ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಶನಿವಾರ ನಡೆದ ಕರ್ನಾಟಕ ಪ್ರಾಂತ್ಯ ರೈತ ಸಂಘದ ಸಮಾವೇಶವನ್ನು ಉದ್ಘಾ ಮಾತನಾಡಿ, ಪರಿಸ್ಥಿತಿ ಹೀಗಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೃಷಿಯಿಂದ ರೈತ ಸಮುದಾಯವನ್ನು ಒಕ್ಕಲೆಬ್ಬಿಸಿ, ಇಡೀ ಕೃಷಿ ರಂಗವನ್ನು ದೈತ್ಯ ಬಹುರಾಷ್ಟ್ರೀಯ ಕಂಪನಿಗಳಿಗೆ ಹಸ್ತಾಂತರಿಸುವ ದುರುದ್ದೇಶದ ಕೃಷಿ ಕಾಯ್ದೆಗಳನ್ನು ಜಾರಿ ಮಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕಾರ್ಪೊರೇಟೀಕರಣಕರ್ನಾಟಕ ಪ್ರಾಂತ್ಯ ಕೃಷಿ ಕೂಲಿಕಾರರ ಸಂಘದ ರಾಜ್ಯ ಉಪಾಧ್ಯಕ್ಷ ಎಂ.ಪಿ.ಮುನಿವೆಂಕಟಪ್ಪ ಮಾತನಾಡಿ, ವಿಶೇಷವಾಗಿ ಚಿಕ್ಕಬಳ್ಳಾಪುರ ಜಿಲ್ಲೆಯ ಆರ್ಥಿಕ ಪರಿಸ್ಥಿತಿ ಶೇ 90 ರಷ್ಟು ಕೃಷಿ ಮತ್ತು ಕೃಷಿ ಪೂರಕ ವಹಿವಾಟುಗಳ ಮೇಲೆ ಆಧಾರವಾಗಿದೆ. ಇಲ್ಲಿನ ರೈತರು ಪ್ರಮುಖವಾಗಿ ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಾರೆ. ಹೈನುಗಾರಿಕೆಯೂ ಈ ಜಿಲ್ಲೆಯಲ್ಲಿ ಪ್ರಮುಖ ಕಸುಬಾಗಿದೆ. ಹೀಗೆ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ರೈತರ ಜೀವನದಲ್ಲಿ ಒಂದಕ್ಕೊಂದು ಬಲವಾಗಿ ಬೆಸೆದುಕೊಂಡಿದೆ. ಕೃಷಿ ಕ್ಷೇತ್ರವನ್ನು ಕಾರ್ಪೋರೇಟೀಕರಣ ಮಾಡುವುದರ ವಿರುದ್ಧ ರೈತರು ಹೊರಾಡಬೇಕಿದೆ ಎಂದರು.. ಬಗರ್‌ಹುಕುಂ ಸಕ್ರಮಗೊಳಿಸಿ
ಇದೇ ಸಂರ್ಧಭದಲ್ಲಿ ಕರ್ನಾಟಕ ಪ್ರಾಂತ್ಯ ರೈತ ಸಂಘದ ಜಿಲ್ಲಾ ಸಂಚಾಲಕರಾಗಿ ಚನ್ನರಾಯಪ್ಪ,ಸಹ ಸಂಚಾಲಕರಾಗಿ ಬಿ.ಜಯರಾಮರೆಡ್ಡಿ ,ಬಿ.ಎನ್.ಮುನಿಕೃಷ್ಣಪ್ಪ, ಎಂ.ಎಸ್.ಆನಂದ್,ವೆಂಕಟರಾಜು, ಆದಿನಾರಾಯಣ ಸ್ವಾಮಿ,ಲಕ್ಷ್ಮೀನಾರಾಯಣ,ಡಿ.ಟಿ. ಮುನಿಸ್ವಾಮಿ, ಬೈರೆಡ್ಡಿ ಮಾಸನಪಲ್ಲಿ, ಬೈರೆಡ್ಡಿ ಗವಿನೋರಪಲ್ಲಿ, ಪೆದ್ದೂರು ಲಕ್ಷ್ಮೀನಾರಾಯಣ, ರಘುರಾಮರೆಡ್ಡಿ ಎಂ.ಎನ್, ಲಕ್ಷ್ಮಣರೆಡ್ಡಿ, ಟೌನ್ ಕೃಷ್ಣಪ್ಪ, ವೆಂಕಟರೆಡ್ಡಿ, ಲಕ್ಷ್ಮೀನಾರಾಯಣ ರೆಡ್ಡಿ, ಶಿವಪ್ಪ .ಕಲೀಂ, ಸುಬ್ಬಾರೆಡ್ಡಿ ರವರನ್ನು ಪಧಾಧಿಕಾರಿಗಳಾಗಿ ಆಯ್ಕೆಮಾಡಲಾಯಿತು.