ಕನ್ನಡಪ್ರಭ ವಾರ್ತೆ ರಾಯಚೂರು
ರಾಯಚೂರು ಲೋಕಸಭಾ ಕ್ಷೇತ್ರದಿಂದ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಮತ್ತೊಮ್ಮೆ ಅವಕಾಶ ನೀಡಿ ಟಿಕೆಟ್ ಘೋಷಿಸಿದ ಬೆನ್ನಲ್ಲಿಯೇ ಆಕಾಂಕ್ಷಿಗಳು ಪಕ್ಷದ ತೀರ್ಮಾನಕ್ಕೆ ತಲೆಬಾಗದೇ ತಿರುಗಿಬಿದಿದ್ದು, ಇದರ ಪರಿಣಾಮ ಹಾಲಿ ಸಂಸದ, ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ವಿರುದ್ಧ ಸ್ವ-ಪಕ್ಷದವರೇ ಗೋ ಬ್ಯಾಕ್ ಧ್ವನಿ ಎತ್ತುತ್ತಿದ್ದಾರೆ. ಟಿಕೆಟ್ ಘೋಷಣೆಯಾಗಿ ವಾರ ಕಳೆಯುತ್ತಿದ್ದರು ಬಂಡಾಯದ ಬಿಸಿ ಜಾಸ್ತಿಯಾಗುತ್ತಿದೆಯೇ ವಿನಾಃ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಲೋಕಸಭಾ ಕ್ಷೇತ್ರಕ್ಕೆ ಹಾಲಿ ಸಂಸದ ಅಮರೇಶ್ವರ ನಾಯಕ ಜೊತೆಗೆ ಮಾಜಿ ಸಂಸದ ಬಿವಿ ನಾಯಕ ಹಾಗೂ ಮಾಜಿ ಶಾಸಕ ತಿಪ್ಪರಾಜು ಹವಲ್ದಾರ್ ಅವರು ಟಿಕೆಟ್‌ಗಾಗಿ ಗಟ್ಟಿ ಪ್ರಯತ್ನವನ್ನೆ ನಡೆಸಿದ್ದರು. ಬಿಜೆಪಿ ಆಂತರಿಕ ಹಾಗೂ ಬಾಹ್ಯ ಸಮೀಕ್ಷೆ ರೀತ್ಯ ಮಾಜಿ ಸಂಸದ ಬಿ.ವಿ.ನಾಯಕ ಅವರಿಗೆ ಟಿಕೆಟ್ ದೊರೆಯುತ್ತದೆ ಎನ್ನುವ ಗ್ಯಾರಂಟಿ ಘೋಷ ಎಲ್ಲೆಡೆ ಪಸರಿಸಿತ್ತು. ಆದರೆ, ಕೊನೆ ಕ್ಷಣದಲ್ಲಿ ಕಾಣದ ಕೈಗಳ ಚಮತ್ಕಾರದಡಿ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರಿಗೆ ಪಕ್ಷವು ಮತ್ತೊಮ್ಮೆ ಅವಕಾಶ ನೀಡಿ ಟಿಕೆಟ್ ಘೋಷಿಸಿತು. ಇದು ಕೊನೆ ಗಳಿಗೆಯವರೆಗೂ ಆಸೆಯಿಟ್ಟುಕೊಂಡಿದ್ದ ಬಿ.ವಿ.ನಾಯಕ ಹಾಗೂ ಬೆಂಬಲಿಗರಲ್ಲಿ ಅಸಮಧಾನದ ಜ್ವಾಲಾಮುಖಿ ಸಿಡಿಯುವಂತೆ ಮಾಡಿದ್ದು ಇವರ ಜೊತೆಗೆ ತಿಪ್ಪರಾಜು ಹಾಗೂ ಬೆಂಬಲಿಗರು ಸಹ ಹಾಲಿ ಸಂಸದರ ಟಿಕೆಟ್ ನೀಡಿದ್ದಕ್ಕೆ ಅಸಮಧಾನ ಬಹಿರಂಗಪಡಿಸುತ್ತಿದ್ದಾರೆ.ಸಫಲತೆಯಾಗದ ಸಂಧಾನ: