ಕನ್ನಡಪ್ರಭ ವಾರ್ತೆ ಮಾಲೂರು
ಪಟ್ಟಣದ ತಾಪಂ ನೂತನ ಕಾರ್ಯಾಲಯದ ವಿಡಿಯೋ ಕಾನ್ಫರೆನ್ಸ್ ಸಭಾಂಗಣವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಧಿಕಾರಿಗಳಾಗಲಿ, ಚುನಾಯಿತ ಪ್ರತಿನಿಧಿಗಳಾಗಲಿ, ತಮ್ಮ ಅಧಿಕಾರವಧಿಯಲ್ಲಿ ಮಾಡುವ ಕೆಲಸಗಳು ಶಾಶ್ವತವಾಗಿರುತ್ತವೆ, ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಅವಕಾಶ ಸಿಕ್ಕಾಗ ಬಳಸಿಕೊಂಡು ಉತ್ತಮ ಕೆಲಸಗಳನ್ನು ಮಾಡಬೇಕು, ಇಲ್ಲಿನ ತಾಪಂ ಸಿಇಒ ವಿ.ಕೃಷ್ಣಪ್ಪ ಅವರು ತಾಪಂ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ. ಅಲ್ಲದೆ ನೂತನವಾಗಿ ವಿಡಿಯೋ ಕಾನ್ಫರೆನ್ಸ್ ಹಾಲ್‌ಅನ್ನು ಮಾಡಿಸಿದ್ದು, ಈ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಸಭೆಗಳನ್ನು ನಡೆಸಲು ಅನುಕೂಲವಾಗುತ್ತದೆ ಎಂದರು.
ತಾಲೂಕಿಗೆ ನಾನು ಶಾಸಕನಾದ ನಂತರ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರಲಾಗಿದೆ, ಯಾವ ಶಾಸಕರೂ ಹಿಂದೆ ತಾಲೂಕಿಗೆ ತರಲಾಗದಷ್ಟು ಅನುದಾನ ತಂದಿದ್ದು, ಒಂದುವರೆ ವರ್ಷದಲ್ಲಿ ಇತಿಹಾಸದಲ್ಲಿ ಉಳಿದುಕೊಳ್ಳುವ ಶಾಶ್ವತ ಕೆಲಸಗಳನ್ನು ಮಾಡಲಾಗುವುದು, ತಾಲೂಕಿನ ಅಭಿವೃದ್ಧಿ ಯೋಜನೆಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರ ಸುಮಾರು ೧,೦೦೦ ಕೋಟಿ ರು. ಅನುದಾನವನ್ನು ನೀಡಲಿದೆ ಎಂದರು.ತಾಪಂ ಸಿಇಒ ವಿ.ಕೃಷ್ಣಪ್ಪ ಮಾತನಾಡಿ, ವಿಡಿಯೋ ಕಾನ್ಫರೆನ್ಸ್ ಸಭೆಗಳನ್ನು ನಡೆಸಲು ನೂತನವಾಗಿ ನಿರ್ಮಿಸಿರುವ ಹಾಲ್ ಸಹಕಾರಿಯಾಗಲಿದೆ ಎಂದರು.ತಹಸೀಲ್ದಾರ್ ಕೆ. ರಮೇಶ್, ಪುರಸಭೆ ಅಧ್ಯಕ್ಷ ಕೋಮಲ ನಾರಾಯಣ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹಿಂ ಉಲ್ಲಾ ಖಾನ್ ,ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಮುನೇಗೌಡ ಇನ್ನಿತರರಿದ್ದರು.