ಕೆ.ಜಿ.ಎಫ್‌ನ ಯುವಕರು, ಸಂಘ- ಸಂಸ್ಥೆಗಳು ಹಾಗೂ ಗಣೇಶ ಮಂಡಳಿಗಳಿಗೆ ಧೈರ್ಯ ತುಂಬುತ್ತಾ, ಆರ್.ಕೆ. ಫೌಂಡೇಶನ್‌ನಿಂದ ಆರ್ಥಿಕ ನೆರವು ನೀಡಲಾಗಿದೆ. ಯುವಕರ ಕಷ್ಟಗಳಿಗೆ ಮತ್ತು ಹಬ್ಬಗಳ ಸುಗಮ ಆಚರಣೆಗೆ ತಾವು ಸದಾ ಜೊತೆಯಾಗಿ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ.ಸಮಸ್ಯೆಗಳ ಬಗ್ಗೆ ಧ್ವನಿ: ಕೆ.ಜಿ.ಎಫ್‌ನಲ್ಲಿ ಗ್ರಾನೈಟ್ ಲೂಟಿ ಮತ್ತು ಸಾರ್ವಜನಿಕರಿಗೆ ಹಾಗೂ ರೈತರಿಗೆ ಆಗುತ್ತಿರುವ ವಿವಿಧ ತೊಂದರೆಗಳು ಮತ್ತು ಸಾಲ ಸೌಲಭ್ಯಗಳ ವಿಚಾರವಾಗಿ ಧ್ವನಿಯೆತ್ತಿ, ಇದಕ್ಕೆ ಕಾರಣರಾದವರ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಬೇತಮಂಗಲ
ಚುನಾವಣಾ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚಿಕೆ ಮಾಡುವಾಗ ಇಲ್ಲದ ಕಾನೂನುಗಳು, ಧಾರ್ಮಿಕ ಹಬ್ಬಗಳ ಆಚರಣೆಗೆ ಮಾತ್ರ ಯಾಕೆ ಅನ್ವಯಿಸುತ್ತವೆ ಎಂದು ಆರ್.ಕೆ ಫೌಂಡೇಶನ್ ಸಂಸ್ಥಾಪಕಾಧ್ಯಕ್ಷ ಹಾಗೂ ಸಮಾಜಸೇವಕ ವಿ.ಮೋಹನ್ ಕೃಷ್ಣ ಪ್ರಶ್ನಿಸಿ ಶಾಸಕರ ಧೋರಣೆ ಖಂಡಿಸಿದ್ದಾರೆ.
ಪಟ್ಟಣದಲ್ಲಿ ಗಣೇಶ ಹಬ್ಬದ ಪ್ರಯುಕ್ತ ಸುಮಾರು ೨೫೦ಕ್ಕಿಂತ ಹೆಚ್ಚು ಯುವಕರ ಸಂಘ ಸಂಸ್ಥೆಗಳಿಗೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸಿ ಹಾಗೂ ಆರ್ಥಿಕವಾಗಿ ನೆರವು ನೀಡಿ ಅವರು ಮಾತನಾಡಿದರು.
ತಾವು ಸತತ ಒಂಬತ್ತು ವರ್ಷಗಳಿಂದಲೂ ಸಹ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಗಣೇಶ ಹಬ್ಬಕ್ಕೆ ಉಚಿತವಾಗಿ ಗಣೇಶ ಮೂರ್ತಿಗಳನ್ನು ವಿತರಿಸುತ್ತಾ ಆರ್ಥಿಕ ನೆರವು ನೀಡುತ್ತಾ ಯುವಕರ ಕಷ್ಟಗಳಿಗೆ ಮತ್ತು ಹಬ್ಬಗಳ ಸುಗಮ ಆಚರಣೆಗೆ ಸದಾ ಜೊತೆ ನಿಲ್ಲುತ್ತಿದ್ದೇನೆ.
