ಸೋಮರಡ್ಡಿ ಅಳವಂಡಿ
ನಗರದಲ್ಲಿ ವಾಹನಗಳ ಸಂಚಾರ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಸರ್ಕಲ್‌ನಲ್ಲಿ ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಸರ್ಕಲ್‌ಗಳ ಅಗಲೀಕರಣ ಮತ್ತು ಸಿಗ್ನಲ್ ರಹಿತ ಸರ್ಕಲ್ ನಿರ್ಮಾಣಕ್ಕೆ ಚಿಂತನೆ ನಡೆದಿದೆ.
ಈಗಾಗಲೇ ನಗರದ ಅಶೋಕ ವೃತ್ತ, ಬಸವೇಶ್ವರ ವೃತ್ತ ಹಾಗೂ ಗಡಿಯಾರಕಂಬ ವೃತ್ತದ ಅಭಿವೃದ್ಧಿಗೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಸಿದ್ಧವಾಗಿತ್ತು. ಈ ಹಿಂದಿನ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರು ವೃತ್ತಗಳ ಅಗಲೀಕರಣ ಮತ್ತು ವೃತ್ತಗಳ ನಿರ್ಮಾಣಕ್ಕೆ ಅಸ್ತು ಎಂದಿದ್ದ ಆಧಾರದಲ್ಲಿ ಯೋಜನೆ ಸಿದ್ಧಗೊಂಡು ಟೆಂಡರ್ ಅನುಮೋದನೆ ಬಾಕಿ ಇತ್ತು. ಆದರೆ, ನೂತನ ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಈ ವೃತ್ತ ಅಗಲೀಕರಣ ಮತ್ತು ವೃತ್ತ ನಿರ್ಮಾಣಕ್ಕೆ ಬ್ರೇಕ್ ಹಾಕಿ, ಸಿಗ್ನಲ್ ರಹಿತ ವೃತ್ತಗಳನ್ನು ಹೊಸ ತಂತ್ರಜ್ಞಾನ ಹಾಗೂ ಮಾರ್ಗೋಪಾಯದಡಿ ನಿರ್ಮಿಸೋಣ ಎಂದು ಈ ಹಿಂದೆ ಟೆಂಡರ್ ಪ್ರಕ್ರಿಯೆಗೆ ಬಂದಿದ್ದ ಯೋಜನೆಯನ್ನು ವಾಪಸ್ ಕಳುಹಿಸಿದ್ದಾರೆ. ಜತೆಗೆ ಹೊಸ ಮಾದರಿ ಸಿಗ್ನಲ್ ರಹಿತ ವೃತ್ತ ನಿರ್ಮಾಣಕ್ಕೆ ಯೋಜನೆ ರೂಪಿಸುವಂತೆ ಸೂಚಿಸಿದ್ದಾರೆ.ಏನಿದು ಸಿಗ್ನಲ್ ರಹಿತ ವೃತ್ತ:
ಸಿಗ್ನಲ್ ರಹಿತ್ ವೃತ್ತಕ್ಕೆ ಹೆಚ್ಚಿನ ಜಾಗ ಬೇಕಾಗಿದ್ದು ಈಗಿರುವ ವೃತ್ತವನ್ನು ಅಗಲೀಕರಣ ಮಾಡುವ ಕಾರ್ಯ ಶೀಘ್ರದಲ್ಲಿ ನಡೆಯಲಿದೆ. ಸದ್ಯ ಇರುವ ಮಾಹಿತಿ ಪ್ರಕಾರ ನಗರದ ಪ್ರಮುಖ 3 ವೃತ್ತದ ಸುತ್ತಳತೆಯನ್ನು 100 ಅಡಿ ವ್ಯಾಪ್ತಿಯಲ್ಲಿ ನಿರ್ಮಿಸುವುದು ಮೊದಲ ಪ್ರಕ್ರಿಯೆಯಾಗಿದೆ. ಇದಕ್ಕೆ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಸಹ ಅಸ್ತು ಎಂದಿದ್ದಾರೆ ಎನ್ನಲಾಗಿದೆ. ಶಾಸಕ ರಾಘವೇಂದ್ರ ಹಿಟ್ನಾಳ ಸಹ ಹೊಸ ಮಾದರಿ ಅಳವಡಿಸುವುದಕ್ಕೆ ಸಮ್ಮತಿ ಸೂಚಿಸಿದ್ದಾರೆ ತಿಳಿದು ಬಂದಿದೆ.ಹುಲಿಕೆರೆ ಅಭಿವೃದ್ಧಿ
ಶ್ರೀನಿವಾಸ ಗುಪ್ತಾ ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