ಕುದೂರು: ಹೇಮಾವತಿ ನೀರಿನ ಜಲಾಶಯ ಇರುವುದು ಹಾಸನ ಜಿಲ್ಲೆಯ ಗೊರೂರಿನಲ್ಲಿ. ಅಲ್ಲಿಂದ ತುಮಕೂರು ಜಿಲ್ಲೆಗೆ ನೀರು ಹರಿಯಬೇಕಾದರೆ ಹಾಸನ ಜಿಲ್ಲೆಯ ರೈತರು ತುಮಕೂರಿನ ರಾಜಕಾರಣಿಗಳಿಂದ ಪ್ರೇರಿತ ರೈತರಂತೆ ಮಾಡಿದ್ದರೆ ತುಮಕೂರು ಜಿಲ್ಲೆಗೆ ನೀರು ಹರಿಯುತ್ತಿತ್ತಾ?
470 ಕೋಟಿ ರು. ಖರ್ಚು:
ಶ್ರೀರಂಗ ಏತ ನೀರಾವರಿ ಯೋಜನೆಯಿಂದ 170 ಕೋಟಿ, ಎಕ್ಸ್‌ಪ್ರೆಸ್ ಕೆನಾಲ್ ಯೋಜನೆಯಿಂದ 300 ಕೋಟಿ ರು. ಸೇರಿ ಒಟ್ಟು 470 ಕೋಟಿ ರು. ಮಾಗಡಿ ತಾಲೂಕಿನ ಕೆರೆಗಳಿಗೆ ನೀರು ಹರಿಸಲು ವೆಚ್ಚ ಮಾಡಲಾಗುತ್ತಿದೆ. ಇದರಲ್ಲಿ ಶೇ.40ರಷ್ಟು ಹಣ ಖರ್ಚಾಗಿದೆ. ಮಾಗಡಿ ತಾಲೂಕಿನ ರೈತರು ಆಸೆ ಕಂಗಳಿಂದ ತಾಲೂಕಿನ ಕೆರೆಗಳಿಗೆ ಹೇಮೆ ಹರಿಯುತ್ತಾಳೆ ಎಂದು ಕಾತುರದಿಂದ ಕಾಯುತ್ತಿದ್ದಾರೆ. ನೀರಿನ ವಿಷಯದಲ್ಲಿ ರಾಜಕೀಯ ಲೇಪನ ಕಟ್ಟಿಕೊಂಡು ಅನ್ನದಾತರ ಬದುಕಿಗೆ ಅಡ್ಡಿಪಡಿಸುವುದು ಎಷ್ಟರ ಮಟ್ಟಿಗೆ ಸರಿ?ತುಮಕೂರು ಜಿಲ್ಲೆಯ ಶಿರಾ, ತಿಪಟೂರು, ಗುಬ್ಬಿ, ತುರುವೇಕೆರೆ, ಕುಣಿಗಲ್ ರೈತರನ್ನು ವಂಚಿಸಿ ನಮಗೆ ನೀರು ಬೇಕು ಎಂಬ ಹಠ ಮಾಗಡಿ ತಾಲೂಕಿನ ಜನ ಮಾಡುತ್ತಿಲ್ಲ. ಇರುವ ನೀರು ಹಂಚಿಕೊಂಡರೆ ಎರಡೂ ಜಿಲ್ಲೆಯವರಿಗೆ ಅನುಕೂಲವಾಗುತ್ತದೆ. ಈ ಸತ್ಯ ಪ್ರತಿಭಟನೆ ಮಾಡುತ್ತಿರುವ ರಾಜಕಾರಣಿಗಳಿಗೂ ಗೊತ್ತಿದೆ. ಆದರೆ ರೈತರನ್ನು ದಿಕ್ಕು ತಪ್ಪಿಸಿ ಹೋರಾಟವನ್ನು ಹಿಂಸಾರೂಪಕ್ಕೆ ತಿರುಗಿಸಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವುದು ಅಕ್ಷಮ್ಯ ಎಂಬುದು ಮಾಗಡಿ ತಾಲೂಕಿನ ಜನರ ಅಸಮಾಧಾನ.
