ಸಂಘದ ಆದಾಯ ಬಳಸಿಕೊಂಡು ಅಭಿವೃದ್ಧಿಯತ್ತ ಸಾಗಿ: ರಮೇಶ್‌ ಬಂಡಿಸಿದ್ದೇಗೌಡ

KannadaprabhaNewsNetwork |  
Published : Jan 22, 2026, 02:00 AM IST
21ಕೆಎಂಎನ್ ಡಿ22 | Kannada Prabha

ಸಾರಾಂಶ

ಬೆಳಗೊಳ ಸಹಕಾರ ಸಂಘ ಅಭಿವೃದ್ಧಿ ಸಾಧಿಸಿದ ಸಂಘವಾಗಿದೆ. ಈ ಭಾಗದಲ್ಲಿ ಹೆಚ್ಚು ರೈತರಿಗೆ ಅವಲಂಭಿತವಾಗಿದೆ. ರಸಗೊಬ್ಬರ ವಿತರಣೆ ಸೇರಿದಂತೆ ರೈತರಿಗೆ ಅಗತ್ಯ ಪರಿಕರ ಹಾಗೂ ದಾಸ್ತಾನು ಹೊಂದಿರುವ ಈ ಸಂಘ ಇನ್ನಷ್ಟು ಬೆಳವಣಿಗೆ ಕಾಣಲು ಸಹಕಾರ ನೀಡುತ್ತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಸಂಘದ ಆದಾಯಗಳ ಬಳಸಿಕೊಂಡು ನಿರ್ದೇಶಕರು ಅಭಿವೃದ್ಧಿಯತ್ತ ತೆಗೆದುಕೊಂಡು ಹೋಗಬೇಕು ಎಂದು ಶಾಸಕ ರಮೇಶ್‌ ಬಂಡಿಸಿದ್ದೇಗೌಡ ಹೇಳಿದರು.

ತಾಲೂಕಿನ ಬೆಳಗೊಳ ಗ್ರಾಮದ ಕೃಷಿಪತ್ತಿನ ಸಹಕಾರ ಸಂಘದ ನವೀಕರಣಗೊಂಡ ಸಂಘದ ಕಚೇರಿ ಉದ್ಘಾಟಿಸಿ ಮಾತನಾಡಿ, ಬೆಳಗೊಳ ಸಹಕಾರ ಸಂಘ ಅಭಿವೃದ್ಧಿ ಸಾಧಿಸಿದ ಸಂಘವಾಗಿದೆ. ಈ ಭಾಗದಲ್ಲಿ ಹೆಚ್ಚು ರೈತರಿಗೆ ಅವಲಂಭಿತವಾಗಿದೆ ಎಂದರು.

ರಸಗೊಬ್ಬರ ವಿತರಣೆ ಸೇರಿದಂತೆ ರೈತರಿಗೆ ಅಗತ್ಯ ಪರಿಕರ ಹಾಗೂ ದಾಸ್ತಾನು ಹೊಂದಿರುವ ಈ ಸಂಘ ಇನ್ನಷ್ಟು ಬೆಳವಣಿಗೆ ಕಾಣಲು ಸಹಕಾರ ನೀಡುತ್ತಿದೆ. ಸುಮಾರು 3 ಲಕ್ಷ ವೆಚ್ಚದಲ್ಲಿ ಸಂಘದ ಒಳಭಾಗದ ಕಟ್ಟಡ ನವೀಕರಿಸಿ ಸಂಘಕ್ಕೆ ಅಗತ್ಯವಿದ್ದ ಸಭಾಂಗಣ ಹಾಗೂ ಕಚೇರಿ, ಗುಮಾಸ್ತರ ಕೊಠಡಿಗಳನ್ನು ಹೊಸ ರೂಪ ನೀಡಲಾಗಿದೆ. ನಿರ್ದೇಶಕರು ಹಾಗೂ ಷೇರುದಾರರು ರೈತರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಶಾಸಕರು ಸಲಹೆಗಳ ನೀಡಿದರು.

ಈ ವೇಳೆ ಡಿಸಿಸಿ ಬ್ಯಾಂಕ್ ನಿರ್ದೇಶಕ ಡಿ ಗಿರೀಶ್, ಪೀಕಾರ್ಡ್ ಬ್ಯಾಂಕ್‌ ನಿರ್ದೇಶಕ ರವೀಶ್, ಗ್ರಾಪಂ ಅಧ್ಯಕ್ಷೆ ಸವಿತಾ ರವಿಕುಮಾರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷೆ ಸುಪ್ರಿಯಾ ರವಿಕುಮಾರ್, ಉಪಾಧ್ಯಕ್ಷ ಸಿದ್ದರಾಜು, ನಿರ್ದೇಶಕರಾದ ಬಿ.ಕೆ. ಪುಟ್ಟಸ್ವಾಮಿ, ಬಿ.ವಿ.ಹರೀಶ್, ನಾಗೇಂದ್ರ, ಎಂಡಿಸಿಸಿ ಬ್ಯಾಂಕ್ ನ ಸೂಪರ್ ವೈಜರ್ ಕಿರಣ್ ಕುಮಾರ್ ಸೇರಿದಂತೆ ಸಂಘದ ಮ್ಯಾನೇಜರ್, ಶಿವಕುಮಾರ್, ತಾಪಂ ಮಾಜಿ ಸದಸ್ಯ ಬಿ.ಎಂ.ಸ್ವಾಮೀಗೌಡ, ಮಹದೇವಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಿ.ವಿ.ಸುರೇಶ್, ಪುಟ್ಟರಾಜು, ರವಿಕುಮಾರ, ಸಂಘದ ಮಾಜಿ ಅಧ್ಯಕ್ಷ ವೆಂಕಟೇಶ್, ಪಿಡಿಒ ಕುಳ್ಳೆಗೌಡ, ಗ್ರಾಮದ ಯಜಮಾನರಾದ ಶ್ರೀನಿವಾಸೇಗೌಡ, ವಿಷಕಂಠೇಗೌಡ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅನ್ಯಕೋಮಿನವನ ಜತೆ ಮದುವೆ: ಮೊಮ್ಮಗಳ ಶಿಶು ಕೊಂ*ದ ಅಜ್ಜಿ!
ಕಾಳಸಂತೆಯಲ್ಲಿ ಎಲ್ಪಿಜಿ ಸೇಲ್‌ ಮೇಲೆ ನಿಗಾ - ಅಧಿಕಾರಿಗಳಿಗೆ ಸಿಎಸ್‌ ಸೂಚನೆ