ಮಾಗಡಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಚುನಾವಣೆಯಲ್ಲಿ ಈ ಬಾರಿ ನಮ್ಮ ತಂಡಕ್ಕೆ ವೀರಶೈವ ಸಮಾಜದ ಸೇವೆ ಮಾಡಲು ಅವಕಾಶ ಕಲ್ಪಿಸಿಕೊಡಬೇಕು ಎಂದು ಮಹಾಸಭಾ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಹೆಚ್.ಎಸ್.ಯೋಗಾನಂದ ಮನವಿ ಮಾಡಿದರು.
ನಮ್ಮ ತಂಡವನ್ನು ಜಯಶೀಲರಾಗಿ ಮಾಡಿದರೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಘಟಕಕ್ಕೆ ನಿವೇಶನ ಮತ್ತು ಜಮೀನು ಮಂಜೂರು ಮಾಡಿಸುವುದು, ಜಿಲ್ಲಾ ಮತ್ತು ಪ್ರತಿ ತಾಲೂಕು ಕೇಂದ್ರಗಳಲ್ಲಿ ಬಸವ ಭವನ ನಿರ್ಮಾಣ, ಜಿಲ್ಲಾ ವಧು-ವರರ ಅನ್ವೇಷಣಾ ಕೇಂದ್ರ ಸ್ಥಾಪನೆ, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಸಹಕರಿಸುವುದು, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಜಗಜ್ಯೋತಿ ಬಸವೇಶ್ವರ ಮತ್ತು ಡಾ.ಶಿವಕುಮಾರ ಸ್ವಾಮೀಜಿಯ ಪುತ್ಥಳಿ ಅನಾವರಣ ಮಾಡುವುದು, ಪ್ರತಿ ವರ್ಷ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡುವುದು, ಸಮಾಜದ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸುವುದು, ಪ್ರತಿ ಮನೆಯಲ್ಲೂ ಮಹಾಸಭದ ಸದಸ್ವತ್ವ ನೋಂದಣಿ ಮಾಡಿಸುವುದು, ಜಿಲ್ಲೆಯಲ್ಲಿ ಸಮುದಾಯ ಜನಗಣತಿ ಮಾಡಿಸುವುದು, ಮಠಮಾನ್ಯಗಳಿಗೆ ಎಲ್ಲಾ ರೀತಿಯಲ್ಲೂ ವಿಶೇಷ ರೀತಿಯ ಆದ್ಯತೆ ನೀಡುವುದು, ಸಮಾಜದ ಬಂಧುಗಳಿಗೆ ಆರ್ಥಿಕವಾಗಿ ಸದೃಢರಾಗಲು ಮಾರ್ಗದರ್ಶಿಸುವುದು, ಪ್ರತಿ ಗ್ರಾಮಗಳಲ್ಲಿ ಸಮುದಾಯದ ಜನರಿಗೆ ಸ್ಮಶಾನ ವ್ಯವಸ್ಥೆ ಸೇರಿದಂತೆ ಅನೇಕ ಯೋಜನೆಗಳನ್ನು ಜಾರಿಗೊಳಿಸಲಾಗುವುದು. ಆದ್ದರಿಂದ ನಮ್ಮ ತಂಡಕ್ಕೆ ಸೇವೆ ಮಾಡಲು ಅವಕಾಶ ಕೊಡಬೇಕೆಂದು ಮನವಿ ಮಾಡಿದರು.
ತಾಲೂಕಿನ ವಿವಿಧ ಗ್ರಾಮಗಳಿಗೆ ಯೋಗಾನಂದ ತಂಡದ ಸದಸ್ಯರುಗಳು ಭೇಟಿ ನೀಡಿ ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ತಂಡದ ಜಿಲ್ಲಾ ಘಟಕದ ಸಾಮಾನ್ಯ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ಹಾಗೂ ಜಿಲ್ಲಾ ಘಟಕದ ಮಹಿಳಾ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳು ಭಾಗವಹಿಸಿದ್ದರು.ಬಾಕ್ಸ್.............
ಇಂದು ಮತದಾನಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಮತ್ತು ನಿರ್ದೇಶಕರ ಚುನಾವಣೆ ಜು.21ರಂದು ಭಾನುವಾರ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆವರೆಗೂ ಮಾಗಡಿ ಪಟ್ಟಣದ ಎನ್ಇಎಸ್ ಬಡಾವಣೆಯ ಬಂಡೇಶ್ವರ(ಸರ್ವೋದಯ) ಶಿಕ್ಷಣ ಸಂಸ್ಥೆ ಶಾಲಾ ಆವರಣದಲ್ಲಿ ನಡೆಯಲಿದೆ. ಮತದಾರರು ತಪ್ಪದೆ ಬಂದು ಮತ ಹಾಕಿ ನಮ್ಮ ತಂಡವನ್ನು ಆಶೀರ್ವದಿಸಬೇಕು ಎಂದು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಯೋಗಾನಂದ ಅವರು ಮತದಾರರಲ್ಲಿ ಮನವಿ ಮಾಡಿದರು.
(ಫೋಟೊ ಕ್ಯಾಫ್ಷನ್)ಮಾಗಡಿ ತಾಲೂಕಿನ ವೀರೇಗೌಡನದೊಡ್ಡಿ ಗ್ರಾಮದಲ್ಲಿ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಯೋಗಾನಂದ ಮತ್ತು ತಂಡದಿಂದ ಮತಯಾಚನೆ ಮಾಡಿದರು. ಸಮಾಜದ ಮುಖಂಡರು, ಅಭ್ಯರ್ಥಿಗಳು ಉಪಸ್ಥಿತರಿದ್ದರು.