ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಗ್ರಾಮಗಳಲ್ಲಿನ ಜಮೀನು ಹಾಗೂ ನಿವೇಶನಗಳ ಮೌಲ್ಯಗಳು ದ್ವಿಗುಣಗೊಳ್ಳುತ್ತದೆ. ಮೂಲ ಸೌಕರ್ಯಗಳು ಸಮರ್ಪಕವಾಗಿ ಸದ್ಬಳಕೆ ಮಾಡಲು ಸಾಧ್ಯ. ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರಕಾರದಿಂದ ವಿಶೇಷ ಅನುದಾನ.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ರಸ್ತೆಗಳು ಅಭಿವೃದ್ಧಿಯಾದರೆ ಮಾತ್ರ ಗ್ರಾಮಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ಯಲಾದಹಳ್ಳಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಸುಮಾರು 1.5 ಕೋಟಿ ವೆಚ್ಚದಲ್ಲಿ ಗ್ರಾಮ ಪರಿಮಿತಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ನೆರೆವೇರಿಸಿ ಮಾತನಾಡಿದರು.
ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಗ್ರಾಮಗಳಲ್ಲಿನ ಜಮೀನು ಹಾಗೂ ನಿವೇಶನಗಳ ಮೌಲ್ಯಗಳು ದ್ವಿಗುಣಗೊಳ್ಳುತ್ತದೆ. ಮೂಲ ಸೌಕರ್ಯಗಳು ಸಮರ್ಪಕವಾಗಿ ಸದ್ಬಳಕೆ ಮಾಡಲು ಸಾಧ್ಯ. ಮದ್ದೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಸರಕಾರದಿಂದ ವಿಶೇಷ ಅನುದಾನಗಳನ್ನು ತಂದು ಗ್ರಾಮೀಣ ಪ್ರದೇಶಗಳ ರಸ್ತೆ ಮತ್ತು ಚರಂಡಿ ಕಾಮಗಾರಿಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ರಸ್ತೆ ಅಭಿವೃದ್ಧಿಯಿಂದ ಗ್ರಾಮಸ್ಥರಿಗೆ ಸುಗಮ ಸಂಚಾರ ವ್ಯವಸ್ಥೆ ಲಭಿಸುವ ಜತೆಗೆ ಮಳೆಗಾಲದಲ್ಲಿ ಎದುರಾಗುತ್ತಿದ್ದ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಸಿಗಲಿದೆ. ಕಾಮಗಾರಿ ವೇಳೆ ಉತ್ತಮ ಗುಣಮಟ್ಟ ಕಾಪಾಡುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದೇನೆ ಎಂದರು.
ಈ ವೇಳೆ ಭಾರತಿನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಣ್ಣೂರು ರಾಜೀವ್, ತಾಪಂ ಮಾಜಿ ಸದಸ್ಯ ದ್ಯಾವೇಗೌಡ, ಮುಖಂಡರಾದ ನಿಂಗೇಗೌಡ, ನಂಜುಂಡೇಗೌಡ, ನಾಡಗೌಡ ಕೃಷ್ಣ, ಬೋರೇಗೌಡ, ಪ್ರೇಮಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇಂದು ಶ್ರೀ ಯರಸಾನಮ್ಮ ದೇವಿ ಪೂಜಾ ಮಹೋತ್ಸವ
ಹಲಗೂರು: ಸಮೀಪದ ಗೊಲ್ಲರಹಳ್ಳಿಯ ಶ್ರೀಯರಸಾನಮ್ಮ ದೇವಿ ಮತ್ತು ಶ್ರೀವೆಂಕಟೇಶ್ವರಸ್ವಾಮಿ ಪೂಜಾ ಮಹೋತ್ಸವ ಅಂಗವಾಗಿ ಫೆ.27ರ ಶುಕ್ರವಾರ ಬೆಳಗ್ಗೆ 9 ಗಂಟೆಗೆ ದೇವಸ್ಥಾನದ ಆವರಣದಲ್ಲಿ ಹೋಮ ಹವನ ನಡೆಯಲಿದೆ. ಅದೇ ದಿನ ರಾತ್ರಿ ಭೀಮಾ ನದಿಯಿಂದ ಹೂ-ಹೊಂಬಾಳೆ ಸಮೇತವಾಗಿ ಸಾಹಳ್ಳಿ ವೀರ ಮಕ್ಕಳ ಕುಣಿತದೊಂದಿಗೆ ಉತ್ಸವ, ಫೆ.28 ರಂದು ಬೆಳಗ್ಗೆ ಮುಡಿ ಸೇವೆ ಮುಗಿದ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಶ್ರೀ ಯರಸಾನಮ್ಮ ದೇವಸ್ಥಾನದ ಅಭಿವೃದ್ಧಿ ಟ್ರಸ್ಟಿನ ಸದಸ್ಯರು ತಿಳಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.