ಈಗ ಅದೇ ಸುರೇಶ್‌ಗೌಡರು ರೈತರನ್ನು ಮುಂದೆ ಮಾಡಿ ಹೇಮೆ ಮಾಗಡಿಗೆ ಹರಿಯಲು ಸಾಧ್ಯವಿಲ್ಲ ಎಂದು ಕಾಲುವೆಯೊಳಗೆ ಜೆಸಿಬಿಯಿಂದ ಪೈಪುಗಳನ್ನು ತಳ್ಳಿ ಪ್ರತಿಭಟಿಸುತ್ತಿರುವುದು ದೇವರು ಮೆಚ್ಚುವ ಕಾರ್ಯವೇ ಎಂದು ಜನ ಪ್ರಶ್ನಿಸಿದ್ದಾರೆ.
ಸರ್ವೇ ಜನಃ ಸುಖೀನೋಭವಂತು ಎಂದು ಉಪದೇಶ ನೀಡುವ ಸ್ವಾಮೀಜಿಗಳು ಕೂಡಾ ಮಾಗಡಿ ತಾಲೂಕಿನ ರೈತರಿಗೆ ನೀರು ಕೊಡುವುದಿಲ್ಲ ಎಂದು ರಸ್ತೆಗಿಳಿದು ಚಳವಳಿ ಮಾಡುತ್ತಿರುವುದು ನಿಜಕ್ಕೂ ಅಚ್ಚರಿ.
ತುಮಕೂರು ಜಿಲ್ಲೆಯ ಸುರೇಶ್‌ಗೌಡರು ಇದನ್ನು ಗಮನಿಸಬೇಕಿದೆ. ಸಿದ್ದಗಂಗಾ ಶ್ರೀಗಳ ಜನ್ಮಸ್ಥಳ ಮಾಗಡಿ ತಾಲೂಕಿನ ವೀರಾಪುರ, ಬೆಂಗಳೂರು ಕಟ್ಟಿದ ಕೆಂಪೇಗೌಡರ ನಾಡು, ವೃಕ್ಷಮಾತೆ ಸಾಲುಮರದ ತಿಮ್ಮಕ್ಕನ ಸಾಲುಮರದ ನೆರಳಿನ ಊರು. ಇದನ್ನೆಲ್ಲಾ ಗಮನದಲ್ಲಿಟ್ಟುಕೊಂಡು ಮತ್ತೊಮ್ಮೆ ಯೋಚನೆ ಮಾಡಿ ರೈತರ ದಿಕ್ಕು ತಪ್ಪಿಸುವುದನ್ನು ನಿಲ್ಲಿಸಿ ಪರಸ್ಪರ ಸಾಮರಸ್ಯ ಮೂಡಿಸುವಂತಾಗಲಿ ಎಂಬುದು ಮಾಗಡಿ ತಾಲೂಕಿನ ಜನರ ಆಶಯವಾಗಿದೆ.
ಮಾತುಕತೆಯಿಂದ ಮಾತ್ರ ಸಾಧ್ಯ:
ಬಾಕ್ಸ್ .............
