ಹಿರೇಮಠ ಸಂಸ್ಥಾನವು ನಂಬಿ ಬರುವ ಭಕ್ತರ ಕಷ್ಟಗಳನ್ನು ದೂರ ಮಾಡಿ, ಆಧ್ಯಾತ್ಮಿಕತೆ ಹಾಗೂ ಸಂಸ್ಕಾರದ ನೆಲೆಗಟ್ಟಾಗಿ ಬೆಳೆದು ಬಂದಿದೆ ಎಂದು ಹಲಬರ್ಗಾ ಹಾಗೂ ಹೈದ್ರಾಬಾದ್ ಶಿವಣಿ ಮಠದ ಪರಮಪೂಜ್ಯ ಹಾವಗಿ ಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಹಿರೇಮಠ ಸಂಸ್ಥಾನವು ನಂಬಿ ಬರುವ ಭಕ್ತರ ಕಷ್ಟಗಳನ್ನು ದೂರ ಮಾಡಿ, ಆಧ್ಯಾತ್ಮಿಕತೆ ಹಾಗೂ ಸಂಸ್ಕಾರದ ನೆಲೆಗಟ್ಟಾಗಿ ಬೆಳೆದು ಬಂದಿದೆ ಎಂದು ಹಲಬರ್ಗಾ ಹಾಗೂ ಹೈದ್ರಾಬಾದ್ ಶಿವಣಿ ಮಠದ ಪರಮಪೂಜ್ಯ ಹಾವಗಿ ಲಿಂಗೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಲಾಡಗೇರಿ ಹಿರೇಮಠ ಸಂಸ್ಥಾನದಲ್ಲಿ ಪರ್ವತಲಿಂಗ ಶಿವಾಚಾರ್ಯರ 19ನೇ ಪುಣ್ಯ ಸ್ಮರಣೋತ್ಸವ ಹಾಗೂ ವಿಶ್ವ ಶಾಂತಿ ಲೋಕ ಕಲ್ಯಾಣಾರ್ಥವಾಗಿ ಪವಿತ್ರ ಶ್ರಾವಣ ಮಾಸದ ನಿಮಿತ್ಯ ಶ್ರಾವಣ ಸಮಾಪ್ತಿ ಶಿವ ಭಜನೆ, ರುದ್ರಾಭಿಷೇಕ ಇನ್ನಿತರ ಕಾರ್ಯಕ್ರಮಕ್ಕೆ ಉದ್ಘಾಟಿಸಿ ಮಾತನಾಡಿ. ಪರ್ವತಲಿಂಗ ಶಿವಾ ಚಾರ್ಯರು ಸುಮಾರು ನೂರು ವರ್ಷಗಳ ಕಾಲ ಬದುಕಿ ಸಾವಿರಾರು ಭಕ್ತರ ಆರಾಧ್ಯರಾಗಿದ್ದರು. ಈ ಸಂಸ್ಥಾನದೊಂದಿಗೆ ಪವಾಡಗಳ ಇತಿಹಾಸವೂ ಬೆಸೆದುಕೊಂಡಿದೆ ಎಂದು ಹೇಳಿದರು.

ಹಿರೇಮಠ ಸಂಸ್ಥಾನದ ಪರಮ ಪೂಜ್ಯ ಗಂಗಾಧರ ಶಿವಾಚಾರ್ಯರು ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ ಪೂಜಾರಿ, ನಿವೃತ್ತ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ರಮೇಶ ಮೈಲೂರಕರ್, ಸೇರಿದಂತೆ ಗಣ್ಯರು ವೇದಿಕೆಯಲ್ಲಿದ್ದರು.

ಕಾರ್ಯಕ್ರಮದಲ್ಲಿ ಸಿಂಧನಕೇರಿ ಡಾಕುಳಗಿ ಶ್ರೀ, ಚಿಲ್ಲರ್ಗಿ ಶ್ರೀಗಳು, ಜೈಶ್ರೀ ತಾಯಿ, ಮುಖಂಡರಾದ ಮಲ್ಲಪ್ಪ ಹುಲೆಪ್ಪನೋರ್, ಬಂಡೆಪ್ಪಾ ಗೀರಿ, ವೈಜಿನಾಥ ಹಿಪ್ಪಳಗಾಂವ್, ಶರಣಪ್ಪಾ ಮೈಲೂರಕರ್, ಶಿವರಾಜ ಅಷ್ಟೂರೆ, ಅಮೃತರಾವ ವಡ್ಡಿ, ಸುನೀಲ ಭಾವಿಕಟ್ಟಿ, ರವಿ ದುರ್ಗೆ, ವಿಜಯಕುಮಾರ್ ಸೋನಾರೆ, ವಿಶ್ವ ವಡಗಾಂವ್, ಚಂದ್ರಕಾಂತ ಹಳ್ಳಿಖೇಡಕರ್, ಎಂ.ಪಿ. ಮುದಾಳೆ, ಅಂಬ್ರೀಷ ಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.