- ಬೇಡಿಕೆಗೆ ಸ್ಪಂದಿಸದಿದ್ದರೆ ತಾಂಡಾ ಬಚಾವೋ, ಕಾಂಗ್ರೆಸ್ ಹಠಾವೋ
ಹೊನ್ನಾಳಿ: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಶುಕ್ರವಾರ ನಡೆದ ಸಚಿವ ಸಂಪುಟದಲ್ಲಿ ಒಳಮೀಸಲಾತಿಗೆ ತಿದ್ದುಪಡಿ ಮಾಡಿ ಎಡಗೈ ಹಾಗೂ ಬಲಗೈಗೆ ತಲಾ ಶೇ.5.25 ರಂತೆ ನಿರ್ಧರಿಸಿ ತೀರ್ಮಾನ ತೆಗೆದುಕೊಂಡಿದೆ. ಆದರೆ ಸ್ಪೃಶ್ಯ ಅಲೆಮಾರಿಗಳಿಗೆ ಶೇ.4.5ರ ಮೀಸಲಾತಿ ನಿರ್ಧರಿಸಿ ತೀರ್ಮಾನ ತೆಗೆದುಕೊಂಡಿರುವುದನ್ನು ರಾಜ್ಯದ ಲಂಬಾಣಿ ಜನಾಂಗ ಒಪ್ಪುವುದಿಲ್ಲ ಎಂದು ತಾಲೂಕು ಬಣಜಾರ್ ಸಮಾಜ ಮುಖಂಡ ಮಿಥುನ್ ಚಕ್ರವರ್ತಿ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಅಲೆಮಾರಿಗಳನ್ನು ಪ್ರತ್ಯೇಕವಾಗಿ ವರ್ಗೀಕರಣ ಮಾಡಿ ಈ ಮೀಸಲಾತಿ ನೀಡಿದರೆ ಆಗ ಲಂಬಾಣಿ ಜನಾಂಗಕ್ಕೆ ಅನುಕೂಲವಾಗಲಿದೆ. ರಾಜ್ಯ ಸರ್ಕಾರ ಇಂತಹ ತೀರ್ಮಾನ ಕೈಗೊಂಡರೆ ಅದನ್ನ ಸ್ವಾಗತಿಸುತ್ತೇವೆ. ಇಲ್ಲದಿದ್ದರೆ ತಾಂಡಾ ಬಚಾವೋ, ಕಾಂಗ್ರೆಸ್ ಹಠಾವೋ ಹೋರಾಟಕ್ಕೆ ಕರೆ ಕೊಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಅಲೆಮಾರಿಗಳಿಗೆ ಪ್ರತೇಕ ಮೀಸಲಾತಿಗೆ ಆಗ್ರಹ:
ಡಾ. ಓಂಕಾರನಾಯ್ಕ ಮಾತನಾಡಿ, ಇಡೀ ರಾಜ್ಯದಲ್ಲಿ ಲಂಬಾಣಿ ಸಮುದಾಯಕ್ಕೆ ಸೇರಿದ ಒಬ್ಬರೇ ಒಬ್ಬ ಸಚಿವರು ಇಲ್ಲ. ಇರುವ ಒಬ್ಬ ಶಾಸಕರನ್ನು ವಿಧಾನಪರಿಷತ್ತಿನ ಸಭಾಪತಿಯನ್ನಾಗಿ ಮಾಡಲಾಗಿದೆ. ಹೀಗಾಗಿ, ನಮ್ಮ ಧ್ವನಿ ಅಡಗಿಸಲು ರಾಜ್ಯ ಸರ್ಕಾರ ಮುಂದಾಗಿದೆ. ನಮ್ಮ ಸಮಾಜದ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗದಿರಲು ಕಾರಣ, ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ನಾವು ಬಿಜೆಪಿಗೆ ಬೆಂಬಲ ಕೊಡದಿರುವುದು. ಇದನ್ನು ಕಾಂಗ್ರೆಸ್ ಸರ್ಕಾರ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಕೂಡಾ ಇದೇ ಒಳಮೀಸಲಾತಿ ನೀತಿಗೆ ಅಂಟಿಕೊಂಡರೆ ನಾವು ನಿಮ್ಮನ್ನು ತಾಂಡಾದೊಳಕ್ಕೆ ಕಾಲಿಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಮುಂಬರುವ ಎಲ್ಲ ಚುನಾವಣೆಗಳಲ್ಲೂ ಕಾಂಗ್ರೆಸ್‌ಗೆ ವಿರುದ್ಧವಾಗಿ ಮತ ನೀಡುತ್ತೇವೆ ಎಂದು ಹೇಳಿದರು.
- - -