ಹೇಮಾವತಿ ನಾಲೆಯಿಂದ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಿಗೆ ತಲಾ ಒಂದೊಂದು ಟಿಎಂಸಿ ನೀರು ಹರಿಸುವ ನಿಟ್ಟಿನಲ್ಲಿ ಈ ಭಾಗದ ಜನರ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ. ಶಂಕರಪ್ಪ ಒತ್ತಾಯಿಸಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಹೇಮಾವತಿ ನಾಲೆಯಿಂದ ಮಧುಗಿರಿ ಮತ್ತು ಕೊರಟಗೆರೆ ತಾಲೂಕುಗಳಿಗೆ ತಲಾ ಒಂದೊಂದು ಟಿಎಂಸಿ ನೀರು ಹರಿಸುವ ನಿಟ್ಟಿನಲ್ಲಿ ಈ ಭಾಗದ ಜನರ ಹಿತ ಕಾಪಾಡಬೇಕು ಎಂದು ಸರ್ಕಾರವನ್ನು ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಸಿ. ಶಂಕರಪ್ಪ ಒತ್ತಾಯಿಸಿದರು.ಭಾನುವಾರ ಇಲ್ಲಿನ ನೀರಿಕ್ಷಣಾ ಮಂದಿರದಲ್ಲಿ ಮಧುಗಿರಿ ಶಿರಾ ಹಾಗೂ ಕೊರಟಗೆರೆ ತಾಲೂಕುಗಳ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಈ ವರ್ಷ ಸಕಾಲದಲ್ಲಿ ಮಳೆ ಬಾರದೇ ಬೇಸಾಯ ಸ್ಥಬ್ದವಾಗಿದೆ. ಬರಗಾಲದ ಕರಿ ನೆರಳು ತಾಲೂಕಿನಲ್ಲಿ ಆವರಿಸಿದ್ದು, ರೈತರು, ಕೃಷಿಕರು ಹಾಗೂ ಕೂಲಿಕಾರ್ಮಿಕರನ್ನು ಬರದ ದವಡೆಗೆ ಸಿಲುಕಿಸಿದೆ. ಈ ಹಿನ್ನೆಲೆಯಲ್ಲಿ ಜನತೆ ವಲಸೆ ಹೋಗುವುದನ್ನು ತಪ್ಪಿಸಲು ವಿ ಬಿ ಜಿ ರಾಮ್ ಜಿ ಯೋಜನೆಯಡಿಯಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡಬೇಕು. ಪ್ರತಿ ರೈತರಿಗೆ ಎಕರೆಗೆ 20 ಸಾವಿರ ರು.ಪರಿಹಾರ ನೀಡಬೇಕು. ತಕ್ಷಣ ಗೋಶಾಲೆಗಳನ್ನು ತೆರೆಯಬೇಕು, ಹಾಲು ಉತ್ಪಾದಕರಿಗೆ ಲೀ. ರು.40 ನೀಡಬೇಕು. ಎತ್ತಿನಹೊಳೆ ಯೋಜನೆಯಡಿ ಒಂದು ಟಿಎಂಸಿ ನೀರು ನೀಡಬೇಕೆಂದರು.
ರೈತ ಸಂಘದ ಪದಾಧಿಕಾರಿಗಳಾದ ದೊಡ್ಡ ಮಾಳಯ್ಯ,, ನಾಗರಾಜು ,ನರಸಿಂಹಮೂರ್ತಿ, ಶಬೀರ್ ಪಾಷಾ, ನಾಗರತ್ನಮ್ಮ, ರಮೇಶ್, ಕೆಂಚಪ್ಪ, ವೀರಭದ್ರಪ್ಪ, ತಿಮ್ಮಪ್ಪ ,ಮೂಡ್ಲಪ್ಪ, ಶ್ರೀನಿವಾಸ್ ,ತಿಮ್ಮಣ್ಣ ಜೈರಾಮ್,ನಾದೂರು ಕೆಂಚಪ್ಪ, ಕೊರಟಗೆರೆ ಶಬ್ಬಿರ್, ತಿಮ್ಲಾಪುರ ನರಸಿಂಹಮೂರ್ತಿ ಮತ್ತಿತರರು ಹಾಜರಿದ್ದರು.