ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಚಾಮನಹಳ್ಳಿಯಲ್ಲಿ ಕರ್ನಾಟಕ ಜಾನಪದ ಪರಿಷತ್, ಡಾ.ಬಾಬು ಜಗಜೀವನರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಮತ್ತು ಅಖಿಲ ಕರ್ನಾಟಕ ಡಾ.ಬಾಬು ಜಗಜೀವನರಾಂ ಸಂಘಗಳ ಒಕ್ಕೂಟ ವತಿಯಿಂದ ನಡೆದ ಚರ್ಮವಾದ್ಯ ತರಬೇತಿ ಶಿಬಿರದಲ್ಲಿ ಮಾತನಾಡಿದರು.
ಇತ್ತೀಚಿಗೆ ಫೈಬರ್ ಗಳಲ್ಲಿ ತಯಾರಿಸಿದ ಆಧುನಿಕ ತಮಟೆಗಳು ಚಾಲ್ತಿಗೆ ಬಂದಿರುವುದು ಚರ್ಮ ವಾದ್ಯಗಳ ತಯಾರಿಕೆಗೆ ಹಿನ್ನಡೆಯಾಗಲು ಪ್ರಮುಖ ಕಾರಣವಾಗಿದೆ. ಕಚ್ಚಾವಸ್ತುಗಳ ಬೆಲೆ ದುಬಾರಿಯಾಗಿ ತಯಾರಿಕೆಗೆ ಮತ್ತು ಕೊಳ್ಳುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ ಎಂದರು.ಧಾರ್ಮಿಕ ಪೂಜೆ ಹಬ್ಬ ಸಮಾರಂಭ ಮೆರವಣಿಗೆ ಸಂತೋಷ ಮತ್ತು ದುಃಖ ದ ಕಾರ್ಯಕ್ರಮಗಳಲ್ಲಿ ತಮಟೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ ಚರ್ಮದಿಂದ ತಮಟೆ ವಾದ್ಯಗಳನ್ನು ತಯಾರಿಸುವ ಗುಡಿ ಕೈಗಾರಿಕೆಗಳಿಗೆ ಸರ್ಕಾರ ಆದ್ಯತೆ ನೀಡಬೇಕಿದೆ ಎಂದರು.
ತಮಟೆ ಬಾರಿಸುವ ಸದ್ದಿಗೆ ಎಂತವರ ಮೈ ರೋಮಾಂಚನಗೊಳ್ಳುತ್ತದೆ. ಕೋಲಾಟ, ನಂದಿ ಕುಣಿತ, ಪಟ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ಸೋಮನ ಕುಣಿತ ನಾನಾ ರೀತಿಯ ಕುಣಿತಗಳ ಜಾನಪದ ಸೊಗಡನ್ನು ಶ್ರೀಮಂತ ಗೊಳಿಸುವಲ್ಲಿ ತಮಟೆ ವಾದ್ಯ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ವೇದಿಕೆಯಲ್ಲಿ ವಕೀಲರು ಮತ್ತು ಮಾದರ ಮಹಾಸಭಾ ರಾಜ್ಯ ಸಮಿತಿ ಸದಸ್ಯ ಎಸ್.ಆರ್.ಚಂದ್ರಶೇಖರ್, ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಕೀಲಾರ ಕೃಷ್ಣೆಗೌಡ, ತರಬೇತಿ ಶಿಕ್ಷಕರಾದ ನಗಾರಿ ಮಂಜು, ಲಿಡ್ಕರ್ ಚೇತನ್ ಶೆಟ್ಟಿ, ಆಯೋಜಕರಾದ ಚಾಮನಹಳ್ಳಿ ಮಂಜು, ಮುಖಂಡರಾದ ಶಾಂತ, ಕುಚೇಲ ಸೇರಿದಂತೆ ಗ್ರಾಮಸ್ಥರು ಮತ್ತು ತರಬೇತಿದಾರರು ಹಾಜರಿದ್ದರು.