ಕೊಪ್ಪಳ:
ನಗರದ ಗವಿಸಿದ್ದೇಶ್ವರ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನಲ್ಲಿ ನಡೆದ ತಾಲೂಕು ಮಟ್ಟದ ರಾಷ್ಟ್ರೀಯ ನೇತ್ರದಾನ ಪಾಕ್ಷಿಕ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ನೇತ್ರದಾನ ಸಾಧಾರಣ ಕಣ್ಣಿನ ದೃಷ್ಟಿ ಇಲ್ಲದವರಿಗೆ, ಬೆಳಕು ನೋಡದ ಅಂಧರಿಗೆ ದೃಷ್ಟಿ ನೀಡುವ ಕೆಲಸವಾಗಿದೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ನಿಮ್ಮ ನೇತ್ರಗಳು ಸದಾ ಜೀವಂತವಾಗಿರಬೇಕಾದರೆ ನೇತ್ರದಾನ ಮಾಡಿ, ಅಂಧರ ಬಾಳಿಗೆ ಬೆಳಕಾಗಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ತಾಲೂಕು ಆರೋಗ್ಯಾಧಿಕಾರಿ ಡಾ. ರಾಮಾಂಜನೇಯ ಮಾತನಾಡಿ, ಮೆದುಳು ನಿಷ್ಕ್ರಿಯಗೊಂಡ ಒಬ್ಬ ಮನುಷ್ಯನ ಅಂಗಾಂಗಗಳು 8 ಜನರ ಜೀವನಕ್ಕೆ ಬೆಳಕಾಗುತ್ತವೆ. ಪ್ರತಿ ವರ್ಷ ರಾಜ್ಯದಲ್ಲಿ ಸರಾಸರಿ 5,600, ದೇಶದಲ್ಲಿ 1.25 ಲಕ್ಷ ಜನರು ನೇತ್ರದಾನಿಗಳಾಗಿ ಕಾಯುತ್ತಿದ್ದಾರೆ. ಯಾವುದೇ ವಯಸ್ಸು, ಲಿಂಗ, ಧರ್ಮ ಅಥವಾ ರಕ್ತದ ಗುಂಪಿನ ಭೇದವಿಲ್ಲದೆ ಕಣ್ಣು ದಾನ ಮಾಡಬಹುದು ಎಂದು ಹೇಳಿದರು.