ಕಚೇರಿ ನಿರ್ಮಾಣಕ್ಕೆ ಗುದ್ನೇಪ್ಪನಮಠದ ಜಾಗ ಕೈಬಿಡಿ

KannadaprabhaNewsNetwork |  
Published : Nov 02, 2025, 03:45 AM IST
1ಕೆಕೆಆರ್1:ಕುಕನೂರಿನ ಗುದ್ನೇಪ್ಪನಮಠದಲ್ಲಿ ಜರುಗಿದ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಿದ್ದ ಗುದ್ನೇಪ್ಪನಮಠದ ನಿವಾಸಿಗಳು.  | Kannada Prabha

ಸಾರಾಂಶ

ಈಗಾಗಲೇ ಗುದ್ನೇಪ್ಪನಮಠದಲ್ಲಿ 35 ಎಕರೆ ಭೂಮಿ ನವೋದಯ ಶಾಲೆಗೆ, 3 ಎಕರೆ ಐಟಿಐ, ಡಿಗ್ರಿ ಕಾಲೇಜು, ನೀರಿನ ಟ್ಯಾಂಕ್, ಐದು ಎಕರೆ ಮೊರಾರ್ಜಿ ಶಾಲೆಗೆ ನೀಡಲಾಗಿದೆ

ಕುಕನೂರು: ತಾಲೂಕಾಡಳಿತ ಕಚೇರಿ, ಕೋರ್ಟ, ಬುದ್ಧ, ಬಸವ, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಪಟ್ಟಣದ ಗುದ್ನೇಪ್ಪನಮಠದ ಜಾಗ ನೀಡುವುದಿಲ್ಲ.ಅದನ್ನು ಕೈ ಬಿಡಬೇಕು ಎಂದು ಮುಖಂಡ ಚನ್ನಬಸಯ್ಯ ಧೂಪದ ಹೇಳಿದರು.

ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದಲ್ಲಿ ಜರುಗಿದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪಟ್ಟಣದಲ್ಲಿರುವ ಹಳೆ ಸರ್ಕಾರಿ ಆಸ್ಪತ್ರೆ,ಕಾವ್ಯಾನಂದ ಭವನ ಇನ್ನಿತರೆ ಸ್ಥಳಗಳಲ್ಲಿ ತಹಸೀಲ್ದಾರ ಕಚೇರಿ,ಕೋರ್ಟ,ಭವನ ನಿರ್ಮಾಣ ಮಾಡಿರಿ,ಆದರೆ ಗುದ್ನೇಪ್ಪನಮಠದ ಭೂಮಿ ಮೇಲೆ ಯಾಕೆ ಕಣ್ಣು ಹಾಕುತ್ತಿರಿ. ಕೆಲವರು ಗುದ್ನೇಪ್ಪನಮಠದ ಭೂಮಿಯಲ್ಲಿಯೇ ತಾಲೂಕಾಡಳಿತ ಕಚೇರಿ ನಿರ್ಮಿಸಬೇಕು ಎಂದು ನ. 3ರಂದು ಕುಕನೂರು ಬಂದ್ ಮಾಡುವ ಮೂಲಕ ಮುಂದಾಗಿದ್ದಾರೆ. ದೇವಸ್ಥಾನದ ಭೂಮಿ ಇಲ್ಲಿನ ಸೇವಾದಾರರ ಉಪಯೋಗಕ್ಕೆ ನೀಡಿದ್ದು, ನಾವುಗಳ ಕೋರ್ಟ ಮೊರೆ ಹೋಗಿದ್ದೇವೆ. ಆದರೂ ನಮ್ಮ ಹೆಸರಿಸಲು ಪ್ರತಿಭಟನೆ, ಬಂದ್ ಎಂಬ ದಾರಿ ಹಿಡಿಯುತ್ತಿದ್ದಾರೆ.ಗುದ್ನೇಪ್ಪನಮಠದ ನಿವಾಸಿಗಳು ಕೆಲವು ಪಿತೋರಿಗಳ ನಡೆ ಖಂಡಿಸಿ ನ .4ರಂದು ಗುದ್ನೇಪ್ಪನಮಠದಿಂದ ಕುಕನೂರಿನ ವೀರಭದ್ರಪ್ಪ ವೃತ್ತದವರೆಗೆ ಪ್ರತಿಭಟನಾ ಪಾದಯಾತ್ರೆ ಮಾಡುತ್ತೇವೆ ಎಂದರು.

