ಚನ್ನಪಟ್ಟಣ: ಬೊಂಬೆನಾಡಿನ ಡಿ.ಎಸ್.ಸೌಂದರ್ಯ ಕೃಷ್ಣ ಡಿಪಾರ್ಟ್ಮೆಂಟ್ ಆಫ್ ಡೇರಿ ಮೈಕ್ರೋ ಬಯಾಲಜಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಬೀದರ್‌ನಲ್ಲಿ ಇತ್ತೀಚೆಗೆ ನಡೆದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ಬೆಂಗಳೂರಿನ ಹೈನು ವಿಜ್ಞಾನ ಮಹಾವಿದ್ಯಾಲಯದ ವಿದ್ಯಾರ್ಥಿನಿ ಸೌಂದರ್ಯ ಕೃಷ್ಣ, ರಾಜ್ಯಪಾಲರು ಹಾಗೂ ವಿವಿ ಕುಲಾಧಿಪತಿಗಳಾದ ತಾವರ್‌ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು. ಮತ್ತೀಕೆರೆ ಗ್ರಾಮದ ಕೃಷ್ಣಮ್ಮ - ಡಿ.ಎಸ್.ಸೋಮರಾಜು ಶಿಕ್ಷಕ ದಂಪತಿ ಪುತ್ರಿ ಸೌಂದರ್ಯ ಕೃಷ್ಣ. ಚಿನ್ನದ ಪದಕ ಪಡೆದು ತಾಲೂಕಿಗೆ ಕೀರ್ತಿ ತಂದಿರುವ ಸೌಂದರ್ಯ ಕೃಷ್ಣ ಸಾಧನೆಗೆ ಪೋಷಕರು, ತಾಲೂಕಿನ ವಿವಿಧ ಸಂಘ-ಸಂಸ್ಥೆಗಳು ಅಭಿನಂದಿಸಿವೆ. ಸೌಂದರ್ಯಕೃಷ್ಣ ಅವರನ್ನು ದೊಡ್ಡಮಳೂರಿನ ಜೈ ಶ್ರೀಕೃಷ್ಣ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಡಾ.ವರದರಾಜು, ಲಯನ್ ಎಂ.ಎನ್.ಕೃಷ್ಣಕುಮಾರ್, ಭಾರತ್ ವಿಕಾಸ್ ಪರಿಷತ್ ಅಧ್ಯಕ್ಷ ಗುರುಮಾದಯ್ಯ, ಕಾರ್ಯದರ್ಶಿ ಎಸ್.ಶಿವಲಿಂಗಯ್ಯ, ಖಜಾಂಚಿ ವಿ.ಟಿ.ರಮೇಶ್, ಭಾವಿಪ ಉಪಾಧ್ಯಕ್ಷ ವಸಂತಕುಮಾರ್, ಶೈಲಜಾ ಶಿವಾನಂದ್, ಪಾರ್ವತಮ್ಮ ಶಿವಪ್ಪ, ಸೌಭಾಗ್ಯ ತಿಪ್ರೇಗೌಡ, ಕೌಶಲ್ಯ ಕರಿಯಪ್ಪ, ಜಯಲಕ್ಷ್ಮಮ್ಮ ಅಭಿನಂದಿಸಿದ್ದಾರೆ. ಪೊಟೋ೧೮ಸಿಪಿಟಿ೧: ಚನ್ನಪಟ್ಟಣದ ಸೌಂದರ್ಯ ಕೃಷ್ಣ ಬೀದರ್‌ನಲ್ಲಿ ನಡೆದ ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 13ನೇ ಘಟಿಕೋತ್ಸವದಲ್ಲಿ ರಾಜ್ಯಪಾಲ ತಾವರ್‌ಚಂದ್ ಗೆಹ್ಲೋಟ್ ಅವರಿಂದ ಚಿನ್ನದ ಪದಕ ಸ್ವೀಕರಿಸಿದರು.