ನಾಟಿ ಕೋಳಿ ಸಾಕಣೆಯಿಂದ ಲಾಭ: ಶಾಸಕ ಯು.ಬಿ. ಬಣಕಾರ

KannadaprabhaNewsNetwork |  
Published : Jun 02, 2025, 01:00 AM IST
ಹಿರೇಕೆರೂರಿನ ಪಶು ಆಸ್ಪತ್ರೆ ಆವರಣದಲ್ಲಿ ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ನಾಟಿ ಕೋಳಿಮರಿಗಳನ್ನು ಶಾಸಕ ಯು.ಬಿ. ಬಣಕಾರ ವಿತರಿಸಿದರು. | Kannada Prabha

ಸಾರಾಂಶ

ಪಶುಪಾಲನಾ ಇಲಾಖೆಯ ಮೂಲಕ ಅಪೌಷ್ಟಿಕತೆ ತಡೆ ಹಾಗೂ ಆದಾಯ ಹೆಚ್ಚಿಸುವ ಕಾರ್ಯಕ್ರಮದಡಿಯಲ್ಲಿ 5 ವಾರದ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡಲಾಗಿದೆ.

ಹಿರೇಕೆರೂರು: ನಾಟಿ ಕೋಳಿ ಸಾಕಾಣಿಕೆಯಿಂದ ಗ್ರಾಮೀಣ ಭಾಗದ ಮಹಿಳೆಯರಿಗೆ ಆರ್ಥಿಕವಾಗಿ ಹೆಚ್ಚು ಅನುಕೂಲವಾಗಲಿದೆ ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ ಗ್ರಾಮೀಣ ಭಾಗದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಮತ್ತು ಸಾಮಾನ್ಯ ವರ್ಗದ ರೈತ ಮಹಿಳೆಯರಿಗೆ ನಾಟಿ ಕೋಳಿಮರಿಗಳನ್ನು ವಿತರಿಸಿ ಮಾತನಾಡಿದರು.ಸರ್ಕಾರ ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸಬಲರಾಗಿಸುವ ನಿಟ್ಟಿನಲ್ಲಿ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಪಶುಪಾಲನಾ ಇಲಾಖೆಯ ಮೂಲಕ ಅಪೌಷ್ಟಿಕತೆ ತಡೆ ಹಾಗೂ ಆದಾಯ ಹೆಚ್ಚಿಸುವ ಕಾರ್ಯಕ್ರಮದಡಿಯಲ್ಲಿ 5 ವಾರದ ನಾಟಿ ಕೋಳಿಮರಿಗಳನ್ನು ವಿತರಣೆ ಮಾಡಲಾಗಿದೆ. ಫಲಾನುಭವಿಗಳು ಸರ್ಕಾರದ ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.ಪಪಂ ಸದಸ್ಯ ಸನಾವುಲ್ಲಾ ಮಕಾನ್ದಾರ್, ಸುರೇಶ ಮಡಿವಾಳರ, ಮಲ್ಲಪ್ಪ ಚಲವಾದಿ, ಮುಖ್ಯ ಪಶು ವೈದ್ಯಾಧಿಕಾರಿ ಡಾ. ಕಿರಣ್ ಎಲ್., ಪಶು ವೈದ್ಯಾಧಿಕಾರಿ ಡಾ. ಕವಿರಾಜ ಐರಣಿ ಸೇರಿದಂತೆ ಫಲಾನುಭವಿಗಳು, ಪಶು ಆಸ್ಪತ್ರೆ ಸಿಬ್ಬಂದಿ ಇದ್ದರು.ಕೃಷಿಕರು ಆರ್ಥಿಕ ಸ್ವಾವಲಂಬಿಗಳಾಗಲಿ

ರಾಣಿಬೆನ್ನೂರು: ನಾವು ಮಾಡುವ ಪ್ರಾಮಾಣಿಕ ಸೇವೆ ಜನರ ಹೃದಯದಲ್ಲಿ ಅಜರಾಮರವಾಗಿ ಉಳಿದಿರಬೇಕು. ಅಂದಾಗ ಸರ್ಕಾರಿ ಕೆಲಸದಲ್ಲಿ ಸೇವೆ ಸಲ್ಲಿಸಿದ್ದಕ್ಕೂ ಸಾರ್ಥಕವಾಗುತ್ತದೆ ಎಂದು ಸೇವಾ ನಿವೃತ್ತಿ ಹೊಂದಿದ ಹಿರಿಯ ಸಹಾಯಕ ತೋಟಗಾರಿಕೆ ಅಧಿಕಾರಿ ಎನ್.ಆರ್. ಹಲಗೇರಿ ತಿಳಿಸಿದರು.ನಗರದ ಸರ್ಕಾರಿ ತೋಟಗಾರಿಕೆ ಇಲಾಖೆಯ ಕಚೇರಿಯಲ್ಲಿ ಸಿಬ್ಬಂದಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿ, ರೈತಾಪಿ ವರ್ಗದವರಿಗೆ ಹಾಗೂ ಜನಸಾಮಾನ್ಯರಿಗೆ ತೋಟಗಾರಿಕೆ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ ಆತ್ಮತೃಪ್ತಿ ನನಗಿದೆ. ತೋಟಗಾರಿಕೆ ಇಲಾಖೆಯಲ್ಲಿರವ ಸೌಲಭ್ಯಗಳನ್ನು ರೈತರು ಸದುಪಯೋಗಪಡೆದುಕೊಂಡು ಆರ್ಥಿಕ ಸ್ವಾವಲಂಬಿಗಳಾಗಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದರು.

ಇಲಾಖೆಯ ಹಿರಿಯ ಅಧಿಕಾರಿಗಳಾದ ವಿಜಯಲಕ್ಷ್ಮಿ, ರಂಗಪ್ಪ, ರಾಜೇಂದ್ರ, ಶಂಕರಪ್ಪ ಆರಿಕಟ್ಟಿ, ಜಗದೀಶ ಹುಲಗೂರ, ಪರಶುರಾಮ ಮೆಳವಂಕಿ, ದತ್ತಾತ್ರೇಯ ಭೂತೆ, ರಜಿಯಾ, ನಿಂಗಪ್ಪ ಐಗಳ, ಹೊನ್ನಪ್ಪ, ಬಸನಗೌಡ, ಭುವನೇಶ್ವರ್, ಶಿವರಾಜ, ಮಲ್ಲಿಕಾರ್ಜುನ, ದೇವರಗಡ್ಡಿ, ದುರಗಪ್ಪ ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