ಸೋಮವಾರಪೇಟೆಗೆ ಗೋ ಸಂರಕ್ಷಣಾ ಯಾತ್ರೆ ಪ್ರವೇಶ

KannadaprabhaNewsNetwork |  
Published : Oct 19, 2023, 12:45 AM IST
ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ಯಾತ್ರೆ ಬುಧವಾರ ಸೋಮವಾರಪೇಟೆ ಪಟ್ಟಣ ಪ್ರವೇಶಿಸಿತು. | Kannada Prabha

ಸಾರಾಂಶ

ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮಹಾಯಜ್ಞಾದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ಯಾತ್ರೆ ಬುಧವಾರ ಸೋಮವಾರಪೇಟೆ ಪಟ್ಟಣ ಪ್ರವೇಶಿಸಿತು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ ಗೋವು ಸಂರಕ್ಷಣಾ ರಥಯಾತ್ರೆ ಬುಧವಾರ ಪಟ್ಟಣಕ್ಕೆ ಆಗಮಿಸಿತು. ಶ್ರೀ ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋಸೇವಾ ಸಂಸ್ಥಾನ ಹಾಗೂ ಗೋಸೇವಾ ಗತಿವಿಧಿ ಕರ್ನಾಟಕ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುದು ಗ್ರಾಮದಲ್ಲಿ ನಡೆಯಲಿರುವ ಅಷ್ಟೋತ್ತರ ಶ್ರೀಮದ್ ಭಾಗವತ ಸಪ್ತಾಹ ಮಹಾಯಜ್ಞಾದ ಅಂಗವಾಗಿ ರಾಜ್ಯಾದ್ಯಂತ ಸಂಚರಿಸಲಿರುವ ಗೋ ಸಂರಕ್ಷಣಾ ಯಾತ್ರೆ ಬುಧವಾರ ಸೋಮವಾರಪೇಟೆ ಪಟ್ಟಣ ಪ್ರವೇಶಿಸಿತು. ಬಸವೇಶ್ವರ ದೇವಾಲಯದ ಮುಂಭಾಗ ವೀರಶೈವ ಸಮಾಜದ ಪ್ರಮುಖರು ಸ್ವಾಗತಿಸಿದರು. ದೊಡ್ಡಬಳ್ಳಾಪುರ ಮಠದ ಶ್ರೀ ನಿಶ್ಚಲ ದೇಶಿಕೇಂದ್ರ ಸ್ವಾಮೀಜಿ, ಗೋವಿಗೆ ಪೂಜೆ ಸಲ್ಲಿಸಿ ಅಕ್ಕಿ ಬೆಲ್ಲ ತಿನ್ನಿಸಿದರು. ಸಮಾಜದ ಪ್ರಮುಖರಾದ ಶಿವಕುಮಾರ್, ಮೃತ್ಯುಂಜಯ, ನಾಗರಾಜ್, ರಾಜಣ್ಣ, ಯೋಗೇಶ್, ಕಲಾಗಿರೀಶ್, ಮಂಜುಳಾ ಬಸವರಾಜ್, ಉಮಾರುದ್ರಪ್ರಸಾದ್, ಎಸ್.ಮಹೇಶ್ ಮತ್ತಿತರರು ಇದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ : ಡೆಬಿಟ್, ಪಾನ್ ಕಾರ್ಡ್ ರಹಸ್ಯ ಬಯಲು
ದ್ವೇಷ ಭಾಷಣ ತಡೆ, ಸುಳ್ಳು ಸುದ್ದಿ ನಿಯಂತ್ರಣಕ್ಕೆ ಮಸೂದೆ