ದುಬೈನಲ್ಲಿ ಗೋಕಾಕದ ಒಂದೇ ಕುಟುಂಬ ನಾಲ್ವರು ಸಜೀವ ದಹನ

KannadaprabhaNewsNetwork |  
Published : Aug 31, 2024, 01:33 AM IST
ಅಪಘಾತದಲ್ಲಿ ಮೃತರು ದುಬೈನ ಮಾಲ್ ಒಂದರಲ್ಲಿ ತೆಗೆಸಿಕೊಂಡ ಚಿತ್ರ. | Kannada Prabha

ಸಾರಾಂಶ

ಪ್ರವಾಸಕ್ಕೆಂದು ದುಬೈನ ಓಮನ್‌ಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಸಜೀವ ದಹನಗೊಂಡ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗೋಕಾಕ

ಪ್ರವಾಸಕ್ಕೆಂದು ದುಬೈನ ಓಮನ್‌ಗೆ ತೆರಳಿದ್ದ ಬೆಳಗಾವಿ ಜಿಲ್ಲೆಯ ಗೋಕಾಕ ನಗರದ ಒಂದೇ ಕುಟುಂಬದ ನಾಲ್ವರು ರಸ್ತೆ ಅಪಘಾತದಲ್ಲಿ ಸಜೀವ ದಹನಗೊಂಡ ಘಟನೆ ನಡೆದಿದೆ.

ಗೋಕಾಕ ನಗರದ ನಿವಾಸಿಗಳಾದ ವಿಜಯಾ ಮಾಯಪ್ಪ ತಹಶೀಲ್ದಾರ (52), ಮಗ ಪವನ್‌ಕುಮಾರ್ ಮಾಯಪ್ಪ ತಹಶೀಲ್ದಾರ (22), ಅಳಿಯ ಆದಿಶೇಷ ಬಸವರಾಜ ಉಪ್ಪಾರ (35), ಮಗಳು ಪೂಜಾ ಆದಿಶೇಷ ಪೂಜಾರ (21) ಮೃತರು.

ಆದಿಶೇಷ ಹಾಗೂ ಪೂಜಾ ದಂಪತಿ ದುಬೈನ ಸಲಾಲಾನಲ್ಲಿ ನೆಲೆಸಿದ್ದು, ಗರ್ಭಿಣಿ ಮಗಳನ್ನು ಸೀಮಂತ ಕಾರ್ಯಕ್ಕೆ ಕರೆತರಲು ದುಬೈಗೆ ವಿಜಯಾ, ಮಗ ಪವನಕುಮಾರ್‌ ವಿಸಿಟಿಂಗ್ ವೀಸಾದ ಮೇಲೆ ದುಬೈಗೆ ತೆರಳಿದ್ದರು. ಸೋಮವಾರ ರಾತ್ರಿ 10 ಗಂಟೆಗೆ ಮೃತರ ಕಾರಿನಲ್ಲಿ ಸಾಲಾಲಾದಿಂದ ಮಸ್ಕತ್‌ಗೆ ತೆರಳುತ್ತಿದ್ದ ಸಮಯದಲ್ಲಿ ಎದುರಿನಿಂದ ಬಂದ್‌ ಲಾರಿಗೆ ಡಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡು ಧಗಧಗನೆ ಉರಿದಿದೆ. ಇದರಲ್ಲಿ ನಾಲ್ವರು ಸಜೀವ ದಹನಗೊಂಡಿದ್ದಾರೆ. ಮೃತರ ಶವವನ್ನು ಹೈಮಾ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗೋಕಾಕ ನಗರದಲ್ಲಿರುವ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತರ ಶವಗಳನ್ನು ಭಾರತಕ್ಕೆ ತರಲು ಅನುಕೂಲ ಮಾಡುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹಾಗೂ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಮನವಿ ಮಾಡಿದ್ದಾರೆ.

ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿರುವ ಶಾಸಕ ರಮೇಶ ಜಾರಹೊಳಿ, ಸಂಸದ ಜಗದೀಶ ಶೆಟ್ಟರ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಅವರು ಕೇಂದ್ರ ವಿದೇಶಾಂಗ ಸಚಿವ ಎಸ್. ಜೈ ಶಂಕರ ಹಾಗೂ ಕೇಂದ್ರ ಸಚಿವರನ್ನು ಸಂಪರ್ಕಿಸಿ ಭಾರತೀಯ ರಾಯಭಾರ ಕಚೇರಿಯಿಂದ ಎಲ್ಲ ರೀತಿಯ ನೆರವು ನೀಡಲು ಮನವಿ ಮಾಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಲಮಾವಟಿ ಭಗವತಿ ದೇವಸ್ಥಾನದಲ್ಲಿ ಶಡಾಧರ ಪೂಜಾ ಸಂಪನ್ನ
ಕಡಿಮೆ ಬೆಳೆ ವಿಮಾ ಮೊತ್ತ ಸರಿಪಡಿಸಿ ಮರು ಪಾವತಿಗೆ ಆಗ್ರಹ