ಸಂವಿಧಾನ ಜಾರಿ ಪೂರ್ವ ಮತ್ತು ಕಾನೂನು ಜಾರಿಯಾದ ನಂತರದ ದಿನಗಳಲ್ಲಿನ ಮಹಿಳೆಯರ ಎಲ್ಲಾ ಕ್ಷೇತ್ರಗಳು ಸಬಲೀಕರಣಗೊಳ್ಳುತ್ತಿವೆ, ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ.
ಕನ್ನಡಪ್ರಭ ವಾರ್ತೆ ಮಂಡ್ಯ
ಜಾಗತಿಕ ಮಟ್ಟದಲ್ಲಿ ಮಹಿಳಾ ಸಬಲೀಕರಣ ಮತ್ತು ಲಿಂಗ ಅಸಮಾನತೆ ತೊಡೆದು ಹಾಕುವುದು ಅತ್ಯವಶ್ಯಕ ಎಂದು ಕನ್ನಿಕಾಶಿಲ್ಪ ನವೋದಯ ಶಿಕ್ಷಣ ತರಬೇತಿ ಸಂಸ್ಥೆ ಅಧ್ಯಕ್ಷೆ ಕನ್ನಿಕಾ ಹೇಳಿದರು.
ನಗರದ ವಿವೇಕಾನಂದ ರಸ್ತೆಯಲ್ಲಿರುವ ಅಪೂರ್ವ ವೆಜ್ ಸಭಾಂಗಣದಲ್ಲಿ ಅಸೋಸಿಯೇಷನ್ ಆಫ್ ಅಲಯನ್ಸ್ ಸಂಸ್ಥೆ ಇಂಟರ್‌ನ್ಯಾಷನಲ್ ಜಿಲ್ಲೆ ಮಂಡ್ಯ ವತಿಯಿಂದ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಶ್ರಮಸ್ತ್ರೀ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ನಾಗರಿಕ ಸಮಾಜದಲ್ಲಿ ಸಾಧಕ ಮಹಿಳೆಯರ ಹಿಂದೆ ಪೋಷಕರ ಬೆಂಬವಿರುತ್ತದೆ. ಸಬಲೀಕರಣಕ್ಕೆ ಹೆಚ್ಚು ಮಹತ್ವ ನೀಡುವ ಕಾನೂನುಗಳು ರಕ್ಷಣೆಯಾಗಿರುತ್ತದೆ. ತಮ್ಮದೇ ಆದ ಕೌಶಲಜ್ಞಾನ, ಪರಿಶ್ರಮ ಸಾಧನೆಗೆ ರಹದಾರಿಯಾಗಿರುತ್ತದೆ ಎಂದು ನುಡಿದರು.
ಸಂವಿಧಾನ ಜಾರಿ ಪೂರ್ವ ಮತ್ತು ಕಾನೂನು ಜಾರಿಯಾದ ನಂತರದ ದಿನಗಳಲ್ಲಿನ ಮಹಿಳೆಯರ ಎಲ್ಲಾ ಕ್ಷೇತ್ರಗಳು ಸಬಲೀಕರಣಗೊಳ್ಳುತ್ತಿವೆ, ಅಡುಗೆ ಮನೆಯಿಂದ ಅಂತರಿಕ್ಷದವರೆಗೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ ಎಂದು ಸ್ಮರಿಸಿದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ನಿರ್ದೇಶಕ ಡಾ.ನಾಗರಾಜ್ ವಿ.ಭೈರಿ ಮಾತನಾಡಿ, ೧೯೦೮ರಲ್ಲಿ ನ್ಯೂಯಾರ್ಕ್‌ನಲ್ಲಿ ಮಹಿಳಾ ಕಾರ್ಮಿಕರು ಉತ್ತಮ ವೇತನ ಮತ್ತು ಮತದಾನದ ಹಕ್ಕಿಗಾಗಿ ನಡೆಸಿದ ಪ್ರತಿಭಟನೆಯೇ ಈ ದಿನದ ಮೂಲವಾಗಿದೆ. ಜಾಗತೀಕವಾಗಿ ಮಹಿಳೆಯರು ವಿದ್ಯಾವಂತರಾಗಿ ದೇಶದ ಪ್ರಗತಿಗೆ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಉದ್ಯೋಗ-ಉದ್ಯಮಗಳಲ್ಲಿ ಮಹಿಳೆಯರು ಹೆಚ್ಚುತ್ತಿದ್ದಾರೆ ಎಂದರು.