ಡಾ.ಮಂಜುನಾಥ್ ಸಂಸದರಾಗಿ ಆಯ್ಕೆಯಾದ ನಂತರ ಮಾಗಡಿ ತಾಲೂಕನ್ನು ಮರೆತಂತಿದೆ ಎಂದು ಜನರು ಬೇಸರ ವ್ಯಕ್ತಪಡಿಸಿದ್ದಾರೆ. ಹೇಮಾವತಿ ನದಿ ನೀರು ಮಾಗಡಿ ಕೆರೆಗಳಿಗೆ ಹರಿಯಬೇಕಿದೆ ಎಂದು ಹೇಳಿ ರೈತರ ಜೊತೆಯಲ್ಲಿ ನಾವಿರುತ್ತೇವೆ ಎಂಬ ಧೈರ್ಯದ ಮಾತುಗಳನ್ನಾದರೂ ಆಡಬೇಕಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಎರಡೂ ಜಿಲ್ಲೆಯ ರೈತರು ಸೌಹಾರ್ದತೆಯಿಂದ ನೀರು ಹಂಚಿಕೆ ಮಾಡಿಕೊಳ್ಳುವಂತೆ ಮಾತುಕತೆಯ ವೇದಿಕೆ ಸಿದ್ದಪಡಿಸಲು ಸರ್ಕಾರದ ಮೇಲೆ ಒತ್ತಡ ತರಬೇಕಿದೆ.
----------------------------------ಕೋಟ್ ............
ಮಾಗಡಿ ತಾಲೂಕಿನ ಕೆರೆಗಳಿಗಷ್ಟೇ ಅಲ್ಲದೆ ಕನಕಪುರ, ರಾಮನಗರಕ್ಕೂ ಹೇಮೆ ನೀರು ಕೊಂಡೊಯ್ಯುತ್ತಾರೆಂಬುದು ತುಮಕೂರು ಜಿಲ್ಲೆಯ ರೈತರಲ್ಲಿ ಗೊಂದಲವೆಬ್ಬಿಸಿ ಚಳವಳಿ ನಡೆಸುತ್ತಿದ್ದಾರೆ. ತುಮಕೂರು ಜಿಲ್ಲೆ ಮತ್ತು ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಅಡ್ಡಗಾಲು ಹಾಕುವುದು ಸರಿಯಲ್ಲ. ಈಗಾಗಲೇ ಅರ್ಧ ಕಾಮಗಾರಿ ಆಗಿದೆ. ಸೌಹಾರ್ದತೆಯಿಂದ 2 ಜಿಲ್ಲೆ ನಾಯಕರು ಪಕ್ಷಬೇಧ ಮರೆತು ಶ್ರಮಿಸಬೇಕಿದೆ.- ಎಚ್.ಸಿ.ಬಾಲಕೃಷ್ಣ, ಶಾಸಕರು, ಮಾಗಡಿ
ಕೋಟ್ ...........ಈಗಾಗಲೇ ಮುಜರಾಯಿ ಜಾಗದಲ್ಲಿ ಕಾಮಗಾರಿ ಆಗುವುದಕ್ಕೆ ಸರ್ಕಾರದಿಂದ ಅನುಮತಿ ತೆಗೆದುಕೊಂಡು ಕೆಲಸ ನಡೆದಿದೆ. ಈಗ ಮುಂದಿನ ಕಾಮಗಾರಿ ರೈತರ ಜಮೀನಿನಲ್ಲೇ ನಡೆಯಬೇಕಿದೆ. ಅದಕ್ಕಾಗಿ ರೈತರ ಮನವೊಲಿಸಿ, ಪರಿಸ್ಥತಿ ವಿಕೋಪಕ್ಕೆ ಹೋಗುವ ಮುನ್ನ ಸಮಸ್ಯೆಯನ್ನು ಬಗೆಹರಿಸಿಕೊಂಡು ಸರಾಗವಾಗಿ ನೀರು ಹರಿಯುವಂತೆ ಸರ್ಕಾರ ನೋಡಿಕೊಳ್ಳಬೇಕಿದೆ.
- ಟಿ.ಜಿ.ವೆಂಕಟೇಶ್, ಮಾಜಿ ಅಧ್ಯಕ್ಷರು, ತಾಪಂ1ಕೆಆರ್ ಎಂಎನ್ 1,2,3,4.ಜೆಪಿಜಿ
1,2,3.ಹೇಮಾವತಿ ಕಾಮಗಾರಿಗೆ ಸಂಬಂಧಿಸಿದ ಚಿತ್ರಗಳು
4. ಎಚ್.ಸಿ.ಬಾಲಕೃಷ್ಣ