ಟಿ.ಬಿ. ಜಯಚಂದ್ರಗೆ ಸಚಿವ ಸ್ಥಾನ ನೀಡಿ: ಶಿವು ಚಂಗಾವರ

KannadaprabhaNewsNetwork |  
Published : Oct 24, 2025, 01:00 AM IST
೨೩ಶಿರಾ೩: ಶಿರಾ ತಾಲ್ಲೂಕು ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದಲ್ಲಿ ಶಿರಾ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಅವರು ಮಾದ್ಯಮದವರೊಂದಿಗೆ ಮಾತನಾಡಿದರು. | Kannada Prabha

ಸಾರಾಂಶ

ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ 2400 ಕೋಟಿ ರುಪಾಯಿ ಅನುದಾನ ತುರುವಲ್ಲಿ ಜಯಚಂದ್ರ ಅವರು ಯಶಸ್ವಿಯಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಶಿರಾ

ಕಾಂಗ್ರೆಸ್ ಪಕ್ಷದಲ್ಲಿ 50 ವರ್ಷಗಳಿಂದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರಾಗಿ ಪ್ರಾಮಾಣಿಕ ಸೇವೆ ಮಾಡುತ್ತಿರುವ ರಾಜಕೀಯ ಮತ್ಸದಿ, ಅಭಿವೃದ್ಧಿ ಹರಿಕಾರರು, ಬರದ ನಾಡಿನ ಭಗೀರಥ, ಶಾಸಕ ಟಿ.ಬಿ.ಜಯಚಂದ್ರ ಅವರಿಗೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಮಂತ್ರಿ ಸ್ಥಾನ ನೀಡಬೇಕು ಎಂದು ಶಿರಾ ತಾಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಒತ್ತಾಯಿಸಿದರು.

ಅವರು ತಾಲೂಕು ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದಲ್ಲಿ ಹಲವಾರು ಮುಖಂಡರೊಂದಿಗೆ ಚರ್ಚಿಸಿ ನಂತರ ಮಾದ್ಯಮದವರೊಂದಿಗೆ ಮಾತನಾಡಿದರು. ಸರ್ಕಾರ ಗ್ಯಾರಂಟಿ ಯೋಜನೆಗಳ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ವಿವಿಧ ಇಲಾಖೆಗಳಲ್ಲಿ 2400 ಕೋಟಿ ರುಪಾಯಿ ಅನುದಾನ ತುರುವಲ್ಲಿ ಜಯಚಂದ್ರ ಅವರು ಯಶಸ್ವಿಯಾಗಿದ್ದಾರೆ. ಚಿಕ್ಕನಹಳ್ಳಿಯಿಂದ ಬೈರೇನಹಳ್ಳಿವರೆಗೆ ರಸ್ತೆ ಅಭಿವೃದ್ಧಿಗೆ 1000 ಕೋಟಿ ರುಪಾಯಿ ಅನುದಾನ ಮಂಜೂರು ಮಾಡಿಸಿದ್ದಾರೆ. ಕೃಷಿ 40 ಕೋಟಿ, ತೋಟಗಾರಿಕೆ 45 ಕೋಟಿ, ಲೋಕೋಪಯೋಗಿ ಇಲಾಖೆ 75 ಕೋಟಿ, ಸಣ್ಣ ನೀರಾವರಿ 60 ಕೋಟಿ, ಪಿ ಆರ್ ಡಿ 70 ಕೋಟಿ, ಪಶು ಪಾಲನೆ 40 ಕೋಟಿ, ಶಿರಾ ನಗರಸಭೆ 70 ಕೋಟಿ ಸೇರಿದಂತೆ ಎಲ್ಲಾ ಇಲಾಖೆಗಳ ಜೊತೆಗೆ ತಾಲೂಕಿನ ಅಭಿವೃದ್ಧಿಗೆ ಒಟ್ಟು ಸುಮಾರು 2400 ಕೋಟಿ ರುಪಾಯಿ ಅಭಿವೃದ್ಧಿಗೆ ಅನುದಾನ ಸರ್ಕಾರದಿಂದ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದಲ್ಲದೆ ಶಿರಾ ಶಿಕ್ಷಣ ಕಾಶಿ ಬಡ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಸಿಗಬೇಕೆಂಬ ಉದ್ದೇಶದಿಂದ ಮೌಲಾನ ಆಜಾದ್ ವಸತಿ ಶಾಲೆ, ಹೊಸೂರು, ಬರಗೂರು, ತರೂರು ಬ್ರಹ್ಮಸಂದ್ರಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಂಜೂರು ಮಾಡಿಸಿದ್ದಾರೆ.

ಶಿರಾ ಭಾಗದಲ್ಲಿ ಮತ್ತಷ್ಟು ಅಂತರ್ಜಲ ಹೆಚ್ಚಳಗೊಳ್ಳಬೇಕೆಂಬ ಉದ್ದೇಶದಿಂದ 32 ಚೆಕ್ ಡ್ಯಾಮ್ ಗಳನ್ನು ನಿರ್ಮಾಣ ಮಾಡುತ್ತಿರುವುದು ಜಯಚಂದ್ರ ಅವರು ಅಭಿವೃದ್ಧಿ ಹರಿಕಾರ ಎಂಬ ಪದಕ್ಕೆ ನಿಜ ಅರ್ಥ ನೀಡಿದ್ದಾರೆ. ಇಂತಹ ಮತ್ಸದಿ ರಾಜಕಾರಣಿ ಸರ್ಕಾರದಲ್ಲಿ ಮಂತ್ರಿಯಾಗಬೇಕೆಂಬುದು ಶಿರಾ ಕ್ಷೇತ್ರ ಮತ್ತು ತುಮಕೂರು ಜಿಲ್ಲೆಯ ಜನತೆಯ ಒತ್ತಾಸೆಯಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಮುಂಬರುವ ಸಂಪುಟ ಪುನರ್ ರಚನೆಯಲ್ಲಿ ಟಿ.ಬಿ. ಜಯಚಂದ್ರ ಅವರಿಗೆ ಮಂತ್ರಿ ಸ್ಥಾನ ನೀಡಿ ಗೌರವಿಸಬೇಕು ಎಂದು ಒತ್ತಾಯಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮೂರ್ಖಣ್ಣಪ್ಪ, ಯೋಗಾನಂದ, ಕರೀನಾಯಕ, ಶಿವಣ್ಣ, ಮಂಜುನಾಥ್, ಓಬಳೇಶ್, ಶಿವಣ್ಣ, ಕರೆಗುಂಡನ ನಾಯಕ, ಮದಕರಿ ನಾಯಕ, ಹನುಮಂತ, ಶಿವಧೀರಪ್ಪ, ಗ್ರಾಮ ಪಂಚಾಯಿತಿ ಸದಸ್ಯ ಪುಟ್ಟ ಜುಂಜಯ್ಯ ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.

೨೩ಶಿರಾ೩: ಶಿರಾ ತಾಲ್ಲೂಕು ಗೌಡಗೆರೆ ಹೋಬಳಿಯ ಹೊಸೂರು ಗ್ರಾಮದಲ್ಲಿ ಶಿರಾ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಶಿವು ಚಂಗಾವರ ಅವರು ಮಾದ್ಯಮದವರೊಂದಿಗೆ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!