ಅಂತಾರಾಷ್ಟ್ರೀಯ ಅಲಯನ್ಸ್ ಸಂಸ್ಥೆ ಮಲ್ಟಿಪಲ್‌ಕೌನ್ಸಿಲ್ ಅಧ್ಯಕ್ಷ ಕೆ.ಟಿ.ಹನುಮಂತು, ನಾಗರೀಕ ಸಮಾಜದಲ್ಲಿ ಎಲೆಮರೆಕಾಯಿಯಂತೆ ದುಡಿಯುವ ಸಾಕಷ್ಟು ಮಹಿಳೆಯರಿದ್ದಾರೆ, ಸಾಧನೆ ಮಾಡಿರುವ ಮಹಿಳೆಯರು ಮತ್ತು ಶ್ರಮಪಡುವ ಮಹಿಳೆಯುರು ನಮ್ಮನಡುವೆ ಇದ್ದಾರೆ, ಇಂತಹವರನ್ನು ಪುರಸ್ಕರಿಸುವುದು ಉತ್ತಮ ಎಂದರು.
ವಿಶ್ವಸಂಸ್ಥೆಯ ಘೋಷವಾಕ್ಯದಂತೆ ಎಲ್ಲಾ ಮಹಿಳೆಯರು ಮತ್ತು ಹುಡುಗಿಯರಿಗಾಗಿ ಹಕ್ಕುಗಳು, ನ್ಯಾಯ, ಕ್ರಿಯೆಗಳಿಗೆ ಬೆಂಬಲಿಸಿ, ಆರ್ಥಿಕ ಪ್ರಗತಿಗೆ ಎಲ್ಲರ ಸಹಕಾರ ಅಗತ್ಯವಶ್ಯಕ ಎಂದರು.
ಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿರುವ ಸಂಜನಾ, ಮೇಘಶ್ರೀ, ಎಚ್.ಸಿ.ವನಿತಾಕುಮಾರಿ, ರಾಧ, ರೇಖಾ, ಮಮತಾ, ಲಕ್ಷ್ಮೀ, ರೂಪ, ಅಮೃತಮಯಿ, ದೇವಮ್ಮ, ಪುಟ್ಟಮ್ಮ, ಶಾಂತಿ, ರಾಜಮ್ಮ ಈ ೧೩ ಮಂದಿ ಶ್ರಮಿಕಮಹಿಳೆಯರಿಗೆ ಶ್ರಮಸ್ತ್ರೀ ಪ್ರಶಸ್ತಿ ಮತ್ತು ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಲಯನ್ಸ್ ಸಂಸ್ಥೆ ಜಿಲ್ಲಾ ರಾಜ್ಯಪಾಲ ಮಾದೇಗೌಡ, ಪದಾಧಿಕಾರಿಗಳಾದ ಪ್ರೊ.ಡೇವಿಡ್, ಜನಪರ ಅಲಯನ್ಸ್ ಸಂಸ್ಥೆಯ ಡಾ.ರತ್ಮಮ್ಮ, ಶಿಕ್ಷಕ ಶಶಿಧರ್‌ಈಚಗೆರೆ, ಧನಂಜಯ್‌ದರಸಗುಪ್ಪೆ, ಮಾಂಡವ್ಯ ನಗರ ಅಲಯನ್ಸ್ ಸಂಸ್ಥೆಯ ಡಾ.ಶಿವಕುಮಾರ್, ೨ನೇ ಉಪರಾಜ್ಯಪಾಲ ಚಂದ್ರಶೇಖರ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.