ವಿದ್ಯಾರ್ಥಿಗಳಿಗೆ ನೈಜ ಗ್ರಾಮೀಣ ಜೀವನದ ದರ್ಶನ ಮಾಡಿಸಿ: ಮಂಜುಳಾ ಅಸುಂಡಿ

KannadaprabhaNewsNetwork | Published : Apr 25, 2025 11:53 PM

ಸಾರಾಂಶ

ಯುವ ಜನಾಂಗದ ಭವ್ಯ ಭವಿಷ್ಯಕ್ಕೆ ಸೇವೆ, ತ್ಯಾಗ, ಪ್ರಾಮಾಣಿಕತೆ, ಬದ್ಧತೆಗಳು ಬುನಾದಿಗಳಾಬೇಕು. ಈ ಬುನಾದಿಗಳನ್ನು ಎನ್ನೆಸ್ಸೆಸ್ ನೀಡುತ್ತದೆ.

ರಾಣಿಬೆನ್ನೂರು: ವಿದ್ಯಾರ್ಥಿಗಳಿಗೆ ನೈಜ ಗ್ರಾಮೀಣ ಜೀವನದ ದರ್ಶನವನ್ನು ಮಾಡಿಸುವ ಮೂಲಕ ಗ್ರಾಮ ಭಾರತದ ಏಳಿಗೆಗಾಗಿ ಶ್ರಮಿಸಬೇಕಾಗಿದೆ ಎಂದು ಬೆನಕನಕೊಂಡ ಗ್ರಾಪಂ ಅಧ್ಯಕ್ಷೆ ಮಂಜುಳಾ ಅಸುಂಡಿ ತಿಳಿಸಿದರು.

ತಾಲೂಕಿನ ಬೆನಕನಕೊಂಡ ಗ್ರಾಮದಲ್ಲಿ ಸುಣಕಲ್ಲಬಿದರಿಯ ಶ್ರೀ ಅರಳಿ ಶಿದ್ಲಿಂಗಪ್ಪ ಬಸಪ್ಪ ಸರ್ಕಾರಿ ಪ್ರಥಮದರ್ಜೆ ಕಾಲೇಜು ಆಯೋಜಿಸಿರುವ 2024- 2025ನೇ ಸಾಲಿನ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಎನ್ನೆಸ್ಸೆಸ್ ಧ್ಯೇಯವಾಕ್ಯದಂತೆ ಯುವ ಜನಾಂಗವು ದೇಶವನ್ನು ಕಟ್ಟುವ ಪಣ ತೊಡಬೇಕು ಎಂದರು.

ಸಹ ಪ್ರಾಧ್ಯಾಪಕ ಡಾ. ಎಸ್.ಪಿ. ಗೌಡರ ಮಾತನಾಡಿ, ಯುವ ಜನಾಂಗದ ಭವ್ಯ ಭವಿಷ್ಯಕ್ಕೆ ಸೇವೆ, ತ್ಯಾಗ, ಪ್ರಾಮಾಣಿಕತೆ, ಬದ್ಧತೆಗಳು ಬುನಾದಿಗಳಾಬೇಕು. ಈ ಬುನಾದಿಗಳನ್ನು ಎನ್ನೆಸ್ಸೆಸ್ ನೀಡುತ್ತದೆ ಎಂದರು.ಪ್ರಾ. ಪ್ರೊ. ಆರ್.ಎಫ್. ಅಯ್ಯನಗೌಡ್ರ, ಗ್ರಾಪಂ ಉಪಾಧ್ಯಕ್ಷೆ ಮಂಜುಳಾ ಚನ್ನಪ್ಪಗೌಡ, ಡಾ. ಬಸವರಾಜ ಹುಗ್ಗಿ, ಡಾ. ಹನುಮಂತರಾಜು ಎನ್.ಬಿ., ಪ್ರೊ. ಲೋಹಿಯಾ ಕೆ.ಜೆ.ಆರ್., ಅಧೀಕ್ಷಕ ಸತೀಶ ಎಂ., ಪಿಡಿಒ ರಂಗಪ್ಪ ಕೊರಕಲಿ, ಮುಖ್ಯಶಿಕ್ಷಕ ಆರ್. ಮಂಜಪ್ಪ, ಮಂಗಳಾ ಗುಂಡಪ್ಪಳವರ, ರಾಜಶೇಖರ ಹಾದಿಮನಿ, ರಮೇಶ ಗಂಗಾಧರಪ್ಪ, ಎಸ್.ಎಂ. ಮಲಗೌಡ್ರ, ಸುರೇಶಪ್ಪ ಗರಡಿಮನಿ, ಶಿವಪ್ಪ ಮುದಿಹಾಳ, ಎನ್ನೆಸ್ಸೆಸ್ ಕಾರ್ಯಕ್ರಮ ಅಧಿಕಾರಿ ಡಾ. ನಾಗರಾಜ ಗೋಡಿಹಾಳ, ಪ್ರೊ. ರವಿಕುಮಾರ ಎಸ್.ಯು., ಪ್ರೊ. ಅಂಬಿಕಾ ಹೊಸಮನಿ ಉಪಸ್ಥಿತರಿದ್ದರು.ಅಬಲೂರು ಗ್ರಾಪಂ ಅಧ್ಯಕ್ಷರಾಗಿ ಹನುಮಂತಪ್ಪ ಆಯ್ಕೆ

ಹಿರೇಕೆರೂರು: ತಾಲೂಕಿನ ಅಬಲೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹನುಮಂತಪ್ಪ ಹರಿಜನ ಅವಿರೋಧವಾಗಿ ಆಯ್ಕೆಯಾದರು.

ಈ ಹಿಂದಿನ ಅಧ್ಯಕ್ಷರಾಗಿದ್ದ ರೇಣುಕಾ ವೀರಾಪುರ ಅವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹನುಮಂತಪ್ಪ ಹರಿಜನ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು.ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಕೆ.ಎಂ. ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.ಗ್ರಾಪಂ ಉಪಾಧ್ಯಕ್ಷೆ ರೂಪಾ ನಿಂಬೆಗೊಂದಿ, ಸದಸ್ಯರಾದ ರೇಣುಕಾ ಮಹಾದೇವಪ್ಪ ವೀರಾಪುರ, ಗೀತಾ ಇಂಗಳಗೊಂದಿ, ಉಮಾ ಚಕ್ರಸಾಲಿ, ಯಲ್ಲಮ್ಮ ಆಡೂರ, ರತ್ನಮ್ಮ ಮುದಿಗೌಡ್ರ, ಮನೋಹರ ಕಮ್ಮಾರ, ಜಗದೀಶ ದಂಡಗೀಹಳ್ಳಿ, ಪಿಡಿಒ ಬಸವರಾಜ ಕೆ., ಕಾರ್ಯದರ್ಶಿ ರುದ್ರಪ್ಪ ಕಾಳೇರ, ಸಿಬ್ಬಂದಿಗಳಾದ ರಾಜು ಅರಳೀಕಟ್ಟಿ, ಶೋಭಾ ಕೋರಿ, ವೆಂಕಟೇಶ ಶೀತಿಕೊಂಡ, ರಾಮಪ್ಪ ತ್ಯಾವಣಗಿ, ಶೇಖರಯ್ಯ ಹಿರೇಮಠ ಇತರಿದ್ದರು.

Share this article