
ಕನ್ನಡಪ್ರಭ ವಾರ್ತೆ ರಾಮನಗರ
ಅಂಗಡಿಗಳು, ವಾಹನಗಳನ್ನು ಸ್ವಚ್ಛಗೊಳಿಸಿಕೊಂಡಿರುವ ಸಾರ್ವಜನಿಕರು ಪೂಜಾ ಸಿದ್ಧತೆಯಲ್ಲಿ ತೊಡಗಿದ್ದಾರೆ. ಹಬ್ಬದ ಹಿನ್ನೆಲೆಯಲ್ಲಿ ಮಾರುಕಟ್ಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ರಂಗೇರಿದ ವಾತಾವರಣ ಸೃಷ್ಟಿಯಾಗಿತ್ತು.
ಆಯುಧ ಪೂಜೆ ಮಂಗಳವಾರ (ಅ.20) ಇರುವ ಹಿನ್ನೆಲೆ ಸೋಮವಾರದಿಂದಲೇ ಅಂಗಡಿಗಳ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವಾಹನಗಳನ್ನು ತೊಳೆದು ಪೂಜೆಗೆ ಸಿದ್ಧಗೊಳಿಸುವ ಕಾರ್ಯವನ್ನು ಜೊತೆಯಲ್ಲೇ ನಡೆಸುತ್ತಿದ್ದುದು ಕಂಡುಬಂದಿತು.ಬರಗಾಲದ ಹಿನ್ನೆಲೆ ಈ ಬಾರಿ ಕೃಷಿ ಮತ್ತು ತೋಟಗಾರಿಕೆ ಬೆಳೆಗಳು ನಿರೀಕ್ಷಿತ ಪ್ರಮಾಣದಲ್ಲಿ ಬಂದಿಲ್ಲ. ಹೀಗಾಗಿ ಪೂಜೆಗೆ ಬೇಕಾದ ಬೂದುಗುಂಬಳಕಾಯಿ, ನಿಂಬೆಹಣ್ಣು, ಹೂವು, ವೀಳ್ಯದಲೆ ಸೇರಿದಂತೆ ಬಹುತೇಕ ಸಾಮಗ್ರಿಗಳ ದರ ಗಗನಕ್ಕೇರಿವೆ.
ಆಯುಧ ಪೂಜೆ ಆಚರಣೆಗೆ ಅಗತ್ಯವಾಗಿ ಬೇಕಾದ ಬೂದುಕುಂಬಳ ಕಾಯಿ ಬೆಲೆ ಜಿಲ್ಲಾ ಕೇಂದ್ರದಲ್ಲಿ ಕಡಿಮೆ ಇದ್ದು, ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹30 ರಿಂದ ₹40ಗೆ ಮಾರಾಟವಾಗುತ್ತಿದೆ. ಜಿಲ್ಲೆಯ ಇತರೆ ಕಡೆಯಲ್ಲಿ ಕೆಜಿಗೆ ₹10 ರಿಂದ ₹20 ವ್ಯತ್ಯಾಸದಲ್ಲಿ ಮಾರಾಟವಾಗುತ್ತಿದೆ.
₹50 ರಿಂದ ₹120ಗೆ ಮಾರಾಟ:
ಬಾಳೆ ಕಂದು ₹30 ರಿಂದ ₹100 ಬೆಲೆ ಇತ್ತು. ದೊಡ್ಡ ಗಾತ್ರದ ನಿಂಬೆ ಹಣ್ಣು ₹12 ರಿಂದ ₹15ಕ್ಕೆ 1 ರಂತೆ ಮಾರಾಟವಾಗುತ್ತಿದ್ದರೆ, ಸಣ್ಣ ಗಾತ್ರದ ನಿಂಬೆಹಣ್ಣು ₹20ಕ್ಕೆ 2ರಂತೆ ಮಾರಾಟವಾಗುತ್ತಿತ್ತು.
ಹಾರಗಳ ಬೆಲೆಯಲ್ಲಿ ಹೆಚ್ಚಳ:
ಆಯುಧ ಪೂಜೆ ಹಾಗೂ ವಿಜಯದಶಮಿಗೆ ಮಳಿಗೆಗಳು, ಕಚೇರಿಗಳು ಹಾಗೂ ಕಾರ್ಖಾನೆಗಳಲ್ಲಿ ಪೂಜೆ ಸಲ್ಲಿಸಿದ ನಂತರ ಸಿಬ್ಬಂದಿ ಮತ್ತಿತರರಿಗೆ ಸಿಹಿ ಜೊತೆಗೆ ಕಡ್ಲೆಪುರಿ ವಿತರಿಸುವುದು ವಾಡಿಕೆ. ಹೀಗಾಗಿ ಕಡ್ಲೆಪುರಿಗೆ ಹೆಚ್ಚು ಬೇಡಿಕೆ ಇತ್ತು. ಒಂದು ಸೇರಿಗೆ ₹10 ರಿಂದ ₹12ವರೆಗೆ ಮಾರಾಟವಾಗುತ್ತಿದೆ.
ಹಣ್ಣುಗಳ ಬೆಲೆ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಸ್ವಲ್ಪ ಏರಿಕೆಯಾಗಿತ್ತು. ಏಲಕ್ಕಿ ಬಾಳೆಹಣ್ಣು ಪ್ರತಿ ಕೆಜಿಗೆ ₹130 , ದಾಳಿಂಬೆ - ₹250, ಸೇಬು ₹200, ಮಿಕ್ಸ್ ₹180, ದ್ರಾಕ್ಷಿ ₹160, ಮೂಸಂಬಿ ₹120 , ಕಿತ್ತಳೆ ₹150, ಕಪ್ಪು ದ್ರಾಕ್ಷಿ ₹160, ಸೀಬೆಹಣ್ಣು ₹100 , ಮೂಸಂಬಿ ₹120, ಕರ್ಬೂಜ - ₹60, ಅನಾನಸ್ ₹80 ವರೆಗೆ ಮಾರಾಟವಾಗುತ್ತಿದ್ದವು.
ತರಕಾರಿ ಬೆಲೆ ಸಾಮಾನ್ಯ:ತರಕಾರಿ ಬೆಲೆಯೂ ಸಾಮಾನ್ಯವಾಗಿತ್ತು. ಮಿಕ್ಸ್ ತರಕಾರಿ ಕೆ.ಜಿ.ಗೆ ₹60, ಪ್ರತಿ ಕೆಜಿ ಕ್ಯಾರೆಟ್ ₹50, ನಾಟಿ ಬಿನೀಸ್ ₹60, ಗೆಡ್ಡೆಕೋಸು ₹60, ಟೊಮೆಟೋ ಕೆಜಿ ₹24, ಬೀಟ್‌ರೂಟ್ ₹40, ಬದನೆಕಾಯಿ ₹30, ಹೂ ಕೋಸು ₹30, ಹಾಗಲಕಾಯಿ ₹50, ಬೆಂಡೇಕಾಯಿ ₹40, ಆಲೂಗಡ್ಡೆ ₹25, ಈರುಳ್ಳಿ ₹50, ಅವರೆಕಾಯಿ ₹60, ಕೊತ್ತಂಬರಿ ಸೊಪ್ಪು ಪ್ರತಿ ಕಂತೆಗೆ ₹35 ರಿಂದ ₹40 ನಿಗದಿಪಡಿಸಲಾಗಿತ್ತು.
ಸಿಹಿ ತಿನಿಸುಗಳ ಬೆಲೆಯಲ್ಲೂ ಏರಿಕೆ :ಆಯುಧ ಪೂಜೆ ಹಬ್ಬದಲ್ಲಿ ಸಿಹಿ ತಿನಿಸುಗಳನ್ನು ಪೂಜೆಗೆ ಇಡುವುದರಿಂದ ಹಾಗೂ ಸಿಹಿ ತಿನಿಸುಗಳನ್ನು ವಿನಿಮಯ ಮಾಡಿಕೊಳ್ಳುವುದರಿಂದ ಅದಕ್ಕೂ ಹೆಚ್ಚಿನ ಬೇಡಿಕೆ ಕಂಡುಬಂದಿರುವುದರಿಂದ ಬೆಲೆಯಲ್ಲೂ ಹೆಚ್ಚಳವಾಗಿದೆ. ಪ್ರತಿ ಕೆಜಿ ಬೂಂದಿ ₹200, ಮಿಲ್ಕ್ ಬರ್ಫಿ ₹560, ಹಾರ್ಲಿಕ್ಸ್ ಬರ್ಫಿ ₹620, ಲಾಡು ₹300 -₹500, ಮೈಸೂರು ಪಾಕ್ ₹800, ಜಹಂಗೀರ್ ₹300, ಸೋಂಪಾಪುಡಿ ₹560 , ಹಲ್ವಾ ₹440 ಸೇರಿ ಅನೇಕ ಸಿಹಿ ಪದಾರ್ಥಗಳ ಬೆಲೆ ಕನಿಷ್ಠ ₹30ರಿಂದ ₹50ವರೆಗೆ ಹೆಚ್ಚಾಗಿತ್ತು. ಮತ್ತು ಪ್ರತಿ ಕೆಜಿ ಸ್ಪೆಷಲ್ ಖಾರ- ₹320 , ಸಾಮಾನ್ಯ ಖಾರ ₹300 ವರೆಗೆ ಮಾರಾಟವಾಗುತ್ತಿದ್ದವು.