ಉಳುಮೆ ಮಾಡುತ್ತಿರುವ ಭೂಮಿ ಕೊಡಿ; ಇಲ್ಲದಿದ್ದಲ್ಲಿ ದಯಾ ಮರಣ ನೀಡಿ: ಢಣನಾಯಕನಪುರ ರೈತರ ಹಕ್ಕೊತ್ತಾಯ

KannadaprabhaNewsNetwork |  
Published : Oct 20, 2026, 01:15 AM IST
19 ಟಿವಿಕೆ 1 - ತುರುವೇಕೆರೆ ತಾಲ್ಲೂಕಿನ ಮಾಯಸಂದ್ರ ಹೋಬಳಿ ರೈತರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು. | Kannada Prabha

ಸಾರಾಂಶ

ತಾಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ. ಪಟ್ಟ ಢಣನಾಯಕನಪುರ ಗ್ರಾಮಗಳ ರೈತರು ಉಳುಮೆ ಮಾಡಿರುವ ಭೂಮಿ ಅರಣ್ಯ ವಲಯ ಸೇರಿದೆ ಎಂದು ಹೇಳಲು ಯಾವುದೇ ಪುರಾವೆಗಳು ಇಲ್ಲ. ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಸೇರಿದೆ ಎಂಬುದಕ್ಕೆ ಸರಿಯಾದ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೂ ಸಹ ತಹಸೀಲ್ದಾರ್‌ ಅವರು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಮುಂದುವರಿದಲ್ಲಿ ರೈತರ ಪರವಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆ ನಂತರ ಶಿರಸ್ತೆದಾರ್ ಅಂಬುಜಾಕ್ಷಿಗೆ ಮನವಿ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ತುರುವೇಕೆರೆ

ತಾಲೂಕಿನ ದೊಡ್ಡ ಬೀರನಕೆರೆ, ಡಿ.ಬಿ.ಹಟ್ಟಿ, ಢಣನಾಯಕನಪುರದ ರೈತಾಪಿಗಳು ತಾವು ಉಳುಮೆ ಮಾಡುತ್ತಿರುವ ಭೂಮಿಯನ್ನು ನಮಗೆ ಕೊಡಬೇಕು. ತಪ್ಪಿದಲ್ಲಿ ನಮಗೆ ದಯಾಮರಣ ನೀಡಿ ಎಂದು ರಾಜ್ಯ ಕೃಷಿಕ ಸಮಾಜದ ನಿಕಟಪೂರ್ವ ಅಧ್ಯಕ್ಷ ಮಂಜುನಾಥ್‌ ಗೌಡರ ನೇತೃತ್ವದಲ್ಲಿ ರಾಷ್ಟ್ರಪತಿಗೆ ಮನವಿ ಸಲ್ಲಿಸಿದ್ದಾರೆ.

ಈ ವೇಳೆ ರಾಜ್ಯ ಕೃಷಿಕ ಸಮಾಜದ ಮಾಜಿ ಅಧ್ಯಕ್ಷ ಮಂಜುನಾಥ್‌ ಗೌಡ ಮಾತನಾಡಿ ತಾಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ. ಪಟ್ಟಣ, ಢಣನಾಯಕನಪುರ ಗ್ರಾಮದಲ್ಲಿ ಸರ್ಕಾರಿ ಭೂಮಿಯಲ್ಲಿ ಉಳುಮೆ ಮಾಡಿರುವ ರೈತರನ್ನು ತಾಲೂಕು ಆಡಳಿತ ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ದೊಡ್ಡವೀರನಕೆರೆ ಗ್ರಾಮದ ಸರ್ವೇ ನಂಬರ್ 101, 104, 107, ಮತ್ತು 108ರಲ್ಲಿ ಸರ್ಕಾರಿ ಜಮೀನಿದೆ. ಈ ಜಮೀನುಗಳಲ್ಲಿ ಹಲವಾರು ವರ್ಷಗಳಿಂದ ತಾಲೂಕಿನ ರೈತರು ಹಾಗೂ ನಾಗಮಂಗಲ ತಾಲೂಕಿನ ಒಡ್ಡರಹಳ್ಳಿಯ ಕೆಲವು ರೈತರು ಉಳುಮೆ ಮಾಡುತ್ತಿದ್ದಾರೆ. ಈ ಕುರಿತು ತಾಲೂಕು ಕಚೇರಿಯಲ್ಲಿ ನಮೂನೆ 50, 53, 57 ರಲ್ಲಿ ಅರ್ಜಿ ಮತ್ತು ಟಿ ಟಿ ಹಣ ಕಟ್ಟಿ ಕೃಷಿ ಮಾಡುತಿದ್ದಾರೆ.

