ಒಳಮೀಸಲಾತಿ ಕೊಡಿ ಅಥವಾ ಸಿಎಂ, ಸಚಿವರು ಕುರ್ಚಿ ಖಾಲಿ ಮಾಡಲಿ

KannadaprabhaNewsNetwork |  
Published : Jan 29, 2025, 01:32 AM IST
(ಸಾಂದರ್ಭಿಕ ಚಿತ್ರ) | Kannada Prabha

ಸಾರಾಂಶ

ಪರಿಶಿಷ್ಟ ಜಾತಿಯಲ್ಲಿ ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಿ, ಇಲ್ಲವೇ ಮುಖ್ಯಮಂತ್ರಿ, ಸಂಪುಟ ಸಚಿವರೆಲ್ಲರೂ ತಮ್ಮ ಕುರ್ಚಿ ಖಾಲಿ ಮಾಡಿ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ತಾಕೀತು ಮಾಡಿದೆ.

- ರಾಜ್ಯ ಸರ್ಕಾರಕ್ಕೆ ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ತಾಕೀತು - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಪರಿಶಿಷ್ಟ ಜಾತಿಯಲ್ಲಿ ಸರ್ವೋಚ್ಛ ನ್ಯಾಯಾಲಯ ಆದೇಶದಂತೆ ಒಳಮೀಸಲಾತಿ ಜಾರಿಗೊಳಿಸಿ, ಇಲ್ಲವೇ ಮುಖ್ಯಮಂತ್ರಿ, ಸಂಪುಟ ಸಚಿವರೆಲ್ಲರೂ ತಮ್ಮ ಕುರ್ಚಿ ಖಾಲಿ ಮಾಡಿ ಎಂದು ಮಾದಿಗ ಮಹಾಸಭಾ ಕ್ಷೇಮಾಭಿವೃದ್ಧಿ ಸಂಘ ಸರ್ಕಾರಕ್ಕೆ ತಾಕೀತು ಮಾಡಿದೆ.

ರಾಜ್ಯದಲ್ಲಿ ಮಾದಿಗ (ಎಡಗೈ) ಸಮುದಾಯ 3 ದಶಕದಿಂದಲೂ ಒಳಮೀಸಲಾತಿ ಅಥವಾ ಪ್ರತ್ಯೇಕ ಮೀಸಲಾತಿಗೆ ಎಲ್ಲಾ ಹಂತದ ಹೋರಾಟ ನಡೆಸುತ್ತಿದೆ. ಎಲ್ಲ ಸರ್ಕಾರಗಳೂ ವಿಳಂಬ ನೀತಿಯನ್ನೇ ಅನುಸರಿಸಿದ ಕಾರಣಕ್ಕೆ ಮಾದಿಗ ಸಮುದಾಯ ಸರ್ವೋಚ್ಛ ನ್ಯಾಯಾಲಯ ಮೊರೆ ಹೋಗಬೇಕಾಯಿತು. 1.8.2024ರಂದು ಮೀಸಲಾತಿ/ ಒಳಮೀಸಲಾತಿ/ ಪ್ರತ್ಯೇಕ ಮೀಸಲಾತಿ ಕೊಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದೆ. ತೀರ್ಪು ಬಂದು ಐದಾರು ತಿಂಗಳೇ ಕಳೆದರೂ ಇನ್ನೂ ದತ್ತಾಂಶ ನೆಪ ಹೇಳುತ್ತಿದ್ದಾರೆ ಎಂದು ತೀವ್ರ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಆಲೂರು ನಿಂಗರಾಜ, ಜಿಲ್ಲಾಧ್ಯಕ್ಷ ರಾಜು ಶಾಮನೂರು ಇತರರು ಒತ್ತಾಯಿಸಿದ್ದಾರೆ.

ಮಹಾಸಭಾ ಹಕ್ಕೊತ್ತಾಯಗಳು:

ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿ ದತ್ತಾಂಶ ಅಧ್ಯಯನ ಮಾಡಿ, ದತ್ತಾಂಶ ಕಲೆ ಹಾಕಬೇಕು. ಜೆ.ಸಿ.ಮಾಧುಸ್ವಾಮಿ ಸಮಿತಿ ವರದಿ ಆಧರಸಿ ಪ.ಜಾ.ಯಲ್ಲಿ ಒಳಮೀಸಲಾತಿ ಜಾರಿಗೊಳಿಸಬೇಕು. ಮಾಧು ಸ್ವಾಮಿ ಸಮಿತಿ ನೀಡಿದ ಎ, ಬಿ, ಸಿ, ಡಿ ಯಲ್ಲಿ ಶೇ.17ರಲ್ಲಿ ಎ-ಶೇ.6 ಮಾದಿಗ ಸಮುದಾಯಕ್ಕೆ, ಬಿ-ನಲ್ಲಿ ಶೇ.5.5ರಷ್ಟು ಚಲವಾದಿಗೆ, ಸಿ-ನಲ್ಲಿ ಶೇ.4.5ರಷ್ಟು ಭೋವಿ, ಲಂಬಾಣಿ, ಕೊರಚ, ಕೊರಮ, ಡಿ-ನಲ್ಲಿ ಶೇ.1ರಷ್ಟು ಇತರೆ ಅಲಮಾರಿಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ನೀಡಬೇಕು. ಸಚಿವ ಸಂಪುಟ ನಿರ್ಣಯಿಸಿದಂತೆ ಒಳಮೀಸಲಾತಿ ಜಾರಿಗೊಳ್ಳುವವರೆಗೂ ಸರ್ಕಾರಿ ಹುದ್ದೆಗಳಲ್ಲಿ ಸುಮಾರು 37 ಸಾವಿರ ಹುದ್ದೆಗಳ ನೇಮಕಾತಿ ತಡೆಹಿಡಿಯಬೇಕು ಎಂದು ಹಕ್ಕೊತ್ತಾಯಿಸಲಾಗಿದೆ.

- - - (ಫೋಟೋ ಇದೆ.)

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!