ಞಾಲಾಮಾಲಿನಿ ಸದರಣ್ಣವರ, ಪರಿಮಳ ಕುಲಕರ್ಣಿ, ಸುಮನ್ ಮುತ್ತಿನ, ನಾಗರಾಜ ದೇಶಪಾಂಡೆ, ಎ.ಎನ್.ಬಸ್ತಿ, ಬಿ.ಎನ್.ನಾವಳ್ಳಿ ಸೇರಿದಂತೆ ಮುಂತಾದವರಿದ್ದರು.

ಸಂಘದ ಕಾರ್ಯದರ್ಶಿ ಪ್ರಕಾಶ ಮುತ್ತಿನ ಸ್ವಾಗತಿಸಿದರು. ಪ್ರೊ.ಬಾಹುಬಲಿ ಜೈನರ್ ನಿರೂಪಿಸಿದರು, ಪ್ರೀತಿ ನಾವಳ್ಳಿ ಪ್ರತಿಭಾ ಪುರಸ್ಕಾರ ನಿರ್ವಹಿಸಿದರು. ನಾಗರಾಜ ತುಕೋಳ ವಂದಿಸಿದರು. ವಿದ್ಯಾರ್ಥಿನಿಯರು ಸೇರಿದಂತೆ ಪ್ರಸಾದ ಸೇವೆ ವಹಿಸಿಕೊಂಡಿದ್ದ ಬಾಹುಬಲಿ ಕೂಸಣ್ಣವರ ಮತ್ತು ಗಣ್ಯರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಗರದ 75 ಜಂಕ್ಷನ್‌ ಅಭಿವೃದ್ಧಿಗೆ ಗ್ರಹಣ!
ಎಚ್‌ಎಎಲ್‌ ಮತ್ತೆ ಸಾರ್ವಜನಿಕ ಬಳಕೆ ಪ್ರಸ್ತಾಪ ಪರಿಶೀಲನೆ:ಸಚಿವ