-ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ ಸೈಂಟಿಸ್ಟ್ಸ್ಅಂಡ್ ಟೆಕ್ನಾಲಜಿಸ್ಟ್ಸ್‌ನಡುವಿನ ಸಹಯೋಗಕ್ಕೆ ಒಡಂಬಡಿಕೆ
ಕನ್ನಡಪ್ರಭ ವಾರ್ತೆ, ದಾವಣಗೆರೆ
ರಕ್ಷಣಾ ತಂತ್ರಜ್ಞಾನದಲ್ಲಿ ಎಂಟೆಕ್ ಕೋರ್ಸ್ ನಡೆಸಲು ಜಿಎಂ ವಿ.ವಿ ಮುಂದಾಗಿದ್ದು, ಅದಕ್ಕಾಗಿ ಬೆಂಗಳೂರು ಶಾಖೆಯ ಇನ್ಸ್‌ಟ್ಯೂಟ್ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ಅಂಡ್ ಟೆಕ್ನಾಲಜಿಸ್ಟ್ಸ್‌ನಡುವಿನ ಸಹಯೋಗಕ್ಕೆ ಒಡಂಬಡಿಕೆ ಮಾಡಿಕೊಳ್ಳಲಾಯಿತು.ಜಿಎಂ ವಿಶ್ವವಿದ್ಯಾಲಯದಲ್ಲಿ ಇನ್ಸ್‌ಟಿಟ್ಯೂಟ್ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ ಅಂಡ್ ಟೆಕ್ನಾಲಜಿಸ್ಟ್ಸ್ ಬೆಂಗಳೂರು ಶಾಖೆಯ ಅಧ್ಯಕ್ಷ ಡಾ. ಎ.ಎನ್. ನಾಗೇಶ್ವರ ಯೋಗಿ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್.ಆರ್. ಶಂಕಪಾಲ್ ಅವರು 2025-26ನೇ ವರ್ಷದ ಸಾಲಿನಲ್ಲಿ ಡಿಆರ್ ಡಿಒ (DRDO) ಅಭಿವೃದ್ಧಿಪಡಿಸಿದ ಮತ್ತು ಎಐಸಿಟಿಇ (AICTE) ಹ್ಯಾಂಡ್ ಬುಕ್ (2021) ನಲ್ಲಿ ಪ್ರಕಟಿಸಲಾದ ಪಠ್ಯಕ್ರಮವನ್ನು ಅನುಸರಿಸಿ ರಕ್ಷಣಾ ತಂತ್ರಜ್ಞಾನದಲ್ಲಿ ಎಂಟೆಕ್ ಕೋರ್ಸ್ ಅನ್ನು ನಡೆಸಲು ಈ ಎರಡರ ನಡುವಿನ ಸಹಯೋಗಕ್ಕೆ ಸಹಿ ಹಾಕಿ ಅನುಮತಿ ಸ್ವೀಕರಿಸಲಾಯಿತು.
ಡಿಆರ್ ಡಿಒ ನ ನಿವೃತ್ತ ಮತ್ತು ಕೆಲಸ ಮಾಡುವ ವಿಜ್ಞಾನಿಗಳ ಪೂಲ್‌ನಿಂದ ಅಧ್ಯಾಪಕರನ್ನು ನಾಮನಿರ್ದೇಶನ ಮಾಡಿ ಮತ್ತು ಸಂಘಟಿಸುವುದು. ರಕ್ಷಣಾ ವಲಯಗಳಿಂದ ಹೆಚ್ಚುವರಿ ಅಧ್ಯಾಪಕರು ಅಥವಾ ತಾಂತ್ರಿಕ ತಜ್ಞರನ್ನು ಗುರುತಿಸುವಲ್ಲಿ ಸಹಾಯ ಮಾಡಬೇಕು. ಈ ಕಾರ್ಯಕ್ರಮಕ್ಕೆ ಸಂಬಂಧಿಸಿದ ಚಟುವಟಿಕೆ ನಿರ್ವಹಿಸಲು ಕೋರ್ಸ್ ಸಂಯೋಜಕರನ್ನು (CCO) ನೇಮಿಸಬೇಕು. ಬಾಹ್ಯ ಸಂಪನ್ಮೂಲಗಳೊಂದಿಗೆ ಸಮನ್ವಯಗೊಳಿಸಲು ಮತ್ತು ಡಿಆರ್ ಡಿಒ ಅವಶ್ಯಕತೆಗಳೊಂದಿಗೆ ಜೋಡಣೆ ಖಚಿತಪಡಿಸಿಕೊಳ್ಳಲು ಜಿಎಂ ವಿಶ್ವವಿದ್ಯಾಲಯಕ್ಕೆ ಸಹಾಯ ಮಾಡುವುದು ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ ಅಂಡ್ ಟೆಕ್ನಾಲಜಿಸ್ಟ್ಸ್ ಪಾತ್ರವಾಗಿದೆ ಎಂದು ಹೇಳಿದರು.
.........
ಫೋಟೊ: ಕ್ಯಾಪ್ಷನಃ8ಕೆಡಿವಿಜಿ45ಃದಾವಣಗೆರೆ ಜಿಎಂ ವಿವಿ ಬೆಂಗಳೂರು ಶಾಖೆಯ ಇನ್ಸ್ಟಿಟ್ಯೂಟ್ ಆಫ್ ಡಿಫೆನ್ಸ್ ಸೈಂಟಿಸ್ಟ್ಸ್ ಅಂಡ್ ಟೆಕ್ನಾಲಜಿಸ್ಟ್ಸ್ ನಡುವಿನ ಸಹಯೋಗಕ್ಕೆ ಒಡಂಬಡಿಕೆ ಮಾಡಿಕೊಂಡಿತು.