ಆದರೆ ಚುನಾವಣೆ ಹತ್ತಿರ ಬರುತ್ತಿದ್ದಂತೆ ಇಂದಿನ ಯುವ ಮತದಾರರ ಮನ ಗೆಲ್ಲಲು ಶಾಸಕರು ಇದೇ ಮೊದಲ ಬಾರಿಗೆ ಗಣೇಶ ಸಂಘ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲು ಕಡ್ಡಾಯವಾಗಿ ಅನುಮತಿ ಪತ್ರವನ್ನು ಪಡೆದು ನೆರವು ನೀಡುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಆದರೂ ಶೇಕಡ ೨೦ರಷ್ಟು ಸಹ ಶಾಸಕರಿಂದ ನೆರವು ಪಡೆಯಲು ಯುವಕರು ಇಂತಹ ಗಿಮಿಕ್‌ಗಳಿಗೆ ಬಲಿಯಾಗುವುದಿಲ್ಲ ಎಂದರು.
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ, ಎಪಿಎಂಸಿ ಮಾರುಕಟ್ಟೆಯಲ್ಲಿ ಗ್ರಾನೈಟ್ ಹಗರಣ, ಟಿಎಪಿಎಂಸಿಎಸ್ ನಲ್ಲಿ ರೈತರಿಗೆ ಅನರ್ಹ ಮತದಾರರ ನೋಟಿಸ್, ಕೆಜಿಎಫ್ ವೆಂಕಟರಮಣ ಸ್ವಾಮಿ ದೇವಾಲಯದ ಆಭರಣಗಳ ಹಗರಣ, ಅರಣ್ಯ ಭೂಮಿಗೆ ಅಕ್ರಮ ಖಾತೆ, ಡಿಸಿಸಿ ಬ್ಯಾಂಕ್ ನಲ್ಲಿ ಕೋಟ್ಯಂತರ ರುಪಾಯಿ ಭ್ರಷ್ಟಾಚಾರ, ಹೀಗೆ ಹತ್ತು ಹಲವು ಹಗರಣಗಳಲ್ಲಿ ಕೆಜಿಎಫ್ ಶಾಸಕರು ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದ ಗೌಡ ಅವರು ನೇರವಾಗಿ ಭಾಗಿಯಾಗುತ್ತಿದ್ದು, ಕೆಜಿಎಫ್ ಕ್ಷೇತ್ರದ ಸರ್ಕಾರಿ ಭೂಮಿಗಳನ್ನು ಉಳಿಸಲು ಹಾಗೂ ಯುವಕರ ಉತ್ತಮ ಭವಿಷ್ಯಕ್ಕಾಗಿ ಸ್ವಕ್ಷೇತ್ರದ ಸ್ವಾಭಿಮಾನಿ ಅಭ್ಯರ್ಥಿಯಾದ ತಮ್ಮನ್ನು ಶಾಸಕರನ್ನಾಗಿ ಒಮ್ಮೆ ಗೆಲ್ಲಿಸಿ, ಕೆಜಿಎಫ್ ಕ್ಷೇತ್ರಕ್ಕೆ ಯಾವುದೇ ಚ್ಯುತಿ ಬರದಂತೆ ಅಧಿಕಾರ ಚಲಾಯಿಸುತ್ತೇನೆ. ಯಾವುದೇ ಭ್ರಷ್ಟಾಚಾರ ಇತರೆ ಹಗರಣದಲ್ಲಿ ಭಾಗಿಯಾಗಿದ್ದಲ್ಲಿ ತಕ್ಷಣ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದರು.