ಆದರೆ ಈ ಜಮೀನುಗಳಿಗೆ ಸಂಬಂಧಪಟ್ಟಂತೆ ಕೆಲವು ಮುಖಂಡರು ತಹಸೀಲ್ದಾರ್ ಹಾಗೂ ತಾಲೂಕು ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡಿ ರೈತರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ತಹಸೀಲ್ದಾರ್ ಸಹ ಸರಿಯಾಗಿ ಮಾಹಿತಿಯನ್ನು ಪಡೆಯದೇ ಇದು ಅರಣ್ಯ ಇಲಾಖೆಗೆ ಸೇರಿದ ಜಮೀನು ಎಂದು ಹೇಳಿರುವುದು ಖಂಡನೀಯ. ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆಯವರು ಸ್ಥಳಕ್ಕೆ ಭೇಟಿ ನೀಡಿ ಉಳುಮೆ ಮಾಡುತ್ತಿರುವ ರೈತರ ಮೇಲೆ ದೌರ್ಜನ್ಯ ನಡೆಸಿ ರೈತರ ಮೇಲೆ ಕೇಸ್ ಹಾಕುತ್ತೇವೆ ಎಂದು ಬೆದರಿಸಿದ್ದಾರೆ. ಹಲವಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಸಾಲ ಮಾಡಿ ಭೂಮಿ ಅಭಿವೃದ್ಧಿ ಮಾಡಿರುವ ರೈತರು ಹಾಗೂ ಅವರ ಕುಟುಂಬಗಳ ಜೀವನದ ಪ್ರಶ್ನೆಯಾಗಿದೆ. ಅರಣ್ಯ ಇಲಾಖೆ ಭೂಮಿ ಎಂಬುದಕ್ಕೆ ಯಾವುದೇ ಸರಿಯಾದ ದಾಖಲೆ ಇಲ್ಲ. ಹಾಗಾಗಿ ರೈತರನ್ನು ಕ್ಕಲೆಬ್ಬಿಸುವ ಕೆಲಸ ಮಾಡಬಾರದು ಎಂದು ಮಂಜುನಾಥ್‌ ಗೌಡ ಆಗ್ರಹಿಸಿದರು.

ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ದಂಡಿನಶಿವರ ಕುಮಾರ್ ಮಾತನಾಡಿ, ತಾಲೂಕಿನ ಮಾಯಸಂದ್ರ ಹೋಬಳಿ, ದೊಡ್ಡಬೀರನಕೆರೆ ಮತ್ತು ಡಿ.ಬಿ. ಪಟ್ಟ ಢಣನಾಯಕನಪುರ ಗ್ರಾಮಗಳ ರೈತರು ಉಳುಮೆ ಮಾಡಿರುವ ಭೂಮಿ ಅರಣ್ಯ ವಲಯ ಸೇರಿದೆ ಎಂದು ಹೇಳಲು ಯಾವುದೇ ಪುರಾವೆಗಳು ಇಲ್ಲ. ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಆಡಳಿತ ಅಧಿಕಾರಿಗಳು ಸರ್ವೇ ನಡೆಸಿ ಅರಣ್ಯ ಇಲಾಖೆಗೆ ಸೇರಿದೆ ಎಂಬುದಕ್ಕೆ ಸರಿಯಾದ ಯಾವುದೇ ದಾಖಲೆಗಳು ಲಭ್ಯವಿಲ್ಲ ಎಂದು ಸರ್ಕಾರಕ್ಕೆ ವರದಿ ನೀಡಿದ್ದಾರೆ. ಆದರೂ ಸಹ ತಹಸೀಲ್ದಾರ್‌ ಅವರು ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಕ್ರಮ ಸರಿಯಲ್ಲ. ಮುಂದುವರಿದಲ್ಲಿ ರೈತರ ಪರವಾಗಿ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು. ಪ್ರತಿಭಟನೆ ನಂತರ ಶಿರಸ್ತೆದಾರ್ ಅಂಬುಜಾಕ್ಷಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಢಣನಾಯಕನಪುರ ಗ್ರಾಮದ ಅಶೋಕ ಕುಮಾರ್, ಹನುಮಂತರಾಜು, ಗೋವಿಂದಪ್ಪ, ದಾಸಪ್ಪ, ಅಭಿ, ನಾಗೇಶ್, ರಾಜಣ್ಣ, ಡಿ. ಬಿ.ಹಟ್ಟಿ ಗ್ರಾಮದ ಧನಂಜಯ, ಶಿವರಾಜು, ರಾಧಾಕೃಷ್ಣ, ರಮಾನಂದ ನಗರ ವಡ್ಡರಹಟ್ಟಿ ಗ್ರಾಮದ ಮೂರ್ತಿ, ರಾಮಕೃಷ್ಣ, ಗೀತಾ, ಕಿರಣ್ ಕುಮಾರ್, ಚೆನ್ನಮ್ಮ ಸೇರಿದಂತೆ ಹಲವಾರು ಮಹಿಳಾ ರೈತರು ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅ.27ರಂದು ಅರ್ಹರಿಗೆ ನಿವೇಶನ ಹಂಚಿಕೆ: ಶಾಸಕ ದರ್ಶನ್ ಪುಟ್ಟಣ್ಣಯ್ಯ
ಕೃತಜ್ಞತೆ ಮರೆಯಾಗಿ ಲಾಭ, ನಷ್ಟದಲ್ಲೇ ಜನರು ಜೀವನ ಕಳೆಯುತ್ತಿದ್ದಾರೆ: ರವಿಕಾಂತೇಗೌಡ