ಗೋಕಲ್‌ ದಾಸ್ ಎಕ್ಸ್‌ ಪೋರ್ಟ್ಸ್‌ ನಿಂದ ವೈದ್ಯಕೀಯ ಉಪಕರಣಗಳ ಹಸ್ತಾಂತರ

KannadaprabhaNewsNetwork |  
Published : Feb 24, 2024, 02:36 AM ISTUpdated : Feb 24, 2024, 02:37 AM IST
47 | Kannada Prabha

ಸಾರಾಂಶ

ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಮೊಯಿದ್ದೀನ್ ಮಾತನಾಡಿ, ಕೆ.ಆರ್. ಆಸ್ಪತ್ರೆ ಮೈಸೂರಿನಲ್ಲಿ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಇಲ್ಲಿಗೆ ದಿನನಿತ್ಯ ಸಾವಿರಾರು ರೋಗಿಗಳಿಗೆ ತುಂಬಾ ಅವಶ್ಯಕತೆ ಇರುವ ಈ ಉಪಕರಣಗಳನ್ನು ಹಸ್ತಾಂತರಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದನ್ನು ರೋಗಿಗಳು ವ್ಯವಸ್ಥಿತ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಶಿಸಿದರು.

---ಕನ್ನಡಪ್ರಭ ವಾರ್ತೆ ಮೈಸೂರು

ಗೋಕಲ್‌ ದಾಸ್ ಎಕ್ಸ್‌ ಪೋರ್ಟ್ಸ್ ಚಾರಿಟಬಲ್ ಫೌಂಡೇಷನ್, ಬೆಂಗಳೂರು ವತಿಯಿಂದ ಶುಕ್ರವಾರ ನಗರದ ಕೆ.ಆರ್. ಆಸ್ಪತ್ರೆಗೆ ಸುಮಾರು 15 ಲಕ್ಷ ರು. ಮೌಲ್ಯದ ವೈದ್ಯಕೀಯ ಉಪಕರಣಗಳು, ವಿದ್ಯುತ್‌ ಚಾಲಿತ ಇ-ವಾಹನ ಮತ್ತು ಶುದ್ಧ ಕುಡಿಯುವ ನೀರಿನ ಘಟಕ (ಆರ್.ಓ. ಪ್ಲಾಂಟ್) ಗಳನ್ನು ಹಸ್ತಾಂತರಿಸಲಾಯಿತು.

ವೈದ್ಯಕೀಯ ಉಪಕರಣಗಳನ್ನು ಹಸ್ತಾಂತರಿಸಿ ಮಾತನಾಡಿದ ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಮೊಯಿದ್ದೀನ್ ಮಾತನಾಡಿ, ಕೆ.ಆರ್. ಆಸ್ಪತ್ರೆ ಮೈಸೂರಿನಲ್ಲಿ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದ್ದು, ಇಲ್ಲಿಗೆ ದಿನನಿತ್ಯ ಸಾವಿರಾರು ರೋಗಿಗಳಿಗೆ ತುಂಬಾ ಅವಶ್ಯಕತೆ ಇರುವ ಈ ಉಪಕರಣಗಳನ್ನು ಹಸ್ತಾಂತರಿಸಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಇದನ್ನು ರೋಗಿಗಳು ವ್ಯವಸ್ಥಿತ ರೀತಿಯಲ್ಲಿ ಸದುಪಯೋಗ ಪಡಿಸಿಕೊಳ್ಳಬೇಕೆಂದು ಆಶಿಸಿದರು.

ಮೈಸೂರು ಮೆಡಿಕಲ್ ಕಾಲೇಜು ಹಾಗೂ ರಿಸರ್ಚ್ ಇನ್ಸ್‌ ಟಿಟ್ಯೂಟ್‌ ನ ಡೀನ್ ಮತ್ತು ನಿರ್ದೇಶಕಿ ಡಾ. ದಾಕ್ಷಾಯಿಣಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಗೋಕಲ್‌ದಾಸ್ ಎಕ್ಸ್‌ ಪೋರ್ಟ್ಸ್ ಕಂಪನಿಯವರು ನಮಗೆ ಈ ಕೊಡುಗೆ ನೀಡಿ, ಸಮಾಜ ಸೇವೆ ಮಾಡುತ್ತಿರುವುದು ನಿಜಕ್ಕೂ ಅವಿಸ್ಮರಣೀಯ, ಇದರ ಅವಶ್ಯಕತೆ ನಮಗೆ ಬಹಳ ದಿನಗಳಿಂದ ಇತ್ತು ಎಂದು ತಿಳಿಸಿದರು.

ಆಪರೇಷನ್ ವಿಭಾಗದ ಉಪಾಧ್ಯಕ್ಷ ವಿ. ರಮೇಶ್, ಡಿಜಿಎಂ ಇಎಚ್‌ ಎಸ್ ಮಹಾಂತೇಶ್ ಬಂಗಾರಿ, ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಎಸ್‌.ವಿ. ಮಲ್ಲಿಕಾರ್ಜುನ, ಮೈಸೂರಿನ ಶಾಖೆಯ ಸೀನಿಯರ್ ಎಚ್‌.ಆರ್ ಮ್ಯಾನೇಜರ್ ಶಂಕರ್, ಸಿಬ್ಬಂದಿ ಕೆ.ಎನ್. ಭಾಸ್ಕರ್, ಜನರಲ್ ಮ್ಯಾನೇಜರ್ ಸಿದ್ದೇಶ್ವರಗೌಡ, ಮೆಡಿಕಲ್ ಅಧೀಕ್ಷಕಿ ಡಾ. ಶೋಭಾ ಇದ್ದರು. ಕೆ.ಆರ್. ಆಸ್ಪತ್ರೆಯ ಆರ್‌ಎಂಓ ಡಾ. ನಯಾಪಾಷಾ ಸ್ವಾಗತಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಸಗೊಬ್ಬರ ಬಳಕೆ ಕಡಿಮೆ ಮಾಡಿ : ಸಿಎಂ ಸಲಹೆ
''ತಾಕತ್ತು ಇದ್ದರೆ ನೋಟಿನಲ್ಲಿರುವ ಗಾಂಧೀಜಿಯವರ ಭಾವಚಿತ್ರವನ್ನು ತೆಗೆಯಲಿ''