ರಾಮನಗರ: ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ (ಸಿಲ್ಕ್ ರೀಲರ್ಸ್) ವಿವಿಧ ಯೋಜನೆಗಳಡಿ ಸರ್ಕಾರದ ವತಿಯಿಂದ ಸಿಗುವ ಸವಲತ್ತು ಗಳನ್ನು ನೀಡುವಂತೆ ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ್ ಅವರಿಗೆ ಯೂತ್ ಸಿಲ್ಕ್ ರೀಲರ್ಸ್ ವೇಲ್‌ಫೇರ್ ಅಸೋಸಿಯೇಷನ್ ನ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ.ಈ ಕುರಿತು ಅಸೋಸಿಯೇಷನ್ ಉಪಾಧ್ಯಕ ಪ್ಯಾರಿ ಫಯಾಜ್ ಪಾಷ ಸಚಿವರೊಂದಿಗೆ ಮಾತನಾಡಿ, ಸರ್ಕಾರದ ವತಿಯಿಂದ ರೈತರಿಗೆ ಗುಣಮಟ್ಟದ ರೇಷ್ಮೆ ಬಿತ್ತನೆ ತಳಿ ಸರಬರಾಜು ಮಾಡಬೇಕು. ಇದರಿಂದ ಉತ್ತಮ ಇಳುವರಿಯೊಂದಿಗೆ ಗುಣಮಟ್ಟದ ಗೂಡು ಬರುತ್ತದೆ. ರೀಲರ್ಸ್ ಗಳಿಗೂ ಉತ್ತಮ ರೇಷ್ಮೆ ನೂಲು ಬಿಚ್ಚಾಣಿಕೆಯೊಂದಿಗೆ ಉತ್ತಮ ದರ ಸಿಗುತ್ತದೆ ಎಂದು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿದೆ. ಬಹು ಮುಖ್ಯವಾಗಿ ರೇಷ್ಮೆ ರೀಲರ್ಸ್ ಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದಾಗ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾಗಿ ಹೇಳಿದರು.
ಸಚಿವರ ಭೇಟಿ ವೇಳೆ ಯೂತ್ ಸಿಲ್ಕ್ ರೀಲರ್ಸ್ ವೇಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ಸೈಯದ್ ಅಕ್ಲೀಂ ಅಬ್ರಾರ್, ಪ್ರಧಾನ ಕಾರ್ಯದರ್ಶಿ ಮುಸಾಯಿಬ್ ಪಾಷ, ಕಾರ್ಯದರ್ಶಿ ಮೋಸಿನ್‌ಪಾಷ, ಖಜಾಂಚಿ ಉರ್ಮದ್ ಬೇಗ್, ನಿರ್ದೇಶಕರಾದ ಪರ್ವಿಜ್, ಟಿಪ್ಪು, ಜಮೀಲ್, ಯಾಸಿರ್, ಶೇಖ್ ಮುಜೀಬ್, ಲಾಲೂ ಹಾಜರಿದ್ದರು.
---------------------------22ಕೆಆರ್ ಎಂಎನ್ 1.ಜೆಪಿಜಿ
ರೇಷ್ಮೆ ಖಾತೆ ಸಚಿವರಾದ ಕೆ.ವೆಂಕಟೇಶ್ ಅವರೊಂದಿಗೆ ಯೂತ್ ಸಿಲ್ಕ್ ರೀಲರ್ಸ್ ವೇಲ್‌ಫೇರ್ ಅಸೋಸಿಯೇಷನ್ ನ ಪದಾಧಿಕಾರಿಗಳು ಚರ್ಚೆ ನಡೆಸಿದರು.