- ಶೈಕ್ಷಣಿಕ ಸಾಧನೆಗಾಗಿ 20 ಅತ್ಯುತ್ತಮ ವಿದ್ಯಾರ್ಥಿಗಳಿಗೆ ಚಿನ್ನದ ನಾಣ್ಯ ಉಡುಗೊರೆ
- - - ಕನ್ನಡಪ್ರಭ ವಾರ್ತೆ, ದಾವಣಗೆರೆನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ಮಲ್ಲಿಕಾ 24.0 ಸಾಂಸ್ಕೃತಿಕ ಹಬ್ಬ ಶುಕ್ರವಾರ, ಶನಿವಾರ ಅದ್ಧೂರಿಯಾಗಿ ಆಚರಿಸಲಾಯಿತು.
ಸಂಗೀತ, ನೃತ್ಯ ಮತ್ತು ಶೈಕ್ಷಣಿಕ ಮನ್ನಣೆಯಿಂದ ಗುರುತಿಸಲ್ಪಟ್ಟ ಸಂಭ್ರಮದಲ್ಲಿ ಶೈಕ್ಷಣಿಕ ವರ್ಷದಲ್ಲಿ ಇದೇ ಮೊದಲ ಬಾರಿಗೆ 9.5 ಅಥವಾ ಅದಕ್ಕಿಂತ ಹೆಚ್ಚಿನ ಗಮನಾರ್ಹವಾದ ಸಂಚಿತ ಗ್ರೇಡ್ ಪಾಯಿಂಟ್ ಸರಾಸರಿ (ಸಿಜಿಪಿಎ) ಅನ್ನು ಸಾಧಿಸಿದ 20 ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ನಾಣ್ಯಗಳನ್ನು ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ನೀಡುವುದರ ಮೂಲಕ ಪ್ರತಿಭಾವಂತರನ್ನು ಗೌರವಿಸಿದರು.ಕಾಲೇಜಿನ ಪ್ರಾಚಾರ್ಯ ಡಾ. ಎಂ.ಬಿ. ಸಂಜಯ್ ಪಾಂಡೆ ಮಾತನಾಡಿ, ಸಂಚಿತ ಗ್ರೇಡ್ ಪಡೆಯಲು ಎಲ್ಲರೂ ಪ್ರಯತ್ನ ಮಾಡಿದ್ದಾರೆ. ಅದರಲ್ಲಿ ಇದುವರೆಗೂ ಒಟ್ಟು 64 ವಿದ್ಯಾರ್ಥಿಗಳು ಈ ಗಮನಾರ್ಹ ಸಾಧನೆ ಮೆರೆದಿದ್ದಾರೆ. ಸಿ.ಜಿ.ಪಿ.ಎ.ನಲ್ಲಿ ಸಾಧನೆ ಮಾಡಿ, ಚಿನ್ನದ ನಾಣ್ಯಗಳನ್ನು ಪಡೆದ ಪ್ರತಿಯೊಬ್ಬ ವಿದ್ಯಾರ್ಥಿ ಪ್ರತಿಭೆಯನ್ನು ವಿವಿ ಕುಲಪತಿ ಡಾ. ಎಸ್.ಆರ್. ಶಂಕಪಾಲ್ ಶ್ಲಾಘಿಸಿದರು.
ವಿದ್ಯಾರ್ಥಿಗಳು, ಅಧ್ಯಾಪಕರು ಮತ್ತು ಅತಿಥಿಗಳು ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪೋಷಕರು ಸಮಾರಂಭಕ್ಕೆ ಸಾಕ್ಷಿಯಾದರು.ಕಾರ್ಯಕ್ರಮದಲ್ಲಿ ಭೀಮ ಸಮುದ್ರದ ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಚೇರ್ಮನ್ ಜಿ.ಎಂ. ಪ್ರಸನ್ನಕುಮಾರ್, ಆಡಳಿತಾಧಿಕಾರಿ ವೈ.ಯು. ಸುಭಾಷ್ಚಂದ್ರ, ವಿವಿ ಉಪಕುಲಪತಿ ಡಾ.ಮಹೇಶಪ್ಪ, ರಿಜಿಸ್ಟ್ರಾರ್ ಡಾ. ಬಿ.ಎಸ್. ಸುನೀಲ್ ಕುಮಾರ, ಕಾರ್ಯಕ್ರಮದ ಸಂಯೋಜಕರಾದ ಡಾ. ಎಚ್.ಎಸ್. ಕಿರಣ್ ಕುಮಾರ, ಎಂ.ಸಂತೋಷ್ ಕುಮಾರ ಹಾಗೂ ವಿವಿಧ ಕಾಲೇಜಿನ ಪ್ರಾಚಾರ್ಯರು, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು.
- - - -26ಕೆಡಿವಿಜಿ33ಃ:ದಾವಣಗೆರೆಯ ಜಿ.ಎಂ. ವಿ.ವಿ. ವತಿಯಿಂದ ಜಿಎಂಐಟಿ ಕಾಲೇಜಿನಲ್ಲಿ ನಡೆದ ಮಲ್ಲಿಕಾ-2024 ಸಾಂಸ್ಕೃತಿಕ ಹಬ್ಬದಲ್ಲಿ ಸಿಜಿಪಿಎ ಸಾಧಿಸಿದ ವಿದ್ಯಾರ್ಥಿಗಳಿಗೆ ಸಂಸದ ಡಾ. ಜಿ.ಎಂ. ಸಿದ್ದೇಶ್ವರ್ ಚಿನ್ನದ ನಾಣ್ಯಗಳನ್ನು ನೀಡಿ ಗೌರವಿಸಿದರು.