ಮಕ್ಕಳ ಪಾಲನೆಗೆ ಹೆಚ್ಚು ಸಮಯ ನೀಡಿ

KannadaprabhaNewsNetwork |  
Published : Jan 16, 2025, 12:47 AM IST
ಮಕ್ಕಳಿಗೆ ವಿದ್ಯೆಯೊಂದಿಗೆ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ಬದುಕುತ್ತಿದ್ದು ಕೇವಲ ಹಣ ಸಂಪಾದನೆಗಷ್ಟೇ ಮಹತ್ವ ನೀಡುತ್ತಿದ್ದು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ, ಶಿಕ್ಷಣದೊಂದಿಗೆ ಮಕ್ಕಳ ಪ್ರತಿಭೆಗೂ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರುವು ಪ್ರಯತ್ನ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರೂ ಒತ್ತಡದ ಬದುಕಿನಲ್ಲಿ ಬದುಕುತ್ತಿದ್ದು ಕೇವಲ ಹಣ ಸಂಪಾದನೆಗಷ್ಟೇ ಮಹತ್ವ ನೀಡುತ್ತಿದ್ದು ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸುತ್ತಿಲ್ಲ, ಶಿಕ್ಷಣದೊಂದಿಗೆ ಮಕ್ಕಳ ಪ್ರತಿಭೆಗೂ ಹೆಚ್ಚು ಒತ್ತು ನೀಡುವ ಮೂಲಕ ಮಕ್ಕಳನ್ನು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತರುವು ಪ್ರಯತ್ನ ಮಾಡಬೇಕು ಎಂದು ಎಲೆರಾಂಪುರ ಕುಂಚಿಟಿಗ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ.ಶ್ರೀ ಹನುಮಂತನಾಥಸ್ವಾಮೀಜಿ ತಿಳಿಸಿದರು.

ಪಟ್ಟಣದ ಎಂ.ಜಿ ಪ್ಯಾಲೇಸ್ ನಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ಸಂಭ್ರಮ ೨೪-೨೫ ರ ವಾರ್ಷಿಕೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು.

ಮುಂದಿನ ಭವಿಷಕ್ಕೆ ಉತ್ತಮ ಹಣ ಸಂಪಾದನೆ ಮಾಡಬೇಕು ಎನ್ನುವ ಕಾರಣ ಪೋಷಕರಿಬ್ಬರೂ ಸಂಪಾದನೆಗೆ ತೆರಳುತ್ತಿದ್ದು ಮಕ್ಕಳ ಬಾಲ್ಯ ಮತ್ತು ವಿದ್ಯಾಭ್ಯಾಸದ ಕಡೆ ಆದ್ಯತೆಯನ್ನು ನೀಡದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಆದ್ದರಿಂದ ಪೋಷಕರು ಜಾಗೃತರಾಗಬೇಕು,ಮಕ್ಕಳಿಗೆ ಉತ್ತಮ ರೀತಿಯಾದ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಕಲಿಸುವಂತಹ ಜವಾಬ್ದಾರಿಯನ್ನು ನಿರ್ವಹಿಸಬೇಕಿದೆ ಎಂದು ತಿಳಿಸಿದರು.

ವಿಧಾನಪರಿಷತ್ ಸದಸ್ಯ ಟಿ.ಎ ಶರವಣ ಮಾತನಾಡಿ, ಪೋಷಕರು ಮಕ್ಕಳಿಗೆ ಆಸ್ತಿಯನ್ನು ಮಾಡಬೇಕು ಇನ್ನು ಕಲ್ಪನೆಯನ್ನು ಬಿಟ್ಟು ಸಮಾಜಕ್ಕೆ ಮಕ್ಕಳನ್ನು ಆಸ್ತಿಯನ್ನಾಗಿ ಮಾಡುವ ಮೂಲಕ ಉತ್ತಮ ಭವಿಷ್ಯದ ಪ್ರಜೆಗಳನ್ನಾಗಿ ಮಾಡಬೇಕು ಎಂದರು.

ಮಕ್ಕಳ ತಜ್ಞ ಡಾ.ಎಂ.ಎಸ್ ಪ್ರಕಾಶ್‌ ಮಾತನಾಡಿ, ಮಕ್ಕಳು ಇಂದು ಒತ್ತಡದಲ್ಲಿ ಬದುಕುತ್ತಿದ್ದು ಇದಕ್ಕೆ ಮುಖ್ಯ ಕಾರಣ ನಮ್ಮ ಪ್ರಚಲಿತ ಸಮಾಜ,ಶಿಕ್ಷಣ ಪದ್ಧತಿ ಜೊತೆಗೆ, ತಂತ್ರಜ್ಞಾನದಿಂದ ಮಕ್ಕಳಿಗೆ ಸಿಗುತ್ತಿರುವ ಟಿವಿ,ಮೊಬೈಲ್, ವಿಡಿಯೋ ಗೇಮ್‌ಗಳು ಕಾರಣವಾಗಿದ್ದು ಇದರಿಂದ ಮಕ್ಕಳನ್ನು ರಕ್ಷಿಸುವ ಅನಿವಾರ್ಯತೆ ನಮ್ಮೆಲ್ಲರ ಮೇಲಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶಾಲೆಗೆ ಕೀರ್ತಿ ತಂದ ಹಿರಿಯ ವಿದ್ಯಾರ್ಥಿ ಡಾ.ಪ್ರೇಮ್ ಕುಮಾರ್ ಅವರನ್ನು ಶಾಲಾ ಆಡಳಿತ ಮಂಡಳಿ ವತಿಯಿಂದ ಅಭಿನಂದಿಸಲಾಯಿತು.

ಇದೆ ಸಂದರ್ಭದಲ್ಲಿ ಕನ್ನಿಕಾ ವಿದ್ಯಾಪೀಠ ಶಾಲೆಯ ಅಧ್ಯಕ್ಷ ಎಂ.ಜಿ ಸುಧೀರ್,ಉಪಾಧ್ಯಕ್ಷ ಕೆ.ಎಸ್ ಶ್ರೀನಿವಾಸ್, ಕಾರ್ಯದರ್ಶಿ ರಘು, ಕೆಎಸ್ ರಾಧಾಕೃಷ್ಣ, ಲಕ್ಷ್ಮಿ ಪ್ರಸಾದ್, ಚಿನ್ನ ವೆಂಕಟಶೆಟ್ಟಿ, ಸತೀಶ್ ಸೌಮ್ಯ, ಹೆಚ್.ಸಿ ನಾಗೇಂದ್ರ ಬಾಬು, ಕೆ.ಎನ್ ಸುಭಾಷಿಣಿ ಮತ್ತು ಕೆ.ಕೆ ನವೀನ್ ಕುಮಾರ್, ಕೃಷ್ಣಯ್ಯ ಶೆಟ್ಟಿ, ಕನ್ನಿಕಾ ಔದಾರ್ಯ ಸಂಸ್ಥೆ ಎಚ್.ಎಸ್ ಬದರಿನಾಥ್, ವಾಸವಿ ಹೆಚ್. ಎನ್ ದಿನೇಶ್, ಭಾಗ್ಯಲಕ್ಷ್ಮಿ ಗುಂಡಯ್ಯ ಶೆಟ್ಟಿ ,ಮುಖ್ಯ ಶಿಕ್ಷಕ ರಾಘವೇಂದ್ರ ಡಿ.ಎಂ ಸೇರಿದಂತೆ ಇತರರು ಇದ್ದರು.

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