ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ಪೋಷಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು. ಮಕ್ಕಳನ್ನು ಮೊಬೈಲ್ ಹಾವಳಿಯಿಂದ ದೂರವಿರುವಂತೆ ನೋಡಿಕೊಳ್ಳಬೇಕು ಎಂದು ಕೆಸವತ್ತೂರು ಮಠದ ಯತಿಗಳಾದ ಶ್ರೀ ಬಸವರಾಜೇಂದ್ರ ಸ್ವಾಮಿಗಳು ತಿಳಿಸಿದರು.ಅವರು ಸೇವಾದುರೀಣರಾದ ತಾಲೂಕು ಕುಂಚಿಟಿಗರ ಸಂಘದ ಅಧ್ಯಕ್ಷರಾದ ಪಾಂಡುರಂಗ ಅವರ ೫೦ನೇ ವರ್ಷದ ಸುವರ್ಣ ಸಂಭ್ರಮ ಆಚರಣೆಯಲ್ಲಿ ಆಶೀರ್ವಚನ ನೀಡಿ ಮಾತನಾಡುತ್ತಾ, ಸರಳ ಜೀವನದ ಜೊತೆಗೆ ಸಂಸ್ಕಾರವಂತರಾಗಿ ಬೆಳೆದಾಗ ಸಮಾಜದಲ್ಲಿ ಶಾಂತಿ, ನೆಮ್ಮದಿ, ಇರುತ್ತದೆ ಎಂದರು.
ಪಾಂಡುರಂಗರವರು ಸರಳ ಜೀವನ ನಡೆಸುತ್ತಿದ್ದಾರೆ. ಪಾಂಡುರಂಗರವರು ಎಲೆಮರೆ ಕಾಯಿಯಾಗಿ ಸಮಾಜದ ಸೇವೆ ಮಾಡುತ್ತಿದ್ದು, ಇಂತಹ ವ್ಯಕ್ತಿಗಳು ಸಮಾಜಸೇವಾ ಕ್ಷೇತ್ರಕ್ಕೆ ಆಗಮಿಸಬೇಕು. ೬ ವರ್ಷದಿಂದ ಶವ ಸಂಸ್ಕಾರಗಳಿಗೆ ಗುಣಿಯನ್ನು ತೋಡಿ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಮೈಸೂರಿನ ವಿದ್ಯಾರಣ್ಯಪುರಂ ರುದ್ರಭೂಮಿಯಲ್ಲಿ ಶವ ಸಂಸ್ಕಾರಗಳಿಗೆ ಗುಣಿಯನ್ನು ತೆಗೆಯುವ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.ಕಾರ್ಯಕ್ರಮದಲ್ಲಿ ನಿಲುವಾಗಲು ಗ್ರಾಮದ ಅರ್ಚಕರಾದ ಶ್ರೀ ಸಂಬಯ್ಯ, ನರಸಿಂಹಯ್ಯ, ಸುಶೀಲ, ಚೆನ್ನಯ್ಯ ಮುನಿಯಪ್ಪ, ಮಣಿಯಮ್ಮ, ನಂಜಮ್ಮ, ತಿಮ್ಮಯ್ಯ, ಹಲವರನ್ನು ಸನ್ಮಾನಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಕಲಗೂಡು ತಾಲೂಕು ಸ್ವಸ್ಥ್ಯ ಸಮಾಜ ನಿರ್ಮಾಣ ಸಮಿತಿಯ ಅಧ್ಯಕ್ಷರಾದ ಪ್ರದೀಪ್‌ಎ.ಟಿ ರಾಮಸ್ವಾಮಿರವರು ವಹಿಸಿದ್ದರು. ಸೇವಾ ಮನೋಧರ್ಮ ಬೆಳಸಿಕೊಳ್ಳಬೇಕು. ತಂದೆ ತಾಯಿಗಳನ್ನು ವೃದ್ಧರಾದಾಗ ಪ್ರೀತಿ, ವಿಶ್ವಾಸದಿಂದ ನೋಡಿಕೊಂಡಾಗ ಮಾತ್ರ ಮುಂದಿನ ಜನ್ಮದಲ್ಲಿ ನಮ್ಮ ಧರ್ಮಕಾರ್ಯಗಳ ಜೀವನ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ಸಮಾಜ ಸೇವಾದುರಿಣೆ ನೀಲಮ್ಮ ನವರು ಉದ್ಘಾಟಿಸಿದರು. ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಕೇಶವ ಪ್ರಸಾದ್, ಅರಕಲಗೂಡು ತಾಲೂಕು ಕುಂಚಟಿಗ ಸಮಾಜದ ಗೌರವಾಧ್ಯಕ್ಷರದ ಬಿ ಗೋವಿಂದ, ಮುಖಂಡರಾದ ಮಂಜುನಾಥ, ಅರಸ್, ತಿಮ್ಮೇಗೌಡ, ದೋಡ್ಡಕ್ಯಾತೆಗೌಡ, ಕೃಷ್ಣಗೌಡ, ಲಕ್ಷ್ಮಮ್ಮ, ಕೃಷ್ಣ, ಸುಬ್ಬೇಗೌಡ ಹಾಜರಿದ್ದರು.=============================
ಫೊಟೋ:16ಎಚ್ಎಸ್ಎನ್14 : ಕಾರ್ಯಕ್ರಮವನ್ನು ಕೆಸವತ್ತೂರು ಮಠದ ಯತಿಗಳಾದ ಶ್ರೀ ಬಸವರಾಜೇಂದ್ರ ಸ್ವಾಮಿಗಳು ಉದ್ಘಾಟಿಸಿದರು.