ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಬಸವನಹಳ್ಳಿ ಕುಂಬಾರಬೀದಿಗೆ ಭೇಟಿ
ಸಾರ್ವಜನಿಕರು ಮಣ್ಣಿನಿಂದ ತಯಾರಿಸಿದ ಪರಿಸರ ಸ್ನೇಹಿ ಗೌರಿ-ಗಣೇಶ ಮೂರ್ತಿಗಳನ್ನೇ ಖರೀದಿಸುವಂತೆ ನಗರಸಭೆ ಆಯುಕ್ತ ಬಿ.ಸಿ ಬಸವರಾಜ್ ಮನವಿ ಮಾಡಿದ್ದಾರೆ.
ಹಬ್ಬದ ಪ್ರಯುಕ್ತ ನಗರದ ಹಲವೆಡೆ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿರುವ ಬಸವನಹಳ್ಳಿ ಕುಂಬಾರಬೀದಿ ಸೇರಿದಂತೆ ವಿವಿಧ ಭಾಗಗಳಿಗೆ ಬುಧವಾರ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದ ಅವರು.ಜಿಲ್ಲೆಯ ಸಾರ್ವಜನಿಕರು ಪ್ಲಾಸ್ಟರ್ ಆಫ್ ಪ್ಯಾರಿಸ್ ನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಖರೀದಿಸದೆ ಜಿಲ್ಲೆಯಲ್ಲಿ ಮಣ್ಣಿ ನಿಂದ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳನ್ನು ಖರೀದಿಸುವ ಮೂಲಕ ನಗರದಲ್ಲಿ ಗಣೇಶಮೂರ್ತಿ ತಯಾರಕರಿಗೆ ಪ್ರೋತ್ಸಾಹ ನೀಡಬೇಕೆಂದು ಹೇಳಿದರು.ಜಲಚರಗಳಿಗೆ ಕಂಟಕವಾದ ಪ್ಲಾಸ್ಟರ್ ಆಫ್ ಪ್ಯಾರಿಸ್ ವಿಗ್ರಹಗಳಿಗೆ ಬಳಸುವ ಪೇಂಟ್‌ಗಳಲ್ಲಿ ಸೀಸದಂತಹ ರಾಸಾಯನಿಕ ಗಳಿರುತ್ತದೆ ಇದು ನೀರಿನಲ್ಲಿ ಸುಲಭವಾಗಿ ಕರಗಲ್ಲ ಕೆಮಿಕಲ್ ಮತ್ತು ಬಣ್ಣಗಳು ನೀರಿನಲ್ಲಿರುವ ಮೀನು ಹಾಗೂ ಇತರ ಜೀವಿ ಗಳ ಸಾವಿಗೆ ಕಾರಣವಾಗುತ್ತದೆ .ರಾಸಾಯನಿಕ ಮುಕ್ತ ನೈಸರ್ಗಿಕ ಬಣ್ಣಗಳಾದ ಅರಿಶಿಣ, ಕುಂಕುಮ ಅಥವಾ ತರಕಾರಿ ಗಳಿಂದ ತಯಾರಿಸಿದ ಬಣ್ಣ ಬಳಸಿ ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.ಹೊರಜಿಲ್ಲೆಗಳಿಂದ ಬರುವ ಪ್ಲಾಸ್ಟರ್ ಆಫ್ ಪ್ಯಾರಿಸ್ ಮಿಶ್ರಿತ ಗಣೇಶ ಮೂರ್ತಿಗಳನ್ನು ನಗರಕ್ಕೆ ತರದಂತೆ ಸಂಪೂರ್ಣ ನಿಷೇಧಿಸಲಾಗಿದೆ. ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿದೆ ಎಂದರು.