ಮುಖಂಡ ವೀರಯ್ಯ ಇನಾಮದಾರ ಮಾತನಾಡಿ,ಈಗಾಗಲೇ ಗುದ್ನೇಪ್ಪನಮಠದಲ್ಲಿ 35 ಎಕರೆ ಭೂಮಿ ನವೋದಯ ಶಾಲೆಗೆ, 3 ಎಕರೆ ಐಟಿಐ, ಡಿಗ್ರಿ ಕಾಲೇಜು, ನೀರಿನ ಟ್ಯಾಂಕ್, ಐದು ಎಕರೆ ಮೊರಾರ್ಜಿ ಶಾಲೆಗೆ ನೀಡಲಾಗಿದೆ. ಉಳಿದ 40 ಎಕರೆ ಭೂಮಿ ಗ್ರಾಮದ ಐತಿಹ್ಯವುಳ್ಳು ಗುದ್ನೇಶ್ವರ ಮಹಾರಥೋತ್ಸವಕ್ಕೆ ಆಗಮಿಸುವ ಜನರಿಗೆ ಅನುಕೂಲ ಆಗಲು ಇರಲಿದೆ. ಈಗ ಅದನ್ನು ಕಬಳಿಸಿ ಗುದ್ನೇಪ್ಪನಮಠದಲ್ಲಿ ಜಾಗ ಇಲ್ಲದ ರೀತಿ ಮಾಡುವುದು ಅನ್ಯಾಯದ ಸಂಕೇತ. ಸ್ಥಳೀಯ ತಹಸೀಲ್ದಾರರು ಎಂ.ಎಲ್.ಎ ಅವರ ಕೈಗೊಂಬೆಯಾಗಿದ್ದಾರೆ ಎಂದು ದೂರಿದರು.

ಮುಖಂಡ ವೀರಯ್ಯ ದೇವಗಣಮಠ ಮಾತನಾಡಿ, ದೇವಸ್ಥಾನದ ಭೂಮಿ ದೇವಸ್ಥಾನದ ಸೇವಾದಾರರಿಗೆ ನೀಡಿದ್ದಾರೆ.ಆದರೆ ಅದನ್ನು ಕಿತ್ತುಕೊಳ್ಳುವ ತಂತ್ರ ಸರಿಯಲ್ಲ. ನ್ಯಾಯಾಲಯದಲ್ಲಿ ಈ ಬಗ್ಗೆ ಕೇಸ್ ನಡೆಸಿದ್ದರೂ ಸಹ ಸ್ಥಳೀಯ ಕೆಲವರು ಪ್ರತಿಭಟನೆ,ಬಂದ್ ಗೆ ಮೊರೆ ಹೋಗುತ್ತಿರುವುದು ಸಮಂಜಸವಲ್ಲ ಎಂದರು.

ಪಪಂ ಸದಸ್ಯ ಜಗನ್ನಾಥ ಭೋವಿ, ತಾಲೂಕು ಜಂಗಮ ಸಮಾಜದ ಅಧ್ಯಕ್ಷ ಮಹೇಶ ಕಲ್ಮಠ, ವೀರಯ್ಯ ಬ್ಯಾಳಿ, ಸಿದ್ಲಿಂಗಯ್ಯ ಬಂಡಿ, ರುದ್ರಯ್ಯ ವಿರುಪಣ್ಣನವರ್, ಗುದ್ನೇಯ್ಯ ಬಂಡಿ, ರುದ್ರಯ್ಯ ಗಲಬಿ, ರುದ್ರಯ್ಯ ಇನಾಮದಾರ, ಶೇಖರಯ್ಯ ಶೆಲೂಡಿ, ಶರಣಯ್ಯ ಹುಣಸಿಮರದ, ಶರಣಯ್ಯ ಹೂವಿನಾಳ, ಶಿವು, ವಕೀಲ ಜಗದೀಶ ಸೂಡಿ, ಮಹೇಶ್ವರ ಸಾವಳಗಿಮಠ, ಗುದ್ನೇಪ್ಪನಮಠದ ನಿವಾಸಿಗಳಿದ್ದರು.

PREV

Recommended Stories

ಪಾಳು ಬಿದ್ದ ರೈತ ಸಭಾ ಭವನ ಕಟ್ಟಡ
ಕೊಂಕಣಿ ನೆಲದಲ್ಲಿ ಕನ್ನಡದಲ್ಲಿ ಸಹಿ ಸಂಗ್ರಹ, ಕದಂಬ ವೃಕ್ಷ ಪೂಜಿಸಿ ರಾಜ್ಯೋತ್ಸವ ಆಚರಣೆ