ಕನ್ನಡಪ್ರಭ ವಾರ್ತೆ ಯಾದಗಿರಿ
ಈ ಬಗ್ಗೆ ತಕ್ಷಣ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ವಿಶ್ವೇಶ್ವರಯ್ಯ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಪ್ರದೀಪ ಅಣಬಿ ಅವರು ಶಹಾಪುರ ತಹಸೀಲ್ದಾರರಿಗೆ ದೂರು ಸಲ್ಲಿಸಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಿದಂತೆ, ಸದರಿ ಸರ್ವೆ ನಂಬರಿನ ಒಟ್ಟು ವಿಸ್ತೀರ್ಣ 85 ಎಕರೆ ಇದ್ದು, ಅದರಲ್ಲಿ ಸುಮಾರು 22 ಎಕರೆ ಸರ್ಕಾರಿ ಗೈರಾಣ ಭೂಮಿ ಇದೆ. ಈ ಜಾಗದಲ್ಲಿರುವ ಮುರುಮ್ ಅನ್ನು ರಾತ್ರಿ ಸುಮಾರು 11ರ ವೇಳೆ ಬೆಳಗ್ಗೆ 4ರವರೆಗೆ ಅಕ್ರಮವಾಗಿ ಅಗೆದು ಟ್ರ್ಯಾಕ್ಟರ್ಗಳ ಮೂಲಕ ಸಾಗಿಸಲಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಸರ್ಕಾರಿ ಭೂಮಿಯಲ್ಲಿನ ಮುರುಮ್ನ್ನು ಅನುಮತಿಯಿಲ್ಲದೆ ಸಾಗಿಸಿ, ಅಕ್ರಮ ವಹಿವಾಟು ನಡೆಸಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದ್ದಾರೆ.ಸರ್ಕಾರಿ ಗೈರಾಣ ಭೂಮಿಗೆ ಹೊಂದಿಕೊಂಡಿರುವ ಸರ್ವೆ ನಂಬರಿನ ಜಮೀನು ಹೊಂದಿರುವವರ ಸಹಕಾರದೊಂದಿಗೆ ಈ ಕೃತ್ಯ ನಡೆಯುತ್ತಿದೆ ಎಂಬ ಶಂಕೆಯನ್ನೂ ದೂರಿನಲ್ಲಿ ವ್ಯಕ್ತಪಡಿಸಲಾಗಿದೆ. ಈ ಕುರಿತು ಸ್ಥಳದ ಜಿಪಿಎಸ್ ಛಾಯಾಚಿತ್ರಗಳನ್ನು ಸಾಕ್ಷ್ಯವಾಗಿ ದೂರಿನೊಂದಿಗೆ ಲಗತ್ತಿಸಿರುವುದಾಗಿ ಸಂಘದ ಅಧ್ಯಕ್ಷ ತಿಳಿಸಿದ್ದಾರೆ.
ಸರ್ಕಾರಿ ಗೈರಾಣ ಭೂಮಿಯಲ್ಲಿ ಮುಂದಿನ ದಿನಗಳಲ್ಲಿ ಅಕ್ರಮ ಚಟುವಟಿಕೆಗಳು ನಡೆಯದಂತೆ ಸೌರಶಕ್ತಿ ಆಧಾರಿತ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಭೂಮಿಯ ಗಡಿ ಗುರುತಿಸಿ ತಂತಿ ಬೇಲಿ ನಿರ್ಮಿಸಬೇಕು. ಈ ದೂರಿನ ಕುರಿತು ಕೈಗೊಂಡ ಕ್ರಮಗಳ ವಿವರವನ್ನು ಸಂಘಕ್ಕೆ ಲಿಖಿತ ರೂಪದಲ್ಲಿ ನೀಡಬೇಕೆಂದೂ ತಹಸೀಲ್ದಾರರನ್ನು ಕೋರಿದ್ದಾರೆ.
ತಾಲೂಕು ಅಧ್ಯಕ್ಷ ಪ್ರದೀಪ ಅಣಬಿ, ಭೋಜಪ್ಪ ಮುಂಡಾಸ, ಅಂಬ್ರೇಶ ಶಿರವಾಳ, ದೇವು ಹಾದಿಮನಿ, ದೇವರಾಜ ಬೇವಿನಹಳ್ಳಿ, ದೇವಪ್ಪ ಬೇವಿನಹಳ್ಳಿ ಇನ್ನಿತರು ಹಾಜರಿದ್ದರು.