ಯುವಕರಿಗೆ ಬೆಂಬಲ ಮತ್ತು ಭರವಸೆ:
ಕೆ.ಜಿ.ಎಫ್‌ನ ಯುವಕರು, ಸಂಘ- ಸಂಸ್ಥೆಗಳು ಹಾಗೂ ಗಣೇಶ ಮಂಡಳಿಗಳಿಗೆ ಧೈರ್ಯ ತುಂಬುತ್ತಾ, ಆರ್.ಕೆ. ಫೌಂಡೇಶನ್‌ನಿಂದ ಆರ್ಥಿಕ ನೆರವು ನೀಡಲಾಗಿದೆ. ಯುವಕರ ಕಷ್ಟಗಳಿಗೆ ಮತ್ತು ಹಬ್ಬಗಳ ಸುಗಮ ಆಚರಣೆಗೆ ತಾವು ಸದಾ ಜೊತೆಯಾಗಿ ನಿಲ್ಲುವುದಾಗಿ ಅವರು ಭರವಸೆ ನೀಡಿದ್ದಾರೆ.
ಸಮಸ್ಯೆಗಳ ಬಗ್ಗೆ ಧ್ವನಿ: ಕೆ.ಜಿ.ಎಫ್‌ನಲ್ಲಿ ಗ್ರಾನೈಟ್ ಲೂಟಿ ಮತ್ತು ಸಾರ್ವಜನಿಕರಿಗೆ ಹಾಗೂ ರೈತರಿಗೆ ಆಗುತ್ತಿರುವ ವಿವಿಧ ತೊಂದರೆಗಳು ಮತ್ತು ಸಾಲ ಸೌಲಭ್ಯಗಳ ವಿಚಾರವಾಗಿ ಧ್ವನಿಯೆತ್ತಿ, ಇದಕ್ಕೆ ಕಾರಣರಾದವರ ವಿರುದ್ಧ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಕೆ.ಜಿ.ಎಫ್ ಭಾಗದಲ್ಲಿ ಡಿ.ಸಿ.ಸಿ. ಬ್ಯಾಂಕ್ ಸಾಲ ಹಾಗೂ ಲೆಡ್ಜರ್ ಬ್ಯಾಲೆನ್ಸ್ ವಿಚಾರದಲ್ಲಿ ಗ್ರಾಹಕರಿಗೆ ಮತ್ತು ರೈತರಿಗೆ ತೊಂದರೆಯಾಗುತ್ತಿದ್ದು, ಹಲವರ ಖಾತೆಗಳಲ್ಲಿ ಗೊಂದಲಗಳಿವೆ. ಬ್ಯಾಂಕಿನಲ್ಲಿ ಹಣ ಕಟ್ಟಿ ಪತ್ರಗಳು ಹಾಗೂ ದಾಖಲಾತಿಗಳು ಸಿಗದೆ ಸಾರ್ವಜನಿಕರು ಪರದಾಡುತ್ತಿದ್ದಾರೆ ಎಂದು ಆರೋಪಿಸಿ, ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ಬಡವರಿಗೆ ನ್ಯಾಯ ಒದಗಿಸಬೇಕೆಂದು ಅವರು ಆಗ್ರಹಿಸಿದರು.
ಉದ್ಯೋಗ ಮೇಳ ಆಯೋಜನೆ:
ಕೆ.ಜಿ.ಎಫ್ ನಗರದ ಶ್ರೀ ವಿನಾಯಕ ಇನ್ಸ್ಟಿಟ್ಯೂಟ್‌ನಲ್ಲಿ ಸೆಪ್ಟೆಂಬರ್ ೧೯ರಂದು ಬೃಹತ್ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಇದರಲ್ಲಿ ಸುಮಾರು ೨೫ಕ್ಕೂ ಹೆಚ್ಚು ಕಂಪನಿಗಳು ಭಾಗವಹಿಸುತ್ತಿದ್ದು, ೧೦ನೇ ತರಗತಿ, ಪಿಯುಸಿ, ಡಿಗ್ರಿ, ಡಿಪ್ಲೋಮಾ ಹಾಗೂ ವಿವಿಧ ವೃತ್ತಿಪರ ವಿದ್ಯಾರ್ಹತೆ ಹೊಂದಿರುವ ಯುವಕ- ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮನವಿ ಮಾಡಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.