ಅಂತರ ಪ್ರೌಢಶಾಲಾ ಜನಪದ ಗೀತೆ ಗಾಯನ, ಚರ್ಚಾಸ್ಪರ್ಧೆ ಸಮಾರೋಪ

KannadaprabhaNewsNetwork |  
Published : Oct 19, 2025, 01:00 AM IST
46 | Kannada Prabha

ಸಾರಾಂಶ

ವಿಜಯನಗರದ ಸಂತ ಜೋಸೆಫರ ಕೇಂದ್ರೀಯ ಶಾಲೆಯಲ್ಲಿ ಶನಿವಾರ ನಡೆದ ಅಂತರ ಪ್ರೌಢಶಾಲಾ ಕನ್ನಡ ಚರ್ಚಾ ಸ್ಪರ್ಧೆ

ಕನ್ನಡಪ್ರಭ ವಾರ್ತೆ ಮೈಸೂರುಮಾನವೀಯತೆಯ ಆಂತರ್ಯವನ್ನು ಹೊಂದಿರುವ ನಾವು ಪರಿಸರದ ಪ್ರತಿಯೊಂದು ವಸ್ತುವಿನಲ್ಲಿ ದೇವರನ್ನು ಕಾಣಬೇಕು. ಈ ನಿಸ್ವಾರ್ಥ ಪರಿಸರವನ್ನು ಪೋಷಿಸಬೇಕಾದ್ದದ್ದು ಆದ್ಯ ಕರ್ತವ್ಯವಾಗಿದೆ, ಮುಂದಿನ ಪೀಳಿಗೆಯ ವಿದ್ಯಾರ್ಥಿಗಳು ಸ್ವಚ್ಛವಾದ ಪರಿಸರವನ್ನು ಕಾಪಾಡಿ ಕೊಡಬೇಕಾಗಿದೆ ಎಂದು ಎಂಡಿಇಎಸ್ ನ ವಿಕಾರ್ ಜನರಲ್, ಉಪಾಧ್ಯಕ್ಷ ಮೊನ್ಸೀನಿಯರ್ ಆಲ್ಫ್ರೆಡ್ ಜಾನ್ ಮೆಂಡೋನ್ಸಾ ಹೇಳಿದರು.ಎಂಡಿಇಎಸ್‌ನ ವಜ್ರ ಮಹೋತ್ಸವದ ಅಂಗವಾಗಿ ಹಸಿರು ಪರಿಸರ ಸ್ವಚ್ಛದಾಯಕ ವಲಯ ಧ್ಯೇಯೋದ್ದೇಶದೊಂದಿಗೆ ವಿಜಯನಗರದ ಸಂತ ಜೋಸೆಫರ ಕೇಂದ್ರೀಯ ಶಾಲೆಯಲ್ಲಿ ಶನಿವಾರ ನಡೆದ ಅಂತರ ಪ್ರೌಢಶಾಲಾ ಕನ್ನಡ ಚರ್ಚಾ ಸ್ಪರ್ಧೆ ಮತ್ತು ಜನಪದ ಗೀತೆ ಗಾಯನ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ತೀರ್ಪುಗಾರರಾಗಿ ಗಾಯಕ, ಸಪಸ ಸಂಗೀತ ಶಾಲೆಯ ಶಿಕ್ಷಕ ಪುರುಷೋತ್ತಮ ಕಿರಗಸೂರು, ತ್ತು ಸುಗಮ ಸಂಗೀತ ಗಾಯಕ ಎಂ. ಮೈಸೂರು ಮಹಾಲಿಂಗ, ಸಂತ ಜೋಸೆಫರ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ. ಯಶ್ವಂತ್ ಕುಮಾರ್, ಹಿಂದೂಸ್ತಾನ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪರಮೇಶ ಕೆ. ಉತ್ತನಹಳ್ಳಿ ಭಾಗವಹಿಸಿದ್ದರು. ಬಹುಮಾನ ವಿಜೇತರ ವಿವರಕನ್ನಡ ಚರ್ಚಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ವಿ.ವಿ.ಎಸ್.ಬಿ.ಎಂ ಶಾಲೆಯ ನಾದಶ್ರೀ ಆರ್. ಭಟ್, ದ್ವಿತೀಯ ಬಹುಮಾನವನ್ನು ಕೌಟಿಲ್ಯ ಶಾಲೆಯ ಪೂರ್ವಿಕ ಆನಂದ್, ತೃತೀಯ ಬಹುಮಾನವನ್ನು ಕುಮಾರಿ ಅಚ್ಛೋದ ಎಂ, ಕ್ರೈಸ್ಟ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿ ಪಡೆದುಕೊಂಡರೆ, ಜನಪದ ಗೀತೆ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಭಾರತೀಯ ವಿದ್ಯಾಭವನ ಶಾಲೆಯ ಮಲ್ಲಿಕಾರ್ಜುನ್ ಆರ್. ನಾಯಕ, ದ್ವಿತೀಯ ಬಹುಮಾನವನ್ನು ಅನಂತಗೀತಾ ಶಾಲೆಯ ಪಿ. ಕೃತಿಕ, ತೃತೀಯ ಬಹುಮಾನವನ್ನು ಡಿ. ನಿತೀಶ್, ಭಾರತೀಯ ವಿದ್ಯಾಭವನ ಶಾಲೆಯ ವಿದ್ಯಾರ್ಥಿಗಳು ತಮ್ಮದಾಗಿಸಿಕೊಂಡರು.ಒಟ್ಟಾರೆಯಾಗಿ ಎರಡು ಸ್ಪರ್ಧೆಗಳಲ್ಲಿ ಭಾಗವಹಿಸಿ ಹೆಚ್ಚು ಅಂಕಗಳೊಂದಿಗೆ ಭಾರತೀಯ ವಿದ್ಯಾಭವನ ಶಾಲೆಯು ಸಮಗ್ರ ಬಹುಮಾನ ಪಡೆಯಿತು.ಪ್ರಾಂಶುಪಾಲೆ ಎಲಿಜಬೆತ್ ಎಸ್. ಥಾಮಸ್ ಸ್ವಾಗತಿಸಿದರು.ಕನ್ನಡ ಶಿಕ್ಷಕ ಬಾಗಳಿ ಮಹೇಶ್ ವಂದಿಸಿದರು. 10ನೇ ತರಗತಿಯ ವಿದ್ಯಾರ್ಥಿನಿ ಯಾನ ನಿರೂಪಿಸಿದರು.----------------

PREV

Recommended Stories

ಪಕ್ಷದ ಗೆಲುವಿಗೆ ಕಾರ್ಯಕರ್ತೆಯರು ಶ್ರಮಿಸಿ
ಪ್ರತಿಮೆ ಭಗ್ನಗೊಳಿಸಿದ ಕಿಡಿಗೇಡಿಗಳಿಗೆ ಉಗ್ರ ಶಿಕ್ಷೆ ವಿಧಿಸಿ