ಅಫಜಲ್ಪುರ: ರಸ್ತೆ ಮಧ್ಯದಲ್ಲಿ ದಿಢೀರನೆ ಬಂದ ಹಂದಿ ರಕ್ಷಿಸಲು ಹೋಗಿ ಡಿಸೆಲ್ ಟ್ಯಾಂಕರ್ ಪಲ್ಟಿ ಹೊಡೆದು ಬೆಂಕಿ ಹೊತ್ತಿಕೊಂಡ ಘಟನೆ ತಾಲೂಕಿನ ಮಲ್ಲಾಬಾದ ಗ್ರಾಮದ ಬಳಿ ನಡೆದಿದೆ. ಡಿಸೆಲ್ ತುಂಬಿಕೊಂಡು ಮುಂಬೈನಿಂದ ತೆಲಂಗಾಣದ ಕರ್ನೂಲ್ ಗೆ ಈ ಟ್ಯಾಂಕರ್ ಹೊರಟಿತ್ತು. ಟ್ಯಾಂಕರ್ ಅಂದಾಜು ೪೦ ಸಾವಿರ ಲೀಟರ ಡಿಸೇಲ್ ಸಂಗ್ರಹಣೆ ಹೊಂದಿತ್ತು. ಪಲ್ಟಿಯಾದ ನಂತರ ಅದಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಆಗಿಲ್ಲ. ವಿಷಯ ತಿಳಿದು ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದ್ದಾರೆ. ಈ ಕುರಿತು ಅಫಜಲ್ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.