ಪೇದೆಗೆ ಬೊಲೆರೋ ವಾಹನ ಡಿಕ್ಕಿ: ಸಾವು

KannadaprabhaNewsNetwork |  
Published : Feb 27, 2026, 01:45 AM IST
ತಾಲ್ಲೂಕಿನ ದಿಂಡಗೂರು ಗ್ರಾಮದ ತೋಟವೊಂದರಲ್ಲಿ ಅಳವಡಿಸಿದ್ದ ಬೋನಿಗೆ ಮೂರು ವರ್ಷದ ಗಂಡು ಚಿರತೆ ಬಿದ್ದಿದೆ. | Kannada Prabha

ಸಾರಾಂಶ

ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಎದುರಿಗೆ ಬಂದ ಬೊಲೆರೋ ವಾಹನ ಮುಖ್ಯಪೇದೆಯ ಬೈಕ್‌ಗೆ ಡಿಕ್ಕಿಯಾಗಿದೆ, ಪರಿಣಾಮ ಮುಖ್ಯ ಪೇದೆ ಆನಂದ್ ಬಾಬು ತಲೆಗೆ ಬಲವಾದ ಪೆಟ್ಟು ಬಿದ್ದಿದೆ.

ಕೋಲಾರ:

ರಾತ್ರಿ ಗಸ್ತಿನಲ್ಲಿದ್ದ ಕರ್ತವ್ಯನಿರತ ಪೊಲೀಸ್ ಪೇದೆಗೆ ಬೊಲೆರೋ ವಾಹನ ಡಿಕ್ಕಿಯಾಗಿ ಪೇದೆ ಸಾವನ್ನಪ್ಪಿರುವ ಘಟನೆ ಕೋಲಾರದಲ್ಲಿ ನಡೆದಿದೆ.

ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಮುಖ್ಯ ಪೇದೆ ಇದ್ದ ಬೈಕ್‌ಗೆ ಎದುರಿಗೆ ಬಂದ ಬೊಲೇರೋ ಡಿಕ್ಕಿಯಾದ ಪರಿಣಾಮ ಮುಖ್ಯಪೇದೆ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಶ್ರೀನಿವಾಸಪುರ ತಾಲೂಕಿನ ಪಣಸಮಾಕಲಹಳ್ಳಿ ಬಳಿ ಇಂದು ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಪೊಲೀಸ್ ಠಾಣೆಯೆ ಮುಖ್ಯಪೇದೆ 45 ವರ್ಷದ ಆನಂದ್ ಬಾಬು ಮೃತಪಟ್ಟಿದ್ದಾರೆ. ರಾತ್ರಿ ಗಸ್ತು ತಿರುಗುತ್ತಿದ್ದ ವೇಳೆ ಎದುರಿಗೆ ಬಂದ ಬೊಲೆರೋ ವಾಹನ ಮುಖ್ಯಪೇದೆಯ ಬೈಕ್‌ಗೆ ಡಿಕ್ಕಿಯಾಗಿದೆ, ಪರಿಣಾಮ ಮುಖ್ಯ ಪೇದೆ ಆನಂದ್ ಬಾಬು ತಲೆಗೆ ಬಲವಾದ ಪೆಟ್ಟು ಬಿದ್ದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಕುಟುಂಬದೊಂದಿಗೆ ಕೋಲಾರ ನಗರದ ಕೀಲುಕೋಟೆಯಲ್ಲಿ ವಾಸವಿದ್ದ ಆನಂದ್ ಬಾಬು ಕಳೆದ ಒಂದೂವರೆ ವರ್ಷದಿಂದ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ರಾತ್ರಿ ಪಾಳಯದಲ್ಲಿ ಕೆಲಸಕ್ಕೆ ಬಂದಿದ್ದ ಅವರಿಗೆ ಹೀಗೆ ಅಪಘಾತ ಕುಟುಂಬ ವಲಯದಲ್ಲಿ ತೀವ್ರ ಆಘಾತ ಉಂಟು ಮಾಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕೋಲಾರ ಎಸ್ಪಿ ಕನ್ನಿಕಾ ಸಿಕ್ರಿವಾಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ಬೊಲೇರೋ ವಾಹನ ಚಾಲಕ ಗಾಡಿ ಪಲ್ಟಿಯಾಗುತ್ತಿದ್ದಂತೆ ಪರಾರಿಯಾಗಿದ್ದಾನೆ. ಶ್ರೀನಿವಾಸಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.ಉಪನ್ಯಾಸಕ ನೇಣು ಬಿಗಿದುಕೊಂಡು ಆತ್ಮಹತ್ಯೆ

ಕೋಲಾರ:

ಉಪನ್ಯಾಸಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಖಾದ್ರಿಪುರದಲ್ಲಿ ನಡೆದಿದೆ.

ಮೋನಿಶ್ (36) ಆತ್ಮಹತ್ಯೆಗೆ ಶರಣಾದ ಉಪನ್ಯಾಸಕರಾಗಿದ್ದು, ಕೋಲಾರದ ಸಿಬಿಐಟಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.

ಪತ್ನಿ ವೇದವತಿ ಕೆಲಸಕ್ಕೆ ಹೋಗಿದ್ದ ವೇಳೆ ನೇಣಿಗೆ ಶರಣಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

]ನನ್ನ ಬಗ್ಗೆ ಇಲ್ಲಸಲ್ಲದ ಟೀಕೆ ಮಾಡಿದರೆ ಜನ ನಂಬಲ್ಲ: ಶಾಸಕ ಗಣೇಶ್‌
ವಿದ್ಯಾರ್ಥಿಗಳಿಗೆ ಕಲಿಕಾ ಸಾಮರ್ಥ್ಯ ಹೆಚ್ಚಳಕ್ಕೆ ವಿಶೇಷ ತರಗತಿಗಳು ವರದಾನ: ಡಾ.ಯೋಗೇಶ್