ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ನಗರದ ನ್ಯಾಯಾಲಯದ ಆವರಣದಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಮುಖ್ಯ ಅತಿಥಿಯಾಗಿ ಅವರು ಮಾತಾಡಿದರು.
ಮಂಗಳೂರು ಬಾರ್ ಎಸೋಸಿಯೇಷನ್ ಹಾಗೂ ನ್ಯಾಯಾಲಯದ ಉದ್ಯೋಗಿಗಳ ಸಂಘಗಳು ಜಂಟಿಯಾಗಿ ಏರ್ಪಡಿಸಿದ್ದ ಮಹಿಳಾ ದಿನಾಚರಣೆಯನ್ನು ದ.ಕ. ಜಿಲ್ಲಾ ಮತ್ತು ಸೆಷನ್ ಹೆಚ್ಚುವರಿ ನ್ಯಾಯಾಧೀಶೆ ಪ್ರೀತಿ ಕೆ. ಪಿ. ಅವರು ಉದ್ಘಾಟಿಸಿ ಮಾತನಾಡಿದರು.ಮಹಿಳಾ ಹೋರಾಟದ ಹಿನ್ನೆಲೆಯನ್ನು ವಿವರಿಸಿ ಅದಕ್ಕಾಗಿ ಹೋರಾಡಿದ ಮಹಿಳೆಯರನ್ನು ಸ್ಮರಿಸಿದರು.ದಕ್ಷಿಣ ಕನ್ನಡ ಸಾರಿಗೆ ವಿಭಾಗದ ಎಸಿಪಿ ನಜ್ಮಾ ಫಾರೂಕಿ ಮಾತನಾಡಿ, ಇಂದಿನ ಸುಶಿಕ್ಷಿತ ಮಹಿಳೆಯರ ಎದುರು ಅನೇಕ ಸವಾಲುಗಳಿವೆ. ತಮ್ಮ ಆತ್ಮವಿಶ್ವಾಸದಿಂದ ಅವುಗಳನ್ನು ಎದುರಿಸುವ ಛಲ ಹೊಂದಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜ್ಯೋತಿ ವಹಿಸಿದ್ದರು.