20 ವಿದ್ಯಾರ್ಥಿಗಳಿಗೆ ಚಿನ್ನದ ಪದಕ

KannadaprabhaNewsNetwork |  
Published : Sep 13, 2026, 01:30 AM IST
ಚಿತ್ರ 12ಬಿಡಿಆರ್55ಎ | Kannada Prabha

ಸಾರಾಂಶ

ಬೀದರ್ ವಿಶ್ವ ವಿದ್ಯಾಲಯದಿಂದ ಶನಿವಾರ ನಡೆದ ಘಟಿಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರ್‌ ಚಂದ ಗೆಹ್ಲೋಟ್ ಚಿನ್ನದ ಪದಕ ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಬೀದರ್

ಬೀದರ್ ವಿಶ್ವ ವಿದ್ಯಾಲಯದಿಂದ ಶನಿವಾರ ನಡೆದ ಘಟಿಕೋತ್ಸವದಲ್ಲಿ ವಿವಿಧ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆದ 20 ವಿದ್ಯಾರ್ಥಿಗಳಿಗೆ ರಾಜ್ಯಪಾಲರಾದ ಥಾವರ್‌ ಚಂದ ಗೆಹ್ಲೋಟ್ ಚಿನ್ನದ ಪದಕ ಪ್ರದಾನ ಮಾಡಿದರು.ಬಿಎಡ ಪದವಿಯಲ್ಲಿ ಬಸವಕಲ್ಯಾಣ ದೊಡ್ಡಪ್ಪ ಅಪ್ಪ ಕಾಲೇಜಿನ ರೇಣುಕಾ, ಪಿಜಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪಲ್ಲವಿ, ಕರ್ನಾಟಕ ಕಾಲೇಜಿನ ಕುಮಾರಿ ನಿಕಿತಾ, ಬಸವೇಶ್ವರ ಕಾಲೇಜು ಬಸವಕಲ್ಯಾಣದ ಭಾಗ್ಯಶ್ರೀ, ಕರ್ನಾಟಕ ಕಾಲೇಜು ಬೀದರಿನ ಜಯಶ್ರೀ, ಬೀದರ್ ವಿಶ್ವ ವಿದ್ಯಾಲಯದ ಅನುಪಮಾ, ಬೀದರ್ ವಿವಿ ಕ್ಯಾಂಪಸ್ಸಿನ ನಂದಿನಿ, ಇರ್ಫಾನಾ ಬೇಗಂ, ಹಾಲಹಳ್ಳಿ ವಿವಿಯ ರವಿಕುಮಾರ, ಗುರು ನಾನಕ ಪದವಿ ಕಾಲೇಜಿನ ಮಹ್ಮದ ಮುಝಮ್ಮಿಲ್, ನೂರ ಕಾಲೇಜಿನ ಸ್ವಾತಿ, ನೌಬಾದ್‌ ವಿದ್ಯಾ ವಿಕಾಸ ಕಾಲೇಜಿನ ಆಶಾ, ಕರ್ನಾಟಕ ಕಾಲೇಜಿನ ನೀದಾ ಹಬೀಬಾ, ಭಾಲ್ಕಿ ಸಿಬಿ ಕಾಲೇಜಿನ ಸೋನಿಯಾ ಪಾಟೀಲ್, ಗುರು ನಾನಕ ಪದವಿ ಕಾಲೇಜಿನ ಸೈಯದಾ ಮಾರಿಯಾ ಫಾತೀಮಾ, ನೌಬಾದ್‌ ಪ್ರಥಮ ದರ್ಜೆ ಕಾಲೇಜಿನ ಮೇಹರೀನ್ ಅಮೀನ್ , ಬೀದರ್ ವಿವಿ ಹಾಲಹಳ್ಳಿ ಯ ಮನೀಷಾ, ಭಾಲ್ಕಿ ಸಿಬಿ ಕಾಲೇಜಿನ ದಿವ್ಯಾ, ಹಾಗೂ ಕರ್ನಾಟಕ ಕಾಲೇಜು ಬೀದರಿನ ಸೈಯದಾ ಮೇಹಮೂದಾ ಬೇಗಂ ಅವರಿಗೆ ರಾಜ್ಯಪಾಲರು ಚಿನ್ನದ ಪದಕ ಪ್ರದಾನ ಮಾಡಿದರು. ಕಾರ್ಯಕ್ರಮದ ನಂತರ ಒಟ್ಟು 112 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಬೀದರ್ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೊ.ಬಿ.ಎಸ್.ಬಿರಾದಾರ, ನ್ಯಾಯಮೂರ್ತಿಗಳಾದ ಡಾ.ಕೃಷ್ಣ ಎಸ್ ದೀಕ್ಷಿತ್‌, ಕುಲಸಚಿವರಾದ ಡಾ.ಪರಮೇಶ್ವರ ನಾಯಕ, ಸಿಂಡಿಕೇಟ್ ಸದಸ್ಯರಾದ ನಾಗಭೂಷಣ ಕಮಠಾಣೆ, ಶಾಂತಲಿಂಗ, ಶಿವನಾಥ ಪಾಟೀಲ್, ವಿಠಲದಾಸ್ ಪ್ಯಾಗೆ, ವೈಷ್ಣವಿ ಪಾಟೀಲ್, ಸಚಿನ್ ಮಲ್ಕಾಪುರೆ, ಅಬ್ದುಲ್ ಸತ್ತಾರ್, ವಿವಿಧ ವಿಭಾಗಗಳ ಡೀನ್ ಗಳಾದ ಡಾ.ರವಿಂದ್ರನಾಥ ಗಬಾಡಿ, ಡಾ. ಜಯಕುಮಾರ ಶಿಂಧೆ, ಡಾ.ಶರಣಪ್ಪ ಮಲಗೊಂಡ, ಡಾ. ರೂತಾ ಹಾಗೂ ಡಾ. ಮಲ್ಲಿಕಾರ್ಜುನ ಸಿ ಕನಕಟ್ಟೆ, ಅಕಾಡೆಮಿಕ ಕೌನ್ಸಿಲ್ ಸದಸ್ಯರಾದ ಡಾ.ಗೀರಿರಾವ ಕುಲಕರ್ಣಿ, ಡಾ.ಹೇಮಾವತಿ ಪಾಟೀಲ್, ಡಾ.ಮಲ್ಲಿಕಾರ್ಜುನ ಕಾಂಬಳೆ. ಡಾ. ಗಂಗಶೆಟ್ಟಿ ಬಿರಾದಾರ್‌, ಡಾ.ಸ್ಟಾನ್ಲಿ ಸ್ಯಾಮವೇಲ್, ಡಾ.ಶಿವಕುಮಾರ ಪಾಟೀಲ್, ಡಾ. ವೇದ ಪ್ರಕಾಶ ಆರ್ಯ, ಡಾ.ಗೋಪಾಲ್ ಬಡಿಗೇರ ಸೇರಿದಂತೆ ಇತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಜಾಪ್ರಭುತ್ವದಲ್ಲಿ ಯುವ ಮತದಾರರ ಪಾತ್ರ ಮಹತ್ವದ್ದು: ಡಾ.ಕುಮಾರ
ಹಿರೇಮಠ ಸಂಸ್ಥಾನ ಆಧ್ಯಾತ್ಮ ಸಂಸ್ಕಾರದ ನೆಲೆಗಟ್ಟು: ಹಾವಗಿ ಲಿಂಗೇಶ್ವರಶ್ರೀ