ಹಮಾಲಿಗಳಿಗೂ ನಿವೃತ್ತಿ ವೇತನ ನೀಡಿ

KannadaprabhaNewsNetwork |  
Published : May 02, 2025, 12:14 AM IST
ಪೋಟೋ: 01ಎಸ್‌ಎಂಜಿಕೆಪಿ06ಶಿವಮೊಗ್ಗ:ಸಿಐಟಿಯು ನೇತೃತ್ವದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು. | Kannada Prabha

ಸಾರಾಂಶ

ಶಿವಮೊಗ್ಗ: ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟದಿಂದಾಗಿ ಕಾರ್ಮಿಕ ದಿನಾಚರಣೆ ಪ್ರಾರಂಭವಾಯಿತು ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಿವಪ್ಪ ತಿಳಿಸಿದರು.

ಶಿವಮೊಗ್ಗ: ಕಾರ್ಮಿಕರಿಗೆ ದುಡಿಮೆಗೆ ತಕ್ಕ ಪ್ರತಿಫಲ ಸಿಗುತ್ತಿರಲಿಲ್ಲ. ಶ್ರಮಕ್ಕೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟದಿಂದಾಗಿ ಕಾರ್ಮಿಕ ದಿನಾಚರಣೆ ಪ್ರಾರಂಭವಾಯಿತು ಎಂದು ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಗೌರವಾಧ್ಯಕ್ಷ ಕೆ.ಎಸ್.ಶಿವಪ್ಪ ತಿಳಿಸಿದರು.

ಗುರುವಾರ ನಗರದ ಎಪಿಎಂಸಿ ಆವರಣದಲ್ಲಿ ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದಿಂದ ಹಮ್ಮಿಕೊಂಡಿದ್ದ ಮೇ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಆಮೇರಿಕದಲ್ಲಿ ಮೊದಲು ದುಡಿಮೆಗೆ ತಕ್ಕ ಪ್ರತಿಫಲ ನೀಡಬೇಕೆಂಬ ಹೋರಾಟ ಪ್ರಾರಂಭವಾಗಿ ಬಳಿಕ ವಿಶ್ವಸಂಸ್ಥೆಯಿಂದ ಕಾರ್ಮಿಕ ದಿನಾಚರಣೆಯಾಗಿ ಮೇ 1 ರಂದು ನಿಗದಿಯಾಯಿತು. ಅಸಂಘಟಿಕತ ಕಾರ್ಮಿಕರಿಗೆ ಇವತ್ತಿಗೂ ಜೀವನದ ಭದ್ರತೆ ಇಲ್ಲ. ಜೀವ ಗಟ್ಟಿ ಇರುವವರೆಗೆ ಮಾತ್ರ ಅವರಿಗೆ ಕೂಲಿ ಸಿಗುತ್ತದೆ. ಕಾರ್ಮಿಕ ಕಾನೂನುಗಳು ಎಲ್ಲರಿಗೂ ಅನ್ವಯವಾಗದೇ ಇರುವುದರಿಂದ ಹಮಾಲಿಗಳು ಇದರಿಂದ ವಂಚಿತರಾಗಿದ್ದಾರೆ. ಸರ್ಕಾರ ಹಮಾಲಿಗಳಿಗೂ ನಿವೃತ್ತಿ ವೇತನ ನೀಡಬೇಕು ಎಂದು ಒತ್ತಾಯಿಸಿದರು.

ಇದು ನಮ್ಮ ಬಹು ವರ್ಷದ ಬೇಡಿಕೆಯಾಗಿದೆ. ಶಕ್ತಿಹೀನರಾದರೆ ಯಾರೂ ನಮ್ಮನ್ನು ಮಾತನಾಡಿಸುವುದಿಲ್ಲ. ಆಗಾಗಿ ಹಮಾಲಿ ಕಾರ್ಮಿಕರು ಸಂಘಟಿತರಾಗಿ ತಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರವನ್ನು ಒತ್ತಾಯಿಸಬೇಕು. ಇವತ್ತಿನ ದಿನ ಹಮಾಲಿ ಕಾರ್ಮಿಕರ ಸಂಘದ ಹಬ್ಬದ ದಿನವಾಗಿದೆ ಎಂದರು.

ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷರಾದ ಕೆ.ಮಣಿ, ಉಪಾಧ್ಯಕ್ಷರಾದ ಶೇಖ್ ಇಮ್ರಾನ್, ಕಾರ್ಯದರ್ಶಿ ಎಚ್.ಶಿವಾನಂದಪ್ಪ, ಪ್ರಮುಖರಾದ ಜಾವೀದ್, ಯಶ್ವಂತ್, ಸಲೀಂ, ಎ.ಪಳನಿ, ಶರವಣ, ಸಂತೋಷ್‌ಕುಮಾರ್, ವೆಂಕಟರಮಣ, ಎಂ.ಕೆ.ಬುಡೇನ್ ಖಾನ್ ಮತ್ತಿತರರು ಇದ್ದರು.

ಗಿಗ್ ಕಾರ್ಮಿಕರೊಂದಿಗೆ ಕಾರ್ಮಿಕ ದಿನ ಆಚರಣೆ

ಶಿವಮೊಗ್ಗ: ಶಿವಮೊಗ್ಗ ಯುವ ಕಾಂಗ್ರೆಸ್‌ನಿಂದ ನಗರದ ಬ್ಲಿಂಕ್ ಇಟ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಜೋಮೋಟೊ, ಅಮೆಜಾನ್ ಹೊಮ್ ಡೆಲಿವರಿ ಕಂಪನಿಗಳಲ್ಲಿ ಕಾರ್ಯನಿರ್ವಹಿಸುವ ಡೆಲಿವರಿ ಬಾಯ್ಸ್ ಗೀಗ್ ಕಾರ್ಮಿಕರಿಗೆ ಸಿಹಿ ಹಂಚಿ ಕಾರ್ಮಿಕ ದಿನಾಚರಣೆಯ ಶುಭಾಶಯಗಳು ಕೋರಲಾಯಿತು

ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆ.ರಂಗನಾಥ್, ಡಾ.ದಿನೇಶ್, ಜಿಲ್ಲಾ ಯುವ ಕಾಂಗ್ರೆಸ್ ನ ಎಚ್.ಪಿ.ಗಿರೀಶ್, ಗ್ಯಾರಂಟಿ ಯೋಜನೆಗಳ ಸದಸ್ಯ ಎಸ್.ಕುಮಾರೇಶ್, ಯುವ ಕಾಂಗ್ರೆಸ್ ನ ಪದಾಧಿಕಾರಿಗಳಾದ ಕೆ.ಎಲ್.ಪವನ್, ಟಿ.ಗುರುಪ್ರಸಾದ್, ರಾಜೇಶ್ ಮಂದಾರ, ಜಿ.ಕಿರಣ್ ಕುಮಾರ್, ಎಸ್.ಜಿ.ಮಿಥುನ್, ಆರ್.ಕಿರಣ್, ಎಸ್.ಎಸ್.ಶರತ್, ಸಂಜಯ್, ಮಂಜುನಾಥ್ ಮತ್ತಿತರರಿದ್ದರು.

ಸಿಐಟಿಯು ನೇತೃತ್ವದಲ್ಲಿ ಕಾರ್ಮಿಕರ ದಿನ ಆಚರಣೆ

ಶಿವಮೊಗ್ಗ: ಸಿಐಟಿಯು ನೇತೃತ್ವದಲ್ಲಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗ ವಿವಿಧ ಕಾರ್ಮಿಕ ಸಂಘಟನೆಗಳ ವತಿಯಿಂದ ಕಾರ್ಮಿಕ ದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಿಐಟಿಯು ಪ್ರಮುಖರಾದ ನಾರಾಯಣ್, ಹನುಮಮ್ಮ, ಆನಂತರಾಮ್, ಕುಲಕಣಿ, ರಂಗಸ್ವಾಮಿ, ಮುನಿರಾಜು, ಶಿವರಾಜು, ಕೆ.ಎಸ್.ಆರ್.ಟಿ.ಸಿ.ರಾಜು ಇದ್ದರು.

PREV

Recommended Stories

ಬೆಂಗಳೂರಿನ ಬಾರ್‌ಗಳಲ್ಲಿ ವೋಟ್‌ ಖರೀದಿ ಲೆಕ್ಕಾಚಾರ!!!
ಸಿಎಂಗೆ ಕಣ್ಣು ಪರೀಕ್ಷೆ ನಡೆಸಿ ಎರಡು ಕನ್ನಡಕ ಕೊಟ್ಟ ಶಾಸಕ ಶ್ರೀನಿವಾಸ್‌