ಗೋಕಾಕ್ ಚಳವಳಿ ಡಾ.ರಾಜ್ ಪ್ರವೇಶದಿಂದಲೇ ಯಶಸ್ವಿ: ಪ್ರಕಾಶರಾಜ್ ಮೇಹು

KannadaprabhaNewsNetwork |  
Published : Nov 07, 2026, 01:45 AM IST
6ಸಿಎಚ್‌ಎನ್54ನಗರದ ಸರ್ಕಾರಿ ಪ್ರಥಮದರ್ಜೆಕಾಲೇಜುಆವರಣದಲಿಕರ್ನಾಟಕ ಸಾಹಿತ್ಯಅಕಾಡೆಮಿ ಹಾಗೂ ಸರ್ಕಾರಿ ಪ್ರಥಮದರ್ಜೆಕಾಲೇಜು ಸಹಯೋಗದಲ್ಲಿಚಕೋರ ಸಾಹಿತ್ಯ ವಿಚಾರ ವೇದಿಕೆಯಡಿ ಹಮ್ಮಿಕೊಂಡಿದ್ದಕನ್ನಡರಾಜ್ಯೋತ್ಸವಆಚರಣೆ ಮತ್ತುಗೋಕಾಕ್ ಚಳವಳಿ ಒಂದು ಅವಲೋಕನ ಕುರಿತ ವಿಶೇಷಉಪನ್ಯಾಸಕಾರ್ಯಕ್ರಮವನ್ನುಕರ್ನಾಟಕರಾಜ್ಯೋತ್ಸವ ಪ್ರಶಸ್ತಿ ಪಡೆದ ಸೋಬಾನೆ ಹಾಡುಗಾರ್ತಿಗೌರಮ್ಮ ಉದ್ಘಾಟಿಸಿದರು. | Kannada Prabha

ಸಾರಾಂಶ

ಗೋಕಾಕ್ ಚಳವಳಿ ಅತ್ಯಂತ ಯಶಸ್ವಿಯಾದದ್ದು ಡಾ.ರಾಜ್‌ಕುಮಾರ್ ಪ್ರವೇಶದಿಂದಾಗಿ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಗೋಕಾಕ್ ಚಳವಳಿ ಅತ್ಯಂತ ಯಶಸ್ವಿಯಾದದ್ದು ಡಾ.ರಾಜ್‌ಕುಮಾರ್ ಪ್ರವೇಶದಿಂದಾಗಿ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ಪ್ರಕಾಶರಾಜ್ ಮೇಹು ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಚಕೋರ ಸಾಹಿತ್ಯ ವಿಚಾರ ವೇದಿಕೆಯಡಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಆಚರಣೆ ಮತ್ತು ಗೋಕಾಕ್ ಚಳವಳಿ ಒಂದು ಅವಲೋಕನ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.

ಕನ್ನಡವನ್ನುಕಡ್ಡಾಯಮೊದಲಭಾಷೆಯನ್ನಾಗಿಮಾಡಬೇಕು ಎಂಬಬೇಡಿಕೆಬಂದಾಗ, 1980ರಜುಲೈ 5ರಂದು ಸರ್ಕಾರ ಸಾಹಿತಿ ವಿ.ಕೃ.ಗೋಕಾಕ್‌ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಯಿತು.

ಸಮಿತಿಯು ಮೂರು ತಿಂಗಳಲ್ಲಿ ವರದಿ ತಯಾರಿಸಿ ಕನ್ನಡಕ್ಕೆಮೊದಲಪ್ರಾಶಸ್ತ್ಯನೀಡಬೇಕು ಮತ್ತು ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಲ್ಲಿಕನ್ನಡಕಡ್ಡಾಯವಾಗಬೇಕುಎಂದುವರದಿನೀಡಿತುಎಂದರು.

ಸರ್ಕಾರ ಈ ವರದಿಯನ್ನು ಜಾರಿಗೆ ತರಲು ಮೀನಮೇಷ ಎಣಿಸಿದಾಗ, ರಾಜ್ಯದಾದ್ಯಂತಕನ್ನಡಿಗರು ಮತ್ತು ಸಾಹಿತಿಗಳು ಪ್ರತಿಭಟನೆಗೆ ಇಳಿದರು. ಕನ್ನಡ ಚಳವಳಿಗಾರರು, ಸಾಹಿತಿಗಳು ಹಾಗು ಇತರರಿಂದ ನಡೆಯುತ್ತಿದ್ದ ಚಳವಳಿ ಅಷ್ಟಾಗಿ ಸುದ್ದಿಯೇನು ಮಾಡಿರಲಿಲ್ಲ. ಚಳವಳಿ ವಿಫಲದ ಹಾದಿ ಹಿಡಿದಿತ್ತು. ಚಳವಳಿಗೆ ಉತ್ತಮ ರೂಪು ಕೊಡುವ, ಚಳವಳಿಯ ಪ್ರಮಾಣವನ್ನು ಅಗಾಧವಾಗಿಸಬಲ್ಲ ವ್ಯಕ್ತಿತ್ವಕ್ಕಾಗಿ ಹುಡುಕಾಟ ಚರ್ಚೆಗಳು ಆರಂಭವಾದವು. ಆಗ ಕಣ್ಣಿಗೆ ಬಿದ್ದದ್ದೇ ಕನ್ನಡದ ಮೇರು ನಟ ಡಾ.ರಾಜ್‌ಕುಮಾರ್ ಎಂದರು,

ಡಾ.ರಾಜ್‌ಕುಮಾರ್ ಚಳವಳಿಗೆ ಇಳಿದಿದ್ದೇ ತಡ,. ಡಾ.ರಾಜ್‌ಕುಮಾರ್‌ಅವರೊಂದಿಗೆಇನ್ನಿತರ ಹಿರಿಯ ಕಲಾವಿದರಾದ ಡಾ.ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಲೋಕೇಶ್, ಇನ್ನು ಮುಂತಾದ ಕಲಾವಿದರು, ನಿರ್ದೇಶಕರು, ನಿರ್ಮಾಪಕರು, ತಂತ್ರಜ್ಞರು ಸಕ್ರಿಯರಾಗಿ ಪಾಲ್ಗೊಂಡರು ಎಂದರು.

ಅತೀದೊಡ್ಡ ಸ್ವರೂಪದಲ್ಲಿ ನಡೆದ ಚಳುವಳಿಗೆ ಕರ್ನಾಟಕ ಸರ್ಕಾರ ಸ್ಪಂದಿಸಿತು. ಆಗಿನ ಕರ್ನಾಟಕದ ಮುಖ್ಯಮಂತ್ರಿ ಆರ್.ಗುಂಡೂರಾವ್ ಚಳವಳಿಯ ಆಗಾಧತೆಯನ್ನು ಕಂಡು ಗೋಕಾಕ್ ಸಮಿತಿ ಸಲ್ಲಿಸಿದ್ದ ವರದಿಯನ್ನು ಪುರಸ್ಕರಿಸಿದರು ಎಂದರು.

ರಾಜಕೀಯವನ್ನು ನಯವಾಗಿ ತಿರಸ್ಕರಿಸಿದ್ದ ಮಹಾನ್ ವ್ಯಕ್ತಿ ರಾಜ್‌ಕುಮಾರ್. ಬೇಡರ ಕಣ್ಣಪ್ಪ ಚಿತ್ರದ ಮೂಲಕ ಚಿತ್ರರಂಗಕ್ಕೆಕಾಲಿಟ್ಟರು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ ಚಿತ್ರಗಳಲ್ಲಿ ಮನಮೋಹಕ ಅಭಿನಯ ಮಾಡಿ, ಕನ್ನಡಿಗರ ಮನಸ್ಸು ಗೆದ್ದಿದ್ದರು. ರಾಜ್ ಕೇವಲ ಕರ್ನಾಟಕದ ಸಾಂಸ್ಕೃತಿಕ ನಾಯಕರಾಗಿ ಉಳಿಯದೇ, ಭಾರತದ ಸಾಂಸ್ಕೃತಿಕ ನಾಯಕರಾಗಿ ಉಳಿದರು ಎಂದರು.

ಹಿರಿಯ ರಂಗಕರ್ಮಿ ಕೆ.ವೆಂಕಟರಾಜು, ಎಲ್ಲ ಕ್ಷೇತ್ರಗಳಲ್ಲೂ ಕನ್ನಡ ಆಡಳಿತ ಭಾಷೆಯಾಗಬೇಕು, ಮೊದಲು ನಮ್ಮ ಮನೆಯಲ್ಲಿ ಮಕ್ಕಳಿಗೆ ಕನ್ನಡ ಮಾತನಾಡುವ ಕೌಶಲ್ಯ ಹೇಳಿಕೊಡಬೇಕು, ಎಲ್ಲ ಭಾಷೆಗಳ ಕಲಿಕೆ ಅಗತ್ಯ, ಕನ್ನಡಭಾಷೆ, ಕನ್ನಡಿಗರ ಅಭಿಮಾನದ ಭಾಷೆಯಾಗಬೇಕು ಎಂದರು.

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸೋಬಾನೆ ಹಾಡುಗಾರ್ತಿ ಗೌರಮ್ಮ, ಕರ್ನಾಟಕ ಜಾನಪದ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪಡೆದ ಗಾಯಕ ಸಿ.ಎಂ.ನರಸಿಂಹಮೂರ್ತಿ ಅವರನ್ನು ಸನ್ಮಾನಿಸಲಾಯಿತು.

ಸರ್ಕಾರಿ ಪ್ರಥಮದರ್ಜೆಕಾಲೇಜಿನಇತಿಹಾಸ ವಿಭಾಗದ ಪ್ರಾಧ್ಯಾಪಕರಾದ ಡಾ.ನೀಲಕಂಠಸ್ವಾಮಿ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕ ಜೆ.ರೋಹಿಣಿ, ಗೆಜೆಟೆಡ್ ಮ್ಯಾನೇಜರ್ ವಿ.ಕೆ.ಪೂರ್ಣಿಮ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಬ್ಬಿಗೆ ಸ್ಥಳೀಯ ರಿಕವರಿ ಆಧಾರದಲ್ಲಿ ನ್ಯಾಯಯುತ ಬೆಲೆ ನೀಡಲು ಆಗ್ರಹ
ಕರ್ತವ್ಯ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ವಹಿಸಿದ್ದರೆ ಸೂಕ್ತ ಕ್ರಮ