ಗಿರಿನಗರ ರಾಮಾಶ್ರಮದಲ್ಲಿನಾಡಿದ್ದು ಗೋದೀಪ, ಪೂಜೆ

KannadaprabhaNewsNetwork |  
Published : Oct 20, 2025, 01:02 AM IST
Raghaveshwara 1 | Kannada Prabha

ಸಾರಾಂಶ

ದೀಪಾವಳಿ ಹಿನ್ನೆಲೆಯಲ್ಲಿ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ಅ.22 ರಂದು ಸಂಜೆ 5 ಗಂಟೆಯಿಂದ ‘ಗೋದೀಪ - ದೀಪಾವಳೀ ವಿಶೇಷ ಗೋಪೂಜೆ’ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ದೀಪಾವಳಿ ಹಿನ್ನೆಲೆಯಲ್ಲಿ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆ ಶ್ರೀರಾಮಾಶ್ರಮದಲ್ಲಿ ಅ.22 ರಂದು ಸಂಜೆ 5 ಗಂಟೆಯಿಂದ ‘ಗೋದೀಪ - ದೀಪಾವಳೀ ವಿಶೇಷ ಗೋಪೂಜೆ’ ನಡೆಯಲಿದೆ. ಶ್ರೀರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದ ರಾಘವೇಶ್ವರ ಸ್ವಾಮೀಜಿ ಅವರು, ಗೋಸಂರಕ್ಷಣೆಯ ಪುಣ್ಯಕಾರ್ಯದಲ್ಲಿ ಎಲ್ಲ ಗೋಪ್ರೇಮಿಗಳು ಭಾಗಿಯಾಗುವಂತೆ ಕರೆ ನೀಡಿದರು.

ಆಹ್ವಾನಿತ ದಂಪತಿಗಳಿಂದ ಏಕಕಾಲಕ್ಕೆ ವಿಶೇಷ ರೀತಿಯಲ್ಲಿ ಸಾಲಂಕೃತ ಗೋವುಗಳಿಗೆ ಪೂಜೆ ನಡೆಯಲಿದ್ದು, ಗೋಮಾತೆಯ ಅನುಗ್ರಹ ಪ್ರಾಪ್ತಿಗಾಗಿ ಗೋಸೂಕ್ತ ಪಾರಾಯಣ, ಗೋಸೂಕ್ತ ಹವನ ನಡೆಯಲಿದೆ. ಶಿವಶ್ರೀ ಸ್ಕಂದಪ್ರಸಾದ್ ಹಾಗೂ ತಂಡದವರಿಂದ ‘ಗೋ ಗಾನಾಮೃತ’ ವಿಶೇಷ ಸಂಗೀತ ಕಾರ್ಯಕ್ರಮ ನಡೆಯಲಿದೆ. ನೂರಾರು ಮಾತೆಯರಿಂದ ಗೋಮಯ ಹಣತೆಯಲ್ಲಿ ಗೋ ಆರತಿ ನಡೆಯಲಿದ್ದು, ಪಾರಂಪರಿಕ ರೀತಿಯಲ್ಲಿ ಗೋಪೂಜೆ ನಡೆಯಲಿದೆ.

ಗೋದೀಪ ಸಂಚಾಲಕ ವಾದಿರಾಜ ಸಾಮಗ ಮಾತನಾಡಿ, ವಿವಿಧ ಕ್ಷೇತ್ರಗಳ 10 ಗಣ್ಯ ದಂಪತಿಗಳಿಂದ 10 ವಿವಿಧ ಭಾರತೀಯ ಗೋತಳಿಗಳಿಗೆ ಪೂಜೆ ಸಲ್ಲಲಿದೆ. ಬಳಿಕ ನೂರಾರು ಮಾತೆಯರಿಂದ ಗೋ ಆರತಿ ನಡೆಯಲಿದೆ. ಬೆಳಗ್ಗೆಯಿಂದ ಸಾರ್ವಜನಿಕ ಗೋಪೂಜೆಗೆ ಅವಕಾಶ ಕಲ್ಪಿಸಲಾಗಿದೆ. ಮಾಹಿತಿಗೆ 9449595215 / 9483787215 ಸಂಪರ್ಕಿಸಬಹುದು ಎಂದರು.

ಹಿರಿಯ ವಕೀಲ ಅರುಣ್ ಶ್ಯಾಮ್, ಶ್ರೀಮಠದ ವಿತ್ತಾಧ್ಯಕ್ಷ ಗಣೇಶ್ ಜಿ.ಎಲ್., ಯೋಜನಾ ಖಂಡದ ಶ್ರೀಸಂಯೋಜಕ ವಿದ್ವಾನ್ ಜಗದೀಶ ಶರ್ಮಾ ಸಂಪ, ಲೋಕಸಂಪರ್ಕ ಖಂಡದ ಶ್ರೀಸಂಯೋಜಕ ರಾಮಚಂದ್ರ ಭಟ್ಟ ಕೆಕ್ಕಾರು ಇದ್ದರು.

ಗಣ್ಯರು ಭಾಗಿ:

ಗೋದೀಪ ದೀಪಾವಳಿ ವಿಶೇಷ ಗೋಪೂಜೆಗೆ ಜಯಶ್ರೀ ಪ್ರತಿನಿಧಿ ಹಾಗೂ ಹೈಕೋರ್ಟ್ ವಿಶ್ರಾಂತ ನ್ಯಾಯಾಧೀಶ ಪಿ.ಎಸ್. ದಿನೇಶ್ ಕುಮಾರ್‌, ಶಿವಶ್ರೀ ಸ್ಕಂದಪ್ರಸಾದ್ ಹಾಗೂ ಸಂಸದ ತೇಜಸ್ವೀ ಸೂರ್ಯ, ಮಂಜುಳಾ ರವಿಸುಬ್ರಹ್ಮಣ್ಯ ಹಾಗೂ ಶಾಸಕ ರವಿಸುಬ್ರಹ್ಮಣ್ಯ ಎಲ್. ಎ., ಖ್ಯಾತ ವಕೀಲರಾದ ಶುಷ್ಮಾ ಅರುಣ್ ಶ್ಯಾಮ್ ಹಾಗೂ ಡಾ. ಅರುಣ್ ಶ್ಯಾಮ್ ಎಂ., ಬಿ. ವಿ. ರುಕ್ಮಾವತಿ ಹಾಗೂ ಡಾ. ನಾ. ಸೋಮೇಶ್ವರ, ಡಾ. ಆರತಿ ವಿ. ಬಿ. ಹಾಗೂ ಶಶಿಕುಮಾರ, ರಾಗಿಣಿ ಶಾಸ್ತ್ರೀ ಹಾಗೂ ವಿದ್ವಾನ್ ಶ್ರೀಕಂಠ ಶಾಸ್ತ್ರೀ, ಶೃತಿ, ಪತ್ರಕರ್ತ ರಮೇಶ್ ದೊಡ್ಡಪುರ, ಜಯಂತಿ ಹಾಗೂ ಕುಮಾರ ಸುಬ್ರಹ್ಮಣ್ಯ ಜಾಗೀರದಾರ್‌, ಜಯಶ್ರೀ ಪ್ರಸಾದ ಹಾಗೂ ಲಕ್ಷ್ಮೀನಾರಾಯಣ ಪ್ರಸಾದ ಪಕಳಕುಂಜ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.

PREV

Recommended Stories

ಖಾಸಗಿ ಸಂಘಟನೆಗಳಿಗೆ ನಿಷೇಧ ಹೇರಿದ್ದು ಜಗದೀಶ್‌ ಶೆಟ್ಟರ್‌ : ಪರಂ
ಕರ್ನಾಟಕಕ್ಕೆ ₹385 ಕೋಟಿ ಕೇಂದ್ರೀಯ ನೆರೆ ಪರಿಹಾರ