ಕಠಿಣ ಶ್ರಮದಿಂದ ಗುರಿ ತಲುಪಲು ಸಾಧ್ಯ: ಮುಖೇಶ್ ಮತ್ತೀಕೋಟೆ

KannadaprabhaNewsNetwork |  
Published : Jun 02, 2025, 01:02 AM ISTUpdated : Jun 02, 2025, 01:03 AM IST
ಶೈಕ್ಷಣಿಕ ಕಾರ್ಯಗಾರವನ್ನು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಅಧ್ಯಕ್ಷ ಮುಕೇಶ್‌ ಮತ್ತಿಕೋಟೆ ಉದ್ಘಾಟಿಸಿದರು. | Kannada Prabha

ಸಾರಾಂಶ

ಸಮಾಜದಲ್ಲಿನ ಶೋಷಿತರು,ಕೆಳಸ್ತರದವರು ಸಾಮಾಜಿಕವಾಗಿ,ಆರ್ಥಿಕವಾಗಿ ಸದೃಡವಾಗಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉನ್ನತ ವ್ಯಾಸಂಗ ಪ್ರತಿಯೊಬ್ಬರ ಗುರಿಯಾಗಬೇಕು. ಐಎಎಸ್ ಐಪಿಎಸ್ ಕೇಡರ್ ಗಳಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿ ಆ ದಿಸೆಯಲ್ಲಿ ಕಠಿಣ ಪ್ರಯತ್ನ, ಶ್ರಮದಿಂದ ಮಾತ್ರ ನಿಶ್ಚಿತ ಗುರಿ ತಲುಪಲು ಸಾದ್ಯ ಎಂದು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಚಾಲಕ ಮುಖೇಶ್ ಮತ್ತೀಕೋಟೆ ಹೇಳಿದರು.

ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಸಮಾಜದಲ್ಲಿನ ಶೋಷಿತರು,ಕೆಳಸ್ತರದವರು ಸಾಮಾಜಿಕವಾಗಿ,ಆರ್ಥಿಕವಾಗಿ ಸದೃಡವಾಗಲು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಉನ್ನತ ವ್ಯಾಸಂಗ ಪ್ರತಿಯೊಬ್ಬರ ಗುರಿಯಾಗಬೇಕು. ಐಎಎಸ್ ಐಪಿಎಸ್ ಕೇಡರ್ ಗಳಲ್ಲಿ ಸೇವೆ ಸಲ್ಲಿಸುವ ಗುರಿ ಹೊಂದಿ ಆ ದಿಸೆಯಲ್ಲಿ ಕಠಿಣ ಪ್ರಯತ್ನ, ಶ್ರಮದಿಂದ ಮಾತ್ರ ನಿಶ್ಚಿತ ಗುರಿ ತಲುಪಲು ಸಾದ್ಯ ಎಂದು ಭಾರತೀಯ ವಿದ್ಯಾರ್ಥಿ ಸಂಘದ ಜಿಲ್ಲಾ ಸಂಚಾಲಕ ಮುಖೇಶ್ ಮತ್ತೀಕೋಟೆ ಹೇಳಿದರು.

ಪಟ್ಟಣದ ಗುರುಭವನದಲ್ಲಿ ಶನಿವಾರ ಭಾರತೀಯ ವಿದ್ಯಾರ್ಥಿ ಸಂಘ ಮತ್ತು ಶ್ರೀ ಶಿವಶರಣ ಮಾದಾರ ಚನ್ನಯ್ಯ ಜನ್ಮಸ್ಥಳ ಸೇವಾ ಸಮಿತಿ ಬಳ್ಳಿಗಾವಿ ಆಯೋಜಿಸಿದ್ದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ನಾವು ಉದ್ಯೋಗದ ಜತೆಗೆ ನಮ್ಮ ಭವಿಷ್ಯದೆಡೆಗೂ ಯೋಚಿಸಬೇಕು. ನಮ್ಮ ಗುರಿ ದೊಡ್ಡದಾಗಿರಬೇಕು. ಕೇವಲ ರಾಜಕೀಯ ನಮ್ಮ ಗುರಿಯಾಗಬಾರದು. ಜತೆಗೆ ಸಂವಿಧಾನದ ಅಡಿಯಲ್ಲಿ ಬರುವ ಮಹತ್ತರವಾದ ಹುದ್ದೆಗಳಲ್ಲಿ ನಾವು ಕೆಲಸ ಮಾಡುವಂತಾಗಬೇಕು,ನಿಮ್ಮ ಶೈಕ್ಷಣಿಕ ಬದುಕಿನ ಗುರಿ ಮುಟ್ಟುವ ಕಾರ್ಯಮಾಡಲು ಶ್ರಮಿಸಬೇಕು ಎಂದರು

ವಕೀಲ ದಾವಣಗೆರೆಯ ಮೋಹನ್ ಕುಮಾರ್ ಮಾತನಾಡಿ, ಹಿಂದುಳಿದ ವರ್ಗ,ಜನಾಂಗದ ಮಕ್ಕಳು ಪ್ರೌಢ ಶಿಕ್ಷಣದಿಂದಲೇ ಉನ್ನತ ಶ್ರೇಣಿ ಪಡೆಯಬೇಕು, ಅದು ಮುಂದೆ ದೊಢ್ಡ ಮಟ್ಟದ ಶಿಕ್ಷಣ ಪಡೆಯಲು ಸಹಕಾರಿಯಾಗುತ್ತದೆ. ಅಭ್ಯಾಸ ಮತ್ತು ಸಾಧನೆಯಿಂದ ಮಾತ್ರ ನಮಗೆ ವಿದ್ಯೆ ಲಭ್ಯವಾಗುತ್ತದೆ. ವಿದ್ಯೆ ಯಾರ ಸ್ವತ್ತೂ ಅಲ್ಲ, ಅದು ಕೇವಲ ಸಾಧಕನ ಸ್ವತ್ತು. ನಾವು ಅಲ್ಪತೃಪ್ತರಾಗದೇ ಶಿಕ್ಷಣ ಕ್ಷೇತ್ರದಲ್ಲಿ ಸಾಧಿಸುವ ಛಲದಿಂದ ಮುಂದೆ ಹೆಜ್ಜೆಯಿಡಿ ಎಂದು ಕಿವಿಮಾತು ಹೇಳಿದರು.

ಬಾಪೂಜಿ ವಿದ್ಯಾಸಂಸ್ಥೆಯ ಸಂಸ್ಥಾಪಕ,ಅಧ್ಯಕ್ಷ ಬಿ,ಪಾಪಯ್ಯ ಮಾತನಾಡಿ, ಇಂತಹ ಕಾರ್ಯಾಗಾರಗಳಿಂದ ನೀವು ಮೇಲ್ಮಟ್ಟಕ್ಕೇರಿದರೆ ಎಲ್ಲರ ಶ್ರಮ ಸಾರ್ಥಕವಾಗುತ್ತದೆ. ನಾವು ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡೋಣ. ಮುಂದೆಯೂ ಕೂಡ ನಿಮ್ಮಅನುಕೂಲಕ್ಕೆ ಇಂತಹ ಕಾರ್ಯಾಗಾರ ಏರ್ಪಡಿಸಿದಾಗ ಸಮರ್ಥವಾಗಿ ಬಳಸಿಕೊಂಡು ಮೇಲಕ್ಕೆ ಬರಬೇಕು, ನಿಮ್ಮ ಭವಿಷ್ಯ ನಿಮ್ಮ ಗುರಿ ಕಣ್ಮುಂದೆ ಇದ್ದರೆ ಸಾಧನೆ ಬಹಳ ದೊಡ್ಡದಲ್ಲ. ಸರ್ಕಾರದ ಸವಲತ್ತುಗಳನ್ನು ಬಳಸಿಕೊಂಡು ಮುಂದೆ ಬನ್ನಿ ಎಂದರು.

ನಮ್ಮ ಕನಸು ಅತ್ಯಂತ ಮಹತ್ವದ್ದಾಗಿರಲಿ.ದೇಶದ ಅತ್ಯುನ್ನತ ಹುದ್ದೆಗಳಲ್ಲಿ ನೀವು ಕಾಣಬೇಕು, ಪ್ರತಿಷ್ಠಿತ ವೈಜ್ಞಾನಿಕ, ಸಾಮಾಜಿಕ ರಕ್ಷಣೆ ಮತ್ತು ಮಾಧ್ಯಮ ಕ್ಷೇತ್ರಗಳಲ್ಲಿ ನೀವು ಕಾರ್ಯ ನಿರ್ವಹಿಸಬೇಕು. ಭಾರತೀಯ ವಿದ್ಯಾರ್ಥಿ ಸಂಘದ ಧ್ಯೇಯೋದ್ದೇಶಗಳು ಅದ್ಬುತವಾಗಿವೆ. ಶೈಕ್ಷಣಿಕವಾಗಿ ನಾವು ಮೊದಲು ಮುಂಚೂಣಿಯಲ್ಲಿ ಇರಬೇಕು ಎಂದು ಹೇಳಿದರು.

ಸುಮಾರು 150ಕ್ಕೂ ಅಧಿಕ ಶಿಬಿರಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಉಪನ್ಯಾಸಕ ನಾಗರಾಜ್ ಹರಿಜನ್ ಆಗಮಿಸಿದ್ದರು.

ಮಾದಾರ ಚನ್ನಯ್ಯ ಜನ್ಮಸ್ಥಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಸುರೇಶ್,ಟಿ ಅರಳಿಹಳ್ಳಿ ಅದ್ಯಕ್ಷತೆ ವಹಿಸಿದ್ದರು. ರಕ್ಷಣಾ ಇಲಾಖೆಯ ಸುನಿಲ್ ಬಾಪುಲೆ, ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ಗುಡದಯ್ಯ ಉಡುಗಣಿ ಶಿಕ್ಷಣ ಇಲಾಖೆಯ ಶಿವ, ಭಾರತೀಯ ವಿದ್ಯಾರ್ಥಿ ಸಂಘದ ತಾ.ಅಧ್ಯಕ್ಷ ಮಂಜುನಾಥ್, ಪದಾದಿಕಾರಿಗಳು,ಶಿಬಿರಾರ್ಥಿಗಳು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