ಅರಸೀಕೆರೆ: ಭಾರತೀಯ ಐತಿಹಾಸಿಕ ಪರಂಪರೆಯ ಕಥೆ ವೈಭವಗಳ ಅಧ್ಯಯನ ಮಾಡಲು ನಮ್ಮ ಪುರಾಣ ಮಹಾಕವಿಗಳು ಸಹಕಾರಿಯಾಗಿದ್ದಾರೆ ಎಂದು ಸಂಸ್ಕೃತ ಪಂಡಿತ್ ಪಿ. ಎನ್ ನಾಗರಾಜ್ ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ ಸಾತನಗೆರೆ ಶಿವಪ್ರಕಾಶ್ ಮಾತನಾಡಿ, ಕನ್ನಡ ಭಾಷೆಯಲ್ಲಿ ಶೇಕಡ 70 ರಷ್ಟು ಸಂಸ್ಕೃತ ಶಬ್ದಗಳಿದ್ದು, ನಮ್ಮ ಜೀವನ ಶೈಲಿಯ ಬದಲಾವಣೆಗೆ ಅತ್ಯಂತ ಮಹಾ ಪೂರಕವಾಗಿದೆ ಎಂದು ಹೇಳಿದರು. ಕನ್ನಡ ಶಿಕ್ಷಕಿ ಜಮುನಾ ಮಾತನಾಡಿ, ಸಂಸ್ಕೃತ ಒಂದು ಭಾಷೆಯಲ್ಲ, ಅದು ಒಂದು ಜ್ಞಾನ, ಸಂಸ್ಕಾರ. ಅಮೃತ ಬಿಂಬಿಸುವ ಶಕ್ತಿ ಸಂಸ್ಕೃತಕ್ಕೆ ಇದೆ. ಈ ಭಾಷೆಯಿಂದ ನಮ್ಮ ಸ್ಮರಣಶಕ್ತಿ, ಜ್ಞಾನಾರ್ಜನೆ ವೃದ್ಧಿಯಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಈಶ್ವರಯ್ಯ, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಓಂಕಾರಪ್ಪ, ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಲ್ಲೇಶಪ್ಪ, ಕೆ ಪಿ ನಂಜುಂಡಿ, ಇತರರು ಹಾಜರಿದ್ದರು. ಸಂಸ್ಕೃತ ಸುಭಾಷಿತ ಭಗವದ್ಗೀತೆ ನೃತ್ಯವನ್ನು ಮಕ್ಕಳು ಪ್ರದರ್ಶಿಸಿದರು.