ಕನ್ನಡಪ್ರಭ ವಾರ್ತೆ ಸವದತ್ತಿ
ಪ್ರತಿಭಟನೆ ನೇತೃತ್ವ ವಹಿಸಿದ್ದ ಎಲ್.ಎಸ್.ನಾಯಕ ಮಾತನಾಡಿ, ವಂಟಮೂರಿಯಲ್ಲಿ ಮಹಿಳೆಯ ಮೇಲೆ ಆಗಿರುವಂತ ದೌರ್ಜನ್ಯವನ್ನು ಅವಲೋಕಿಸಿದಾಗ ಇಂದು ಜ್ಞಾನ ತಂತ್ರಜ್ಞಾನ ಪ್ರಗತಿಯಲ್ಲಿದ್ದರೂ ಸಹಿತ 21ನೇ ಶತಮಾನದಿಂದ ನಾವು ಹಿಂದಿನ ಶತಮಾನದತ್ತ ಸಾಗುತ್ತಿದ್ದೇವೆನೋ ಎಂಬ ಭಾಸವಾಗುತ್ತಿದೆ. ಈ ಹೀನ ಘಟನೆಯಲ್ಲಿ ಪಾಲ್ಗೊಂಡಂತ ದುರುಳರಿಗೆ ಶಿಕ್ಷೆ ವಿಧಿಸಿ ಸಮಾಜದಲ್ಲಿ ಶಾಂತಿ ನೆಲೆಸುವಂತ ವಾತಾವರಣ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಶ್ರೀಕಾಂತ ಹಟ್ಟಿಹೊಳಿ ಮಾತನಾಡಿ, ಮಹಿಳೆಯನ್ನು ಬೆತ್ತಲೆಗೊಳಿಸಿ ಅವಳಿಗೆ ಚಿತ್ರಹಿಂಸೆ ನೀಡಿರುವ ಘಟನೆ ಖಂಡನಾರ್ಹವಾಗಿದ್ದು, ಈ ದೌರ್ಜನ್ಯ ಪಶು ಪ್ರವೃತ್ತಿಯನ್ನು ನಾಚಿಸುವಷ್ಟು ಅಮಾನುಷವಾಗಿರುವುದರಿಂದ ತಪ್ಪಿತಸ್ಥರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಅಕ್ಷರದಾಸೋಹ ಕಾರ್ಯಕರ್ತೆಯರು ಘಟನೆಯನ್ನು ಖಂಡಿಸಿ ಶ್ರೀಕಲ್ಮಠದಿಂದ ಪ್ರತಿಭಟನೆಯನ್ನು ಆರಂಭಿಸಿ ಪಟ್ಟಣದ ಪ್ರಮುಖ ರಸ್ತೆಗಳ ಮೂಲಕ ಪ್ರತಿಭಟನಾ ಘೋಷಣೆ ಕೂಗುತ್ತ ಮಿನಿವಿಧಾನಸೌಧ ತಲುಪಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.