ಶೃಂಗೇರಿ: ಪ್ರಸ್ತುತ ಉಂಟಾಗುತ್ತಿರುವ ಜಾಗತಿಕ ತಾಪಮಾನ ವೈಪರೀತ್ಯದಿಂದ ಕೃಷಿ ಮೇಲೆ ಪರಿಣಾಮ ಬೀರಿ ಬೆಳೆಗಳು ವಿವಿಧ ರೋಗಗಳಿಗೆ ತುತ್ತಾಗಿ ಬೆಳೆನಾಶದಿಂದ ಮಲೆನಾಡಿನ ರೈತರ ಬದುಕು ಅತಂತ್ರ ಸ್ಥಿಯಲ್ಲಿದೆ ಎಂದು ಶಿವಮೊಗ್ಗ ನವಿಲೆ ಕೃಷಿ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಗಂಗಾಧರ ನಾಯ್ಕ ಹೇಳಿದರು.
ಮಲೆನಾಡಿನಲ್ಲಿ ಈ ಭಾರಿ ಅತಿವೃಷ್ಠಿಯಿಂದ ವಾತಾವರಣದಲ್ಲಿ ತೇವಾಂಶ ಕಡಿಮೆಯಾಗಿ ಬೆಳೆ ಕುಂಠಿತಗೊಳ್ಳುತ್ತಿದೆ.10 ರಿಂದ 14 ಡಿಗ್ರಿ ಉಷ್ಣಾಂಶ ಹೆಚ್ಚಿದ್ದು ರೋಗ ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ. ಇಲಾಖೆ ಶಿಪಾರಸ್ಸು ಮಾಡಿದ ಶಿಲೀಂದ್ರ ನಾಶಕವನ್ನು ಗಿಡಗಳ ಮೇಲೆ ಸಿಂಪಡಿಸಿದರೆ ರೋಗ ನಿಯಂತ್ರಣಕ್ಕೆ ತರಬಹುದಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್, ಅನೂಪ್ ಶೆಟ್ಟಿಹಳ್ಳಿಯವರನ್ನು ಸನ್ಮಾನಿಸಲಾಯಿತು. ಕೃಷಿಕ ಸಮಾಜದ ಗೋಪಾಲ ಹೆಗ್ಡೆ, ರೈತಸಂಘದ ಕಾನೋಳ್ಳಿ ಚಂದ್ರಶೇಖರ್, ತೋಟಗಾರಿಕೆ ಇಲಾಖೆ ಶ್ರೀಕೃಷ್ಣ, ಅಡಕೆ ಸಂಶೋಧನಾ ಕೇಂದ್ರದ ಡಾ.ಸಂಜೀವ ಜಕಾತಿಮಠ, ಶ್ರೀಧರ್ ಎಂ.ಜಿ.ಮತ್ತಿತರರು ಉಪಸ್ಥಿತರಿದ್ದರು.23 ಶ್ರೀ ಚಿತ್ರ 3-
ಶೃಂಗೇರಿ ಆನೆಗುಂದ ಅಡಕೆ ಸಂಶೋಧನಾ ಕೇಂದ್ರದಲ್ಲಿ ನಡೆದ ರೈತದಿನಾಚರಣೆಯಲ್ಲಿ ಪ್ರಗತಿಪರ ಕೃಷಿಕರಾದ ಪ್ರೇಮ್ ಕುಮಾರ್,ಅನೂಪ್ ಶೆಟ್ಟಿಹಳ್ಳಿಯವರನ್ನು ಸನ್ಮಾನಿಸಲಾಯಿತು.