ರಾಕ್ಷಸರ ಹೇಯ ಕೃತ್ಯಕ್ಕೆ ತಕ್ಕ ಉತ್ತರ ನೀಡಿ

KannadaprabhaNewsNetwork |  
Published : Apr 24, 2025, 12:02 AM IST
ಫೋಟೋ 23ಪಿವಿಡಿ3ಕಾಶ್ಮೀರದ ಪೆಹಲಗಾಮ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ ರಾಕ್ಷಸ ಕೌರ್ಯ ಮೆರೆದ ವಿರುದ್ಧ ಇಲ್ಲಿನ ಶ್ರೀರಾಮಸೇನೆ ಹಾಗೂ ಜಿಲ್ಲಾಧ್ಯಕ್ಷ ಪೂಜಾರಪ್ಪ ನೇತೃತ್ವದ ರೈತ ಸಂಘದ ವತಿಯಿಂದ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು.ಕಾಶ್ಮೀರದ ಪೆಹಲಗಾಮ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ ರಾಕ್ಷಸ ಕೌರ್ಯ ಮೆರೆದ ವಿರುದ್ಧ ಇಲ್ಲಿನ ಶ್ರೀರಾಮಸೇನೆ ಹಾಗೂ ರೈತ ಸಂಘದ ವತಿಯಿಂದ ತಹಶೀಲ್ದಾರ್ ವರದರಾಜು ರವರಿಗೆ ಮನವಿ ಪತ್ರ ಸಲ್ಲಿಸಿದರು. | Kannada Prabha

ಸಾರಾಂಶ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಮುಗ್ದ ಹಿಂದೂಗಳನ್ನು ಹತ್ಯೆ ಮಾಡಿ ರಾಕ್ಷಸ ಕೌರ್ಯ ಮರೆದ ಘಟನೆಯನ್ನು ಇಲ್ಲಿನ ಶ್ರೀರಾಮ ಸೇನೆ ಹಾಗೂ ರೈತ ಸಂಘ ಪದಾಧಿಕಾರಿಗಳು ಉಗ್ರವಾಗಿ ಖಂಡಿಸಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಕಾಶ್ಮೀರದ ಪಹಲ್ಗಾಮ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಮುಗ್ದ ಹಿಂದೂಗಳನ್ನು ಹತ್ಯೆ ಮಾಡಿ ರಾಕ್ಷಸ ಕೌರ್ಯ ಮರೆದ ಘಟನೆಯನ್ನು ಇಲ್ಲಿನ ಶ್ರೀರಾಮ ಸೇನೆ ಹಾಗೂ ರೈತ ಸಂಘ ಪದಾಧಿಕಾರಿಗಳು ಉಗ್ರವಾಗಿ ಖಂಡಿಸಿದರು.

ತಾಲೂಕು ಶ್ರೀರಾಮಸೇನೆ ಹಾಗೂ ತಾಲೂಕು ರೈತ ಸಂಘದ ವತಯಿಂದ ಬುಧವಾರ ಪಟ್ಟಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. ಈ ವೇಳೆ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷರಾದ ಅನಿಲ್ ಯಾದವ್ ಮಾತನಾಡಿ, ಕಾಶ್ಮೀರದ ಪಹಲ್ಗಾಮ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಮುಗ್ದ ಹಿಂದೂಗಳನ್ನು ಹತ್ಯೆ ಮಾಡಿ ರಾಕ್ಷಸ ಕೌರ್ಯ ಮೆರೆದಿದ್ದು ಹೇಯ ಕೃತ್ಯ. ನಾಗರಿಕ ಸಮಾಜದ ಮೇಲೆ ಎಸಗಿದ ಘೋರ ಕೃತ್ಯ. ಇಂತಹ ಉಗ್ರರನ್ನು ಗುಂಡಿಕ್ಕಿ ಹತ್ಯೆ ಮಾಡಿಯೇ ಬುದ್ಧಿ ಕಲಿಸಬೇಕು ಮತ್ತು ಭಯೋತ್ಪಾದನೆಯನ್ನು ಬುಡಸಮೇತ ಕಿತ್ತುಹಾಕಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪೂಜಾರಪ್ಪ ಮಾತನಾಡಿ ಕಾಶ್ಮೀರದ ಪಹಲ್ಗಾಮ್ ನಲ್ಲಿ ಇಸ್ಲಾಮಿಕ್ ಭಯೋತ್ಪಾದಕರು ಮುಗ್ದ ಹಿಂದೂಗಳನ್ನು ಹತ್ಯೆ ಮಾಡಿ ರಾಕ್ಷಸ ಕೌರ್ಯ ಮರೆದಿದ್ದು ಖಂಡನೀಯ. ಇದು ಮನುಕುಲದ ಮೇಲೆ ನಡೆದಿರುವ ಘೋರ ಕೃತ್ಯ. ಭಯೋತ್ಪಾದಕತೆಯನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು. ಇಂತಹ ಘಟನೆಗಳು ಮರುಕಳಿಸಬಾರದು. ಭಯೋತ್ಪಾದರನ್ನು ನಿರ್ಮೂಲನ ಮಾಡುವಂತೆ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ಶಿವು, ಶ್ರೀರಾಮಸೇನೆಯ ಉಪಾಧ್ಯಕ್ಷ ರಾಮು, ಖಜಾಂಚಿ ಜಿತೇಂದ್ರ ಬಾಬು, ಪ್ರಭು, ಭಾರ್ಗವ್, ಉಮೇಶ್, ರೈತ ಸಂಘದ ಸದಸ್ಯರಾದ ರಾಮಾಂಜಿ, ಶ್ರೀರಾಮಪ್ಪ, ಗೊರಪ್ಪ, ಗೋಪಾಲ್, ಹನುಮಂತರಾಯಪ್ಪ ಇನ್ನೂ ಕೆಲವರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಗೆಹರಿಸಿಕೊಳ್ಳಲು ನಮ್ಮಲ್ಲಿ ಸಮಸ್ಯೆಗಳೇ ಇಲ್ಲ : ಡಿಕೆಶಿ!
ರಾಜಣ್ಣ ನೇಮಿಸಿದ್ದು ನಾನೇ ಎಂದ ಡಿಕೆಗೆ ಸಿದ್ದು ಟಾಂಗ್‌