ಪ್ರಜಾಸೌಧ ಕಟ್ಟಡವನ್ನು ಹಳೆ ತಹಸೀಲ್ ಕಾರ್ಯಾಲಯ ಜಾಗದಲ್ಲಿ ನಿರ್ಮಿಸಬೇಕು ಮತ್ತು ಶಿಕ್ಷಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ಕಟ್ಟಬೇಕೆಂಬ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಬಿಜೆಪಿ ಯುವ ನಾಯಕ ಅಮೀನರಡ್ಡಿ ಯಾಳಗಿ ಆಗ್ರಹಿಸಿ, ನೂರಾರು ಕಾರ್ಯಕರ್ತರೊಂದಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ನೀಡಿದರು.
ಯಾದಗಿರಿ: ಪ್ರಜಾಸೌಧ ಕಟ್ಟಡವನ್ನು ಹಳೆ ತಹಸೀಲ್ ಕಾರ್ಯಾಲಯ ಜಾಗದಲ್ಲಿ ನಿರ್ಮಿಸಬೇಕು ಮತ್ತು ಶಿಕ್ಷಣಕ್ಕಾಗಿ ಮೀಸಲಿಟ್ಟ ಜಾಗದಲ್ಲಿ ಪ್ರಜಾಸೌಧ ಕಟ್ಟಬೇಕೆಂಬ ನಿರ್ಧಾರವನ್ನು ತಕ್ಷಣವೇ ಹಿಂಪಡೆಯುವಂತೆ ಬಿಜೆಪಿ ಯುವ ನಾಯಕ ಅಮೀನರಡ್ಡಿ ಯಾಳಗಿ ಆಗ್ರಹಿಸಿ, ನೂರಾರು ಕಾರ್ಯಕರ್ತರೊಂದಿಗೆ ತೆರಳಿ ತಹಸೀಲ್ದಾರರಿಗೆ ಮನವಿ ಪತ್ರ ನೀಡಿದರು.
ನಗರದಲ್ಲಿ ಪ್ರಜಾಸೌಧ ಆಡಳಿತ ಕಚೇರಿ ಹೋರಾಟ ಸಮಿತಿಯಿಂದ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಸತ್ಯಾಗ್ರಹಕ್ಕೆ ಬೆಂಬಲ ಸೂಚಿಸಿ ಅವರು ಮಾತನಾಡಿರು.ಶೈಕ್ಷಣಿಕ ವ್ಯವಸ್ಥೆಗೆ ಪ್ರಜಾಸೌಧವು ಮಾರಕವಾಗಲಿದ್ದು, ವಿದ್ಯಾರ್ಥಿಗಳ ವಿಕಾಸಕ್ಕಾಗಿ ಹೊಸ ಹೊಸ ವೃತ್ತಿಪರ ಕೋರ್ಸ್‌ಗಳನ್ನು ತಂದು, ಸ್ನಾತಕೋತ್ತರ, ವೈದ್ಯಕೀಯಕ್ಕೆ ಸಂಬಂಧಿಸಿದ ಕಟ್ಟಗಳನ್ನು ನಿರ್ಮಾಣಮಾಡಿ, ಭವಿಷ್ಯದ ಪೀಳಿಗೆಗೆ ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ತೆಗೆದುಕೊಂಡು, ಪ್ರಜಾಸೌಧ ಬೇರೆಡೆ ಸ್ಥಳಾಂತರಿಸಿದರೆ ಒಳ್ಳೆಯದು, ಇಲ್ಲವಾದಲ್ಲಿ, ಈಗಾಗಲೇ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮತ್ತು ಎಬಿವಿಪಿ ಹಾಗೂ ಸಾಮೂಹಿಕ ಸಂಘಟನೆಗಳಿಂದ ನಡೆದಿರುವ ಪ್ರತಿಭಟನೆಗೆ ಸಂಪೂರ್ಣ ಬೆಂಬಲವಿದೆ ಎಂದ ಅವರು, ಮಹೇಶಗೌಡ ಸುಬೇದಾರ ಹಾಗೂ ಮಲ್ಲಣ್ಣ ಪರಿವಾರ ನೇತೃತ್ವದ ಸಮಸ್ತ ಹೋರಾಟಗಾರರಿಗೆ ವಿಶ್ವಾಸ ತುಂಬಿದರು.ಈ ಸಂದರ್ಭದಲ್ಲಿ ನಗರ ಮಂಡಲ ಅಧ್ಯಕ್ಷ ಚಂದ್ರಶೇಖರ ಯಾಳಗಿ, ಗ್ರಾಮೀಣ ಮಂಡಲ ಅಧ್ಯಕ್ಷ ತಿರುಪತಿ ಹತ್ತಿಕಟಿಗಿ, ಜಿಲ್ಲಾ ಉಪಾಧ್ಯಕ್ಷ ಅಡಿವೆಪ್ಪ ಜಾಕಾ, ದೇವಿಂದ್ರಪ್ಪ ಕೋನೆರ, ಹಿರಿಯ ಮುಖಂಡ ರಾಜಶೇಖರ ಗೂಗಲ್, ಶಿವರಾಜ.ಬಿ.ದೇಶಮುಖ, ಮಲ್ಲಿಕಾರ್ಜುನ ಕಂದಕೂರ, ರಾಜುಗೌಡ ಪಾಟೀಲ ಉಕ್ಕಿನಾಳ, ಜಿಲ್ಲಾ ಕಾರ್ಯದರ್ಶಿ ದಾಮು.ಬಿ.ಪವಾರ, ಕರಬಸ್ಸು ಬಿರಾಳ, ಪ್ರಶಾಂತ ಸಜ್ಜನ, ವರದರಾಜ ಕುಲ್ಕರ್ಣಿ, ಅವಿನಾಶ ಗುತ್ತೇದಾರ, ಶಾಂತಪ್ಪ ಸಾಲಿಮನಿ, ಸೋಪಣ್ಣ ಸಗರ, ಭೀಮು ಕಟ್ಟಿಮನಿ, ಉಮೇಶರೆಡ್ಡಿ, ದೇವಿಂದ್ರ, ಲಕ್ಷ್ಮೀಕಾಂತ, ವೆಂಕಟೇಶ ಗೋನಳ್ಳಿ, ಬಾಲಕೃಷ್ಣ ಹುಲ್ಕಲ್, ಶಾಂತಪ್ಪ ಸಾಲಿಮನಿ, ಕಾಂತಪ್ಪ ತಹಶೀಲ್ದಾರ ಸೇರಿದಂತೆ ಪಕ್ಷದ ವಿವಿಧ ಪದಾಧಿಕಾರಿಗಳು, ಮುಖಂಡರು ಕಾರ್ಯಕರ್ತರು ಹಾಗೂ ಇತರರು ಉಪಸ್ಥಿತರಿದ್ದರು